ಪೂರ್ವ ಲಡಾಕ್ ಸೆಕ್ಟರ್‌ನ ನಾಲ್ಕು ಸ್ಟ್ಯಾಂಡ್‌ಆಫ್ ಪಾಯಿಂಟ್‌ಗಳಲ್ಲಿ ಒಂದಾದ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಮುಖಾಮುಖಿಯಲ್ಲಿ ಭಾರತದ ಸೇನಾಧಿಕಾರಿ ಮತ್ತು ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಹೇಳಿದೆ.
ಸೈನ್ಯದ ಕಮಾಂಡಿಂಗ್ ಅಧಿಕಾರಿ ಮತ್ತು ಇಬ್ಬರು ಸೈನಿಕರು ಸಾವನ್ನಪ್ಪಿರುವ ಘಟನೆಯನ್ನು ದೃಢೀಕರಿಸಿರುವ ರಕ್ಷಣಾ ಸಚಿವಾಲಯವು “ಪರಿಸ್ಥಿತಿಯನ್ನು ತಗ್ಗಿಸಲು ಎರಡು ಕಡೆಯ ಹಿರಿಯ ಮಿಲಿಟರಿ ಅಧಿಕಾರಿಗಳು ಪ್ರಸ್ತುತ ಸ್ಥಳದಲ್ಲಿ ಸಭೆ ನಡೆಸುತ್ತಿದ್ದಾರೆ” ಎಂದು ಹೇಳಿದೆ.
ಕಳೆದ ಕೆಲವು ವಾರಗಳಿಂದ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ಚಕಮಕಿ ನಡೆಯುತ್ತಿತ್ತು. ಚೀನಾವು ಭಾರತದ ಪ್ರದೇಶವನ್ನು ವಶಕ್ಕೆ ಪಡೆದಿತ್ತು ಎಂಬ ಆರೋಪಗಳನ್ನು ಎದುರಿಸುತ್ತಿತ್ತು.
ಈ ಘಟನೆಯು ಭಾರತ ಮತ್ತು ಚೀನಾ ನಡುವಿನ ತಿಕ್ಕಾಟ ಮತ್ತಷ್ಟು ಹೆಚ್ಚಾಗಲು ಕಾರಣವಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ: ಭಾರತ ದುರ್ಬಲ ರಾಷ್ಟ್ರವಲ್ಲ, ಚೀನಾ ಮಾತುಕತೆ ಬಯಸಿದೆ: ರಾಜನಾಥ್ ಸಿಂಗ್


