ಸಿಎಎ ವಿರೋಧಿ ಪ್ರತಿಭಟನೆ ಆಯೋಜಿಸಿದ್ದಕ್ಕೆ ಉತ್ತರ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಶಹನವಾಜ್ ಆಲಂ ಅವರನ್ನು ಸೋಮವಾರ ರಾತ್ರಿ ಯುಪಿ ಪೊಲೀಸರು ಬಂಧಿಸಿದ್ದಾರೆ. ಯುಪಿ ಕಾಂಗ್ರೆಸ್ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆಲಂ ಅವರನ್ನು ಪೊಲೀಸರು ಕರೆದೊಯ್ಯುವುದನ್ನು ಕಾಣಬಹುದಾಗಿದೆ.
ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಮತ್ತು ಹಿರಿಯ ಮುಖಂಡ ಆರಾಧನಾ ಮಿಶ್ರಾ ಅವರ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಜರತ್‌ಗಂಜ್ ಪೊಲೀಸ್ ಠಾಣೆಗೆ ಘೆರಾವ್ ಮಾಡಿದ ನಂತರ, ಯುಪಿ ಪೊಲೀಸರು 2019 ಡಿಸೆಂಬರ್‌ನಲ್ಲಿ ಲಖನೌದ ಪರಿವರ್ಟನ್ ಚೌಕ್‌ನಲ್ಲಿ ಆಯೋಜಿಸಿದ್ದ ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಈ ಬಂಧನ ಮಾಡಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
“ತನಿಖೆಯ ನಂತರ ಉತ್ತರ ಪ್ರದೇಶ ಕಾಂಗ್ರೆಸ್ ಪದಾಧಿಕಾರಿ ಆಗಿರುವ ಆಲಂ ವಿರುದ್ಧ ನಾವು ಸಾಕ್ಷ್ಯಗಳನ್ನು ಕಂಡುಕೊಂಡಿದ್ದೇವೆ. ಅದಕ್ಕಾಗಿಯೇ ನಾವು ಅವರನ್ನು ಬಂಧಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನವನ್ನು ಖಂಡಿಸಿರುವ ಲಲ್ಲು, “ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕುಗಳನ್ನು ಕಸಿದುಕೊಳ್ಳಲು ಯುಪಿ ಪೊಲೀಸರಿಗೆ ಸಾಧ್ಯವಿಲ್ಲ, ಯುಪಿಯಲ್ಲಿ ಪ್ರಜಾಪ್ರಭುತ್ವ ಸತ್ತುಹೋಯಿತೆ?” ಎಂದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರವು ಕಾಂಗ್ರೆಸ್ಸಿಗೆ ಹೆದರುತ್ತಿದೆ ಎಂದು ಯುಪಿ ಕಾಂಗ್ರೆಸ್ ಸಿಸಿಟಿವಿ ದೃಶ್ಯಾವಳಿಗಳನ್ನು ಟ್ವೀಟ್ ಮಾಡಿದೆ.
यूपी की योगी सरकार कांग्रेस द्वारा मुख्य विपक्षी पार्टी के रूप में जनता के मुद्दे उठाए जाने से बुरी तरह परेशान है। कुछ दिनों पहले हमारे अध्यक्ष जी पर फर्जी मुकदमे लगाए गए थे और आज यूपी कांग्रेस अल्पसंख्यक विभाग के अध्यक्ष शाहनवाज आलम जी को यूपी पुलिस संदिग्ध तरीके से उठाकर ले गई। pic.twitter.com/yGq4xzUKS4
— UP Congress (@INCUttarPradesh) June 29, 2020
ರಾತ್ರಿ ಹಜರತ್‌ಗಂಜ್ ಪೊಲೀಸ್ ಠಾಣೆ ಹೊರಗೆ ಬಂಧನದ ವಿರುದ್ಧ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: ಹಿಂದಿಯ ’ಹಾರ್ಟ್ ಲ್ಯಾಂಡ್’ ಉತ್ತರ ಪ್ರದೇಶದ 7.97 ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್!


