Homeಅಂತರಾಷ್ಟ್ರೀಯ59 ಚೀನೀ ಆಪ್‌ಗಳನ್ನು ನೀಷೇಧಿಸಿದ ಭಾರತದ ಕ್ರಮಕ್ಕೆ ಪ್ರತಿಕ್ರಿಯೆ ನೀಡಿದ ಚೀನಾ!

59 ಚೀನೀ ಆಪ್‌ಗಳನ್ನು ನೀಷೇಧಿಸಿದ ಭಾರತದ ಕ್ರಮಕ್ಕೆ ಪ್ರತಿಕ್ರಿಯೆ ನೀಡಿದ ಚೀನಾ!

ಲಡಾಖ್‌ನಲ್ಲಿ ಜೂನ್ 15 ರಂದು ನಡೆದ ಭೀಕರ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವಾಗಿ ಭಾರತ ಸರ್ಕಾರವು 59 ಆಪ್‌ಗಳನ್ನು ನಿಷೇಧಿಸಿದೆ.

- Advertisement -
- Advertisement -

ಚೀನಾಕ್ಕೆ ಸಂಬಂಧಿಸಿದ 59 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಭಾರತದ ಕ್ರಮಕ್ಕೆ ಚೀನಾ ತೀವ್ರವಾಗಿ ಪ್ರತಿಕ್ರಿಯಿಸಿದೆ. “ಈ ಕ್ರಮದ ಬಗ್ಗೆ ಚೀನಾ ಬಲವಾಗಿ ಕಾಳಜಿ ವಹಿಸುತ್ತಿದೆ, ಮತ್ತು ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಚೀನಾದ ವ್ಯವಹಾರಗಳ ಹಕ್ಕುಗಳನ್ನು ಎತ್ತಿಹಿನಾನಡಿಯುವ ಜವಾಬ್ದಾರಿ ಭಾರತಕ್ಕೆ ಇದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಲಡಾಖ್‌ನಲ್ಲಿ ಜೂನ್ 15 ರಂದು ನಡೆದ ಭೀಕರ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವಾಗಿ ಭಾರತ ಸರ್ಕಾರವು 59 ಆಪ್‌ಗಳನ್ನು ನಿಷೇಧಿಸಿದೆ.

ಭಾರತ ನಿಷೇಧಿಸಿರುವ ಅಪ್ಲಿಕೇಶನ್‌ಗಳಲ್ಲಿ ಬೈಟ್‌ಡ್ಯಾನ್ಸ್‌ನ ಜನಪ್ರಿಯ ವೀಡಿಯೊ ಹಂಚಿಕೆ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಮತ್ತು ಟೆನ್ಸೆಂಟ್‌ನ ವೀಚಾಟ್ ಸೇರಿವೆ.

ಮಂಗಳವಾರ ಹೇಳಿಕೆಯಲ್ಲಿ, ಟಿಕ್‌ಟಾಕ್ ತನ್ನ ಬಳಕೆದಾರರ ಬಗ್ಗೆ ಯಾವುದೇ ಮಾಹಿತಿಯನ್ನು ಚೀನಾ ಸರ್ಕಾರ ಸೇರಿದಂತೆ ಯಾವುದೇ ವಿದೇಶಿ ಸರ್ಕಾರಕ್ಕೆ ರವಾನಿಸಿಲ್ಲ ಮತ್ತು ಭವಿಷ್ಯದಲ್ಲಿಯೂ ಹಾಗೆ ಮಾಡುವುದಿಲ್ಲ ಎಂದು ಹೇಳಿದೆ.

ಗಡಿ ಚಕಮಕಿಯನ್ನು ಅನುಸರಿಸಿ ಚೀನಾ ವಿರುದ್ಧ ಭಾರತ ತನ್ನ ನಿಲುವನ್ನು ಕಠಿಣಗೊಳಿಸಿದ ನಂತರ ಈ ಆದೇಶ ಬಂದಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.


ಮತ್ತಷ್ಟು ಸುದ್ದಿಗಳು

ಭಾರತೀಯ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ ಚೀನಾ: ಚೀನಾ ಆಪ್‌ಗಳ ನಿರ್ಬಂಧಕ್ಕೆ ಪ್ರತೀಕಾರ

59 ಚೀನಿ ಆಪ್‌ಗಳ ನಿಷೇಧ: ಸ್ಪಷ್ಟೀಕರಣ ನೀಡಿದ ಟಿಕ್‌ಟಾಕ್

ಟಿಕ್‌‌ಟಾಕ್ ಸೇರಿದಂತೆ 59 ಚೀನಿ ಆಪ್‌ಗಳನ್ನು ನಿಷೇಧಿಸಿದ ಭಾರತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...