ಪ್ರತಿನಿತ್ಯ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಜನರು ತಮ್ಮ ಕೋಪವನ್ನು ತೋರಿಸುತ್ತಿದ್ದಾರೆ ಎಂದು ಹೇಳುವ, ಪೆಟ್ರೋಲ್ ಪಂಪ್ ಅನ್ನು ಧ್ವಂಸ ಮಾಡುವ ವಿಡಿಯೋ ಒಂದು ವೈರಲ್ ಆಗುತ್ತಿದೆ.
#ये_खामोश_मिजाज़ी_तुम्हें_जीने_नहीं_देगी#इज़्ज़त_से_अगर_रहना_है_तो_कोहराम_मचा_दोये देखिये जनता का आक्रोशभड़क चुकी है जनता अब #पेट्रोल #डीज़ल के बढ़ते दाम पे और महंगाई को लेकर कर रही पेट्रोल पंप पर बवाल ,, #_यही_होना_ज़रूरी_है_पूरे_भारत_में_हर_जगह //
Posted by Hansraj Singh Yadav on Wednesday, June 24, 2020
ಜೂನ್ 7 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ನಿರಂತರವಾಗಿ ಏರಿಸುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದ್ದರೂ ಸಹ ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಿರುವುದಕ್ಕೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ವಿಡಿಯೋ ನಿಜವಿರಬಹುದು ಎಂದು ಬಹಳಷ್ಟು ಜನರು ನಂಬಿದ್ದಾರೆ.
ಆದರೆ ಈ ಘಟನೆಯು ಒಡಿಶಾದ ಪುರಿಯಲ್ಲಿ 2018 ರಲ್ಲಿ ನಡೆದಿರುವುದನ್ನು ನಾವು ಕಂಡುಕೊಂಡಿದ್ದೇವೆ. ಜೊತೆಗೆ ಜನಸಮೂಹವು ಪೆಟ್ರೋಲ್ ಪಂಪ್ ಅನ್ನು ಧ್ವಂಸಗೊಳಿಸಿದ್ದು ಬೆಲೆಗಳ ಏರಿಕೆಯಿಂದಲ್ಲ. ಬದಲಿಗೆ ಕಡಿಮೆ ಪೆಟ್ರೋಲ್ ಹಾಕಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜನರು ಪೆಟ್ರೋಲ್ ಪಂಪ್ ಮೇಲೆ ದಾಳಿ ನಡೆಸಿದ್ದರು.
ವೀಡಿಯೊವನ್ನು ಎಚ್ಚರಿಕೆಯಿಂದ ನೋಡಿದಾಗ, ಪೆಟ್ರೋಲ್ ಪಂಪ್ ಯಂತ್ರಗಳಲ್ಲಿ ಗೋಚರಿಸುವ ಹಳದಿ ಬ್ಯಾಂಡ್‌ನಲ್ಲಿ ಕೆಲವು ಪಠ್ಯ ಬರೆಯಲಾಗಿದೆ ಎಂದು ನಾವು ಗಮನಿಸಿದ್ದೇವೆ. ಅದನ್ನು ಜೂಮ್ ಮಾಡಿ ನೋಡಿದರೆ, ಅದು ಒರಿಯಾ ಭಾಷೆಯಲ್ಲಿರುವುದು ತಿಳಿಯುತ್ತದೆ.
ಅದರ ಆಧಾರದಲ್ಲಿ ಹುಡುಕಾಡಿದಾಗ 29 ಸೆಪ್ಟೆಂಬರ್ 2018 ರಿಂದ ಒಡಿಶಾದ ಪುರಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಹಲವು ಪತ್ರಿಕಾ ವರದಿಗಳು ಲಭ್ಯವಿವೆ.
ವರದಿಯ ಪ್ರಕಾರ, ಗ್ರಾಹಕನು ಪೆಟ್ರೋಲ್ ಪಂಪ್‌ಗೆ ತಾನು ಪಾವತಿಸಿದ್ದಕ್ಕಿಂತ ಕಡಿಮೆ ಪೆಟ್ರೋಲ್ ಹಾಕುತ್ತಿದ್ದರು ಎಂದು ಆರೋಪಿಸಿದ್ದಾನೆ. ಇದು ವಾಗ್ವಾದಕ್ಕೆ ಕಾರಣವಾಗಿ ಅಂತಿಮವಾಗಿ ಸ್ಥಳೀಯರು ಪೆಟ್ರೋಲ್ ಪಂಪ್ ಮೇಲೆ ದಾಳಿ ನಡೆಸಿದ್ದಾರೆ. ಕೊನೆಗೆ ಪೊಲೀಸರು ಬಂದು ಪರಿಸ್ಥಿತಿಯನ್ನು ಶಾಂತಗೊಳಿಸಲು, ಜನಸಮೂಹವನ್ನು ನಿಯಂತ್ರಿಸಲು ಲಾಠಿಚಾರ್ಜ್ ಮಾಡಿದರು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಜಿಯೋ ಜಾಹಿರಾತಿನಿಂದ ಶಾರುಖ್ ಖಾನ್‌ನನ್ನು ಕಿತ್ತೆಸೆದರೆ ಮುಖೇಶ್ ಅಂಬಾನಿ ?; ಫ್ಯಾಕ್ಟ್‌ಚೆಕ್


