Homeದಿಟನಾಗರಫ್ಯಾಕ್ಟ್‌ಚೆಕ್: ಭಾರತ-ಚೀನಾ ಸಂಘರ್ಷದ ನಂತರ ಚೀನಾದ ಬೆದರಿಕೆ ಎದುರಿಸಲು ಜಪಾನ್ ಕ್ಷಿಪಣಿಗಳನ್ನು ನಿಯೋಜಿಸಿದೆಯೇ?

ಫ್ಯಾಕ್ಟ್‌ಚೆಕ್: ಭಾರತ-ಚೀನಾ ಸಂಘರ್ಷದ ನಂತರ ಚೀನಾದ ಬೆದರಿಕೆ ಎದುರಿಸಲು ಜಪಾನ್ ಕ್ಷಿಪಣಿಗಳನ್ನು ನಿಯೋಜಿಸಿದೆಯೇ?

ಜಪಾನ್‌ ರಕ್ಷಣಾ ಸಚಿವಾಲಯದ ಪ್ರಕಾರ, ಪೇಟ್ರಿಯಾಟ್ ಸುಧಾರಿತ ಸಾಮರ್ಥ್ಯದ -3  ವಿಭಾಗದ ಸುಧಾರಿತ ಕ್ಷಿಪಣಿಯಾಗಿದೆ. ಪಿಎಸಿ -3 ವಾಯುಗಾಮಿ ಬೆದರಿಕೆಗಳನ್ನು, ನಿರ್ದಿಷ್ಟವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಎದುರಿಸಲು ವಾಯು ರಕ್ಷಣಾ ವ್ಯವಸ್ಥೆಯಾಗಿದೆ.

- Advertisement -
- Advertisement -

ಜೂನ್ 20 ರಂದು ಥೈಲ್ಯಾಂಡ್ ಮೂಲದ ಸುದ್ದಿ ವೆಬ್‌ಸೈಟ್ ಏಷ್ಯಾ ನ್ಯೂಸ್ ‘ಭಾರತದೊಂದಿಗಿನ ಸಂಘರ್ಷದ ನಂತರ ಚೀನಾ ಗಡಿಯಲ್ಲಿ ಜಪಾನ್‌ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿಯೋಜಿಸಿತು’ ಎಂಬ ಶೀರ್ಷಿಕೆಯೊಂದಿಗೆ ಲೇಖನವೊಂದನ್ನು ಪ್ರಕಟಿಸಿತು. ಜಪಾನ್ “ಈ ವರ್ಷದ ಜೂನ್ ವೇಳೆಗೆ ನಾಲ್ಕು ಮಿಲಿಟರಿ ನೆಲೆಗಳಲ್ಲಿ ಪೇಟ್ರಿಯಾಟ್ ಪ್ಯಾಕ್ -3 ಎಂಎಸ್ಇ ಏರ್ ಡಿಫೆನ್ಸ್ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಲಿದೆ” ಎಂದು ಲೇಖನ ಹೇಳಿದೆ. ಅಂದಿನಿಂದ, ಈ ವರದಿಯನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಜೂನ್ 22 ರಂದು, ರಿಪಬ್ಲಿಕ್ ಟಿವಿ (ಆರ್ಕೈವ್) ಏಷ್ಯಾ ಟೈಮ್ಸ್ ವರದಿಯನ್ನು ಆಧರಿಸಿ ಲೇಖನವೊಂದನ್ನು ಪ್ರಕಟಿಸಿತು. ಈ ಲೇಖನವನ್ನು 1,200 ಬಾರಿ ರಿಟ್ವೀಟ್ ಮಾಡಲಾಗಿದೆ.

ಏಷ್ಯಾ ನ್ಯೂಸ್‌ನ ಲೇಖನವನ್ನು ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ, ಬಿಜೆಪಿ ರಾಷ್ಟ್ರೀಯ ಪ್ಯಾನೆಲಿಸ್ಟ್ ರೋಹಿತ್ ಚಾಹಲ್, ಎಬಿಪಿ ಆಂಕರ್ ನಮ್ರತಾ ವಾಗ್ಲೆ, ನಟ ಪ್ರವೀಣ್ ದಬಾಸ್ ಮತ್ತು ಬ್ಲಾಗರ್ ನಾರಾಯಣನ್ ಹರಿಹರನ್ ಕೂಡ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್

ಏಷ್ಯಾ ನ್ಯೂಸ್‌ನ ಲೇಖನದ ಶೀರ್ಷಿಕೆ ಜಪಾನ್ ಚೀನಾ ಗಡಿಯಲ್ಲಿ ಕ್ಷಿಪಣಿಗಳನ್ನು ನಿಯೋಜಿಸಿದೆ ಎಂದು ಹೇಳಿದೆ. ಆದರೆ ತನ್ನ ಪೂರ್ಣ ವರದಿಯಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಇನ್ನು ಭಾರತ-ಚೀನಾ ಸಂಘರ್ಷದ ಬಗ್ಗೆ ಆ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ. ಅದರಲ್ಲಿ “ಜಪಾನ್ ಈ ವರ್ಷದ ಜೂನ್ ವೇಳೆಗೆ ನಾಲ್ಕು ಮಿಲಿಟರಿ ನೆಲೆಗಳಲ್ಲಿ ಪೇಟ್ರಿಯಾಟ್ ಪ್ಯಾಕ್ -3 ಎಂಎಸ್ಇ ಏರ್ ಡಿಫೆನ್ಸ್ ಕ್ಷಿಪಣಿ ವ್ಯವಸ್ಥೆಯ ನಿಯೋಜನೆಯನ್ನು ಜಾರಿಗೆ ತರಲಿದೆ” ಎಂದಷ್ಟೇ ಹೇಳಿದೆ. ಇನ್ನಷ್ಟು ವಿವರವಾಗಿ ನೋಡೋಣ.

1) ಪಿಎಸಿ -3 ಎಂಎಸ್‌ಇ ಎಂದರೇನು?

ಜಪಾನ್‌ ರಕ್ಷಣಾ ಸಚಿವಾಲಯದ ಪ್ರಕಾರ, ಪೇಟ್ರಿಯಾಟ್ ಸುಧಾರಿತ ಸಾಮರ್ಥ್ಯದ -3  ವಿಭಾಗದ ಸುಧಾರಿತ ಕ್ಷಿಪಣಿಯಾಗಿದೆ. ಪಿಎಸಿ -3 ವಾಯುಗಾಮಿ ಬೆದರಿಕೆಗಳನ್ನು, ನಿರ್ದಿಷ್ಟವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಎದುರಿಸಲು ವಾಯು ರಕ್ಷಣಾ ವ್ಯವಸ್ಥೆಯಾಗಿದೆ. ಇದು ಪಿಎಸಿ -3 ರ ಅಪ್‌ಡೇಟ್‌ ಆವೃತ್ತಿಯಾಗಿದ್ದು, ಇದು ದ್ವಿಗುಣ ಶ್ರೇಣಿಯನ್ನು ಹೊಂದಿದೆ. ‘2017 ಡಿಫೆನ್ಸ್ ಆಫ್ ಜಪಾನ್’ ವರದಿಯಿಂದ ಕೆಳಗೆ ಲಗತ್ತಿಸಲಾದ ಗ್ರಾಫಿಕ್, ಪಿಎಸಿ -3 ಎಂಎಸ್‌ಇ ಸುಧಾರಿತ ಶ್ರೇಣಿಯನ್ನು ತೋರಿಸುತ್ತದೆ.

ಜಪಾನ್

2) ಜಪಾನ್ ಪಿಎಸಿ -3 ಎಂಎಸ್‌ಇ ಅನ್ನು ಯಾವಾಗ ನಿಯೋಜಿಸಿತು?

ಜಪಾನ್‌ನ ವಾಯು ಸ್ವರಕ್ಷಣಾ ಪಡೆಯ ಜನರಲ್ ಅಡ್ಮಿರಲ್ ಯೋಶಿನಾರಿ ಮಾರುಮೊ, ಪಿಎಸಿ -3 ಎಂಎಸ್‌ಇ ಅನ್ನು ಮಾರ್ಚ್‌ನಲ್ಲಿ ಉದ್ಘಾಟಿಸಿದ್ದಾರೆ. ಇದನ್ನು ದಿ ಸಾಂಕಿ ನ್ಯೂಸ್, ಟೋಕಿಯೊ ವೆಬ್, ದಿ ಹೊಕ್ಕೈಡೋ ಶಿಂಬುನ್ ಪ್ರೆಸ್ ಮತ್ತು ಹಲವಾರು ಇತರ ಜಪಾನ್ ವೆಬ್‌ಸೈಟ್‌ಗಳು ವರದಿ ಮಾಡಿವೆ.

ರಾಯಿಟರ್ಸ್ 2016ರ ವರದಿಯ ಪ್ರಕಾರ, ಜಪಾನ್ 2020ರ ಟೋಕಿಯೊ ಒಲಿಂಪಿಕ್ಸ್‌ನ ಸಮಯದಲ್ಲಿ ಪಿಎಸಿ -3 ರಿಂದ ಪಿಎಸಿ -3 ಎಂಎಸ್‌ಇಗೆ ಅಪ್‌ಗ್ರೇಡ್ ಮಾಡುತ್ತಿದೆ, ಈ ಪ್ರದೇಶದಲ್ಲಿ ಉತ್ತರ ಕೊರಿಯಾದ ಕ್ಷಿಪಣಿ ಬೆದರಿಕೆಗೆ ಪ್ರತಿಕ್ರಿಯೆಯಾಗಿ ಇದನ್ನು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಮಾರ್ಚ್‌ನಲ್ಲಿಯೇ ಕ್ಷಿಪಣಿಗಳನ್ನು ನಿಯೋಜಿಸಲಾಗಿದ್ದರಿಂದ, ಇದನ್ನು ಇತ್ತೀಚಿನ ಭಾರತ-ಚೀನಾ ವಿವಾದೊಂದಿಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಹೀಗಾಗಿ, ಚೀನಾ ಗಡಿಯಲ್ಲಿ ಪಿಎಸಿ -3 ಎಂಎಸ್‌ಇ ಕ್ಷಿಪಣಿಗಳನ್ನು ನಿಯೋಜಿಸಲಾಗಿದೆ ಎಂಬ ಏಷ್ಯಾ ನ್ಯೂಸ್ ಹೇಳಿಕೆಯು ಸುಳ್ಳು ಮತ್ತು ದಾರಿತಪ್ಪಿಸುವಂತಿದೆ.

3) ಏಷ್ಯಾ ನ್ಯೂಸ್ ಯಾವುದು?

ಏಷ್ಯಾ ನ್ಯೂಸ್ ವೆಬ್‌ಸೈಟ್‌ನಲ್ಲಿನ ಎಲ್ಲಾ ಲೇಖನಗಳ ಬೈಲೈನ್‌ಗಳು ಒಂದೇ ಆಗಿರುತ್ತವೆ. ಇದು ಥೈಲ್ಯಾಂಡ್ ಮೂಲದ ವೆಬ್‌ಸೈಟ್ ಆಗಿದ್ದು ಥೈಲ್ಯಾಂಡ್, ಭಾರತ, ನೇಪಾಳ, ಕಾಂಬೋಡಿಯಾ, ಮ್ಯಾನ್ಮಾರ್, ವಿಯೆಟ್ನಾಂ, ಲಾವೋಸ್ ಮತ್ತು ಇಂಡೋನೇಷ್ಯಾದಿಂದ ಸುದ್ದಿಗಳನ್ನು ಒಳಗೊಂಡಿದೆ ಎಂದು ಹೇಳುತ್ತದೆ. ಆದರೂ ಕಳೆದ ಆರು ತಿಂಗಳಲ್ಲಿ, ಅದರ ಪರಿಶೀಲಿಸದ ಯೂಟ್ಯೂಬ್ ಚಾನೆಲ್‌ನಲ್ಲಿ (ಆರ್ಕೈವ್ ಲಿಂಕ್) ಅಪ್‌ಲೋಡ್ ಮಾಡಲಾದ ಎಲ್ಲಾ ವೀಡಿಯೊಗಳು ಭಾರತಕ್ಕೆ ಸಂಬಂಧಿಸಿವೆ. ವಾಸ್ತವವಾಗಿ, ಕೊನೆಯ ವೀಡಿಯೊವನ್ನು ಹಿಂದಿಯಲ್ಲಿ ಮಾಡಲಾಗಿದ್ದು, ಥೈಲ್ಯಾಂಡ್ ಮೂಲದ ಸುದ್ದಿ ವೆಬ್‌ಸೈಟ್‌ಗೆ ವಿರುದ್ಧವಾಗಿದೆ.

ಈ ಏಷ್ಯಾನ್ಯೂಸ್ ಈ ಲೇಖನದಲ್ಲಿ ತನ್ನ ಸುದ್ದಿಯ ಮೂಲವನ್ನು ಉಲ್ಲೇಖಿಸಿಲ್ಲ. ಅದು ಬೇಕಂತಲೇ ಭಾರತ ಚೀನಾದೊಂದಿಗೆ ಸಂಬಂಧ ಬೆಸೆಯಲು ಈ ಸುಳ್ಳು ಸುದ್ದಿಯನ್ನು ಎಣೆದಿದೆ ಎಂದು ಆಲ್ಟ್‌ನ್ಯೂಸ್‌ ವಿವರವಾಗಿ ಫ್ಯಾಕ್ಟ್‌ಚೆಕ್ ನಡೆಸಿದೆ.

ಕೃಪೆ: ಆಲ್ಟ್‌ನ್ಯೂಸ್


ಇದನ್ನೂ ಓದಿ: ಜಿಯೋ ಜಾಹಿರಾತಿನಿಂದ ಶಾರುಖ್ ಖಾನ್‌ನನ್ನು ಕಿತ್ತೆಸೆದರೆ ಮುಖೇಶ್ ಅಂಬಾನಿ ?; ಫ್ಯಾಕ್ಟ್‌ಚೆಕ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...