ಮುಖ್ಯಮಂತ್ರಿಗಳೆ ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರದ ದಾಖಲೆ ಕೇಳ್ತಿದ್ದಿರಲ್ಲಾ, ಅವು ನಿಮ್ಮ ಪಕ್ಷದ ಮಾಜಿ ಸಚಿವ ಮುರುಗೇಶ್ ನಿರಾಣಿ ಬಳಿ ಇರುವ ಪೆನ್ ಡ್ರೈವ್‌ನಲ್ಲಿ ಇದೆಯಂತೆ, ಕಲೆಕ್ಟ್ ಮಾಡ್ಕೊಳ್ಳಿ. ಅವರೇ PAC ಸಭೆಯಲ್ಲಿ ಹೇಳಿದ್ದು ಎಂದು ವಿರೋಧ ಪಕ್ಷದ ಸಿದ್ದರಾಮಯ್ಯ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಚಿವರಾದ ಬಿ.ಶ್ರೀರಾಮುಲು, ಡಾ.ಕೆ ಸುಧಾಕರ್ ಮತ್ತು ಗೋವಿಂದ ಕಾರಜೋಳರವರನ್ನು ಟ್ಯಾಗ್ ಮಾಡಿರುವ ಸಿದ್ದರಾಮಯ್ಯನವರು ಇದು ಹಂಡ್ರೆಡ್ ಪರ್ಸೆಂಟ್ ಕರಪ್ಟ್ ಸರ್ಕಾರ್ ಎಂಬ ಹ್ಯಾಸ್‌ಟ್ಯಾಗ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರದ ದಾಖಲೆ ಕೇಳ್ತಿದ್ದಿರಲ್ಲಾ @CMofKarnataka ,@sriramulubjp @mla_sudhakar @GovindKarjol,
ನಿಮ್ಮ ಪಕ್ಷದ ಮಾಜಿ ಸಚಿವ @MurugeshNirani ಬಳಿ ಇರುವ ಪೆನ್ ಡ್ರೈವ್‌ನಲ್ಲಿ ಇದೆಯಂತೆ,
ಕಲೆಕ್ಟ್ ಮಾಡ್ಕೊಳ್ಳಿ.
ಅವರೇ PAC ಸಭೆಯಲ್ಲಿ ಹೇಳಿದ್ದು.#100PercentCorruptSarkar pic.twitter.com/skSBL3sVYt— Siddaramaiah (@siddaramaiah) July 8, 2020
ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ನಡಾವಳಿಯ ಪುಟವೊಂದನ್ನು ಲಗತ್ತಿಸಿರುವ ಅವರು, ಅದರಲ್ಲಿ ಕೊರೊನಾ ಸಂಬಂಧಿತ ವೈದ್ಯಕೀಯ ಸಾಮಗ್ರಿಗಳ ಖರೀದಿ ವಿಚಾರದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಅಧಿಕಾರಿಯೊಬ್ಬರು ಪೆನ್‌ಡ್ರೈವ್‌ನಲ್ಲಿ ಮಾಹಿತಿ ಕೊಟ್ಟಿದ್ದಾರೆ ಎಂದು ಮುರುಗೇಶ್ ನಿರಾಣಿಯವರು ಹೇಳಿರುವುದನ್ನು ಉಲ್ಲೇಖಿಸಿದ್ದಾರೆ.
ಯಡಿಯೂರಪ್ಪನವರೆ, ದಾಖಲೆಗಳನ್ನು ಸಾರ್ವಜನಿಕಗೊಳಿಸಿ. ನಾನು ಪರಿಶೀಲಿಸುತ್ತೇನೆ. ಪಾರದರ್ಶಕತೆಗಾಗಿನ ಒತ್ತಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿಯೂ ಪರಿಸರ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರ


