ರಸ್ತೆಯಲ್ಲಿ ನೂರಾರು ಗುಂಡಿಗಳಿರುವ, ಮಳೆ ನೀರು ತುಂಬಿರುವ ರಸ್ತೆಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದು ಕಾಂಗ್ರೆಸ್ ಮುಂಖಡ ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡ್‌ಗೆ ಸೇರಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಚಿತ್ರಕ್ಕೆ “ರಾಹುಲ್ ಗಾಂಧಿಯ ಕ್ಷೇತ್ರವಾದ ವಯನಾಡ್ ದೇಶದ ಮೊದಲ ಸ್ಮಾರ್ಟ್ ಸಿಟಿಯಾಗಿದ್ದು, ಪ್ರತಿ ಮನೆಯ ಹೊರಗೆ ವಿಭಿನ್ನ ಈಜುಕೊಳಗಳನ್ನು ನಿರ್ಮಿಸಿದ ಮೊದಲ ನಗರವಾಗಿದೆ.” ಎಂಬ ಶೀರ್ಷಿಕೆ ನೀಡಿ ವ್ಯಂಗ್ಯವಾಡಲಾಗಿದೆ.
ಫೇಸ್‌ಬುಕ್ ಬಳಕೆದಾರ ಅಂಕಿತ್ ಅಗ್ರವಾಲ್ ಎಂಬವರು ಪೋಸ್ಟ್ ಮಾಡಿದ ಈ ಚಿತ್ರವು 2,500 ಕ್ಕೂ ಹೆಚ್ಚು ಬಾರಿ ಷೇರ್ ಮಾಡಲಾಗಿದೆ.

ಅದೇ ರೀತಿಯ ನಿರೂಪಣೆಯೊಂದಿಗೆ ಈ ಚಿತ್ರವನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.


ಫ್ಯಾಕ್ಟ್‌ಚೆಕ್:
ಈ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ ಇದೇ ಚಿತ್ರವನ್ನು 2017 ರಲ್ಲಿ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ಲೇಖನವೊಂದನ್ನು ಕಾಣಬಹುದಾಗಿದೆ. ಅದರಲ್ಲಿ “ಭಾಗಲ್ಪುರ್ ಎನ್ಎಚ್ -80 ಕೆಟ್ಟ ಸ್ಥಿತಿಯಲ್ಲಿದೆ” ಎಂದು ವರದಿಯಾಗಿದೆ. ಅಂದರೆ ಅದು ಬಿಹಾರ ರಾಜ್ಯಕ್ಕೆ ಸೇರಿದ ಎಂಬುದು ದೃಢಪಟ್ಟಿದೆ.
ಬಿಹಾರದ ರಸ್ತೆಯ ಈ ಹಳೆಯ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಕೇರಳದ ವಯನಾಡ್‌ಗೆ ಸೇರಿದ್ದು ವರದಿ ಪ್ರಕಟಿಸಿದ್ದಾರೆ.

ಇದಲ್ಲದೆ ಇದು ಭಾಗಲ್ಪುರದ ರಸ್ತೆಯ ಹಳೆಯ ಚಿತ್ರ ಎಂದು ಅಲ್ಲಿನ ಸ್ಥಳೀಯ ವರದಿಗಾರ ರಂಜನ್ ದೃಡೀಕರಿಸಿದ್ದಾರೆ. “ಇದು ಹಳೆಯ ಚಿತ್ರವಾಗಿದ್ದು, ಪ್ರಸ್ತುತ ಈಗ ಈ ರಸ್ತೆಯು ಉತ್ತಮವಾಗಿದೆ” ಎಂದು ಅವರು ಹೇಳಿದ್ದಾರೆ.
ಇದು ಮಾತ್ರವಲ್ಲದೆ, 2017ರ ಜುಲೈಯಲ್ಲಿ ಬಿಹಾರದ ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ರಸ್ತೆಯ ಎರಡೂ ಚಿತ್ರಗಳನ್ನು ಟ್ವೀಟ್ ಮಾಡಿ, ಅದರ ಬಗ್ಗೆ ಸುಳ್ಳು ಹರಡಬೇಡಿ ಎಂದು ಮನವಿ ಮಾಡಿದ್ದರು.
"Rumours vs Reality" @ShekharGupta Ji, that's hw Bihar is defamed.Hope u will acknowledge reality. One shd validate facts before retweeting pic.twitter.com/Hy3iuoG1Jg
— Tejashwi Yadav (@yadavtejashwi) July 2, 2017
ಒಟ್ಟಿನಲ್ಲಿ ಬಿಹಾರದ ಹಳೆಯ ಚಿತ್ರವೊಂದುನ್ನ ಕೇರಳದ ವಯನಾಡ್ ಚಿತ್ರ ಎಂದು ತಪ್ಪಾಗಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಓದಿ: ಮೋದಿಯ ಶಿಫಾರಸ್ಸಿನಂತೆ ಈ ಯುವ ವಿಜ್ಞಾನಿಯನ್ನು ಡಿಆರ್‌ಡಿಒಗೆ ಸೇರಿಸಲಾಗಿದೆಯೆ?



Good job