Homeಮುಖಪುಟಸರ್ಕಾರಿ ಬಂಗಲೆ ತೆರವು: ಪ್ರಿಯಾಂಕಾ ಗಾಂಧಿ ಮತ್ತು ಕೇಂದ್ರ ಸಚಿವರ ಜಟಾಪಟಿ

ಸರ್ಕಾರಿ ಬಂಗಲೆ ತೆರವು: ಪ್ರಿಯಾಂಕಾ ಗಾಂಧಿ ಮತ್ತು ಕೇಂದ್ರ ಸಚಿವರ ಜಟಾಪಟಿ

ಪ್ರಿಯಾಂಕಾ ಗಾಂಧಿಗೆ 1997 ರಲ್ಲಿ ಮಂಜೂರು ಮಾಡಿರುವ #35, ಲೋಧಿ ಎಸ್ಟೇಟ್ ಬಂಗಲೆಗೆಯನ್ನು ಖಾಲಿ ಮಾಡುವಂತೆ ಜುಲೈ 1 ರಂದು ಸರ್ಕಾರವು  ನೋಟೀಸ್ ನೀಡಿತ್ತು.

- Advertisement -
- Advertisement -

ಪ್ರಿಯಾಂಕಾ ಗಾಂಧಿಗೆ ನೀಡಿದ್ದ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದ ನಂತರ ವಿವಾದ ದೊಡ್ಡದಾಗಿದೆ. ಈ ವಿಷಯವಾಗಿ ಪ್ರಿಯಾಂಕ ಗಾಂಧಿ ಪರವಾಗಿ ಹಿರಿಯ ಕಾಂಗ್ರೆಸ್ ನಾಯಕರು ವಕಾಲತ್ತು ವಹಿಸಿದ್ದಾರೆ ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ಆರೋಪಿಸಿದರೆ, ಅದನ್ನು ಪ್ರಿಯಾಂಕ ಗಾಂಧಿ ಅಲ್ಲಗಳೆದಿದ್ದು ಅದು ಫೇಕ್ ನ್ಯೂಸ್ ಎಂದು ಟ್ವೀಟ್‌ ಮಾಡಿದ್ದಾರೆ.

“ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉಳಿದುಕೊಂಡಿರುವ ಸರ್ಕಾರದ ಬಂಗಲೆಯನ್ನು ಕಾಂಗ್ರೆಸ್ ಸಂಸದರಿಗೆ ಬಿಟ್ಟುಕೊಡಬೇಕೆಂದು ಪ್ರಬಲ ಕಾಂಗ್ರೆಸ್ ಮುಖಂಡರು ವಿನಂತಿಸಿದ್ದಾರೆ. ಆದರೆ ಪ್ರಿಯಾಂಕಗಾಂಧಿ ಅಲ್ಲಿಯೇ ಉಳಿಯುವ ಸಾಧ್ಯವಿದೆ” ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ಇಂದು ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

ಪ್ರಿಯಾಂಕಾ ಗಾಂಧಿಗೆ 1997ರಲ್ಲಿ ಮಂಜೂರು ಮಾಡಿರುವ #35, ಲೋಧಿ ಎಸ್ಟೇಟ್ ಬಂಗಲೆಯನ್ನು ಖಾಲಿ ಮಾಡುವಂತೆ ಜುಲೈ 1 ರಂದು ಸರ್ಕಾರವು  ನೋಟೀಸ್ ನೀಡಿತ್ತು. ಕಳೆದ ವರ್ಷ ಪ್ರಿಯಾಂಕಾಗೆ ನೀಡಿದ್ದ ವಿಶೇಷ ರಕ್ಷಣೆ ಭದ್ರತಾ ಪಡೆಯನ್ನು ಹಿಂತೆಗೆದುಕೊಂಡ ನಂತರ ಬಂಗಲೆಯನ್ನು ಆಗಸ್ಟ್ 1 ರೊಳಗೆ ಖಾಲಿ ಎಂದು ಕೇಂದ್ರ ನೋಟಿಸ್ ನೀಡಿದೆ.

ಪ್ರಿಯಾಂಕಾ ಗಾಂಧಿ ಕೋರಿಕೆಯ ಮೇರೆಗೆ ಆಕೆಗೆ ವಿಸ್ತರಣೆ ನೀಡಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

“ಇದು ನಕಲಿ ಸುದ್ದಿ. ನಾನು ಸರ್ಕಾರಕ್ಕೆ ಅಂತಹ ಯಾವುದೇ ವಿನಂತಿಯನ್ನು ಮಾಡಿಲ್ಲ. ಜುಲೈ 1 ರಂದು ನನಗೆ ಹಸ್ತಾಂತರಿಸಿದ ಪತ್ರದ ಪ್ರಕಾರ, ಆಗಸ್ಟ್ 1 ರೊಳಗೆ ನಾನು #35, ಲೋಧಿ ಎಸ್ಟೇಟ್ ಬಂಗಲೆಗೆಯನ್ನು ಖಾಲಿ ಮಾಡುತ್ತೇನೆ” ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

ವಸತಿ ಸಚಿವರಾದ ಹರ್ದೀಪ್ ಪುರಿ ಅವರು, “ಸತ್ಯಗಳು ತಮ್ಮಷ್ಟಕ್ಕೆ ತಾನೇ ಮಾತನಾಡುತ್ತವೆ! ಪಕ್ಷದಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿರುವ ಪ್ರಬಲ ಕಾಂಗ್ರೆಸ್ ಮುಖಂಡರು 4 ಜುಲೈ 2020 ರಂದು ಮಧ್ಯಾಹ್ನ 12:05 ಕ್ಕೆ ನನಗೆ ಕರೆ ಮಾಡಿದ್ದರು. #35, ಲೋಧಿ ಎಸ್ಟೇಟ್ ಬಂಗಲೆಗೆಯನ್ನು ಇನ್ನೊಬ್ಬ ಕಾಂಗ್ರೆಸ್‌ ಸಂಸದರಿಗೆ ಮಂಜೂರು ಮಾಡಬೇಕೆಂದು ವಿನಂತಿಸಿದರು” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಿಯಾಂಕಾ ಗಾಂಧಿ, “ಅವರಿಗೆ ಮತ್ತು ನಿಮ್ಮ ಪರಿಗಣನೆಗೆ ಧನ್ಯವಾದಗಳು. ಆದರೆ ವಾಸ್ತವದಲ್ಲಿ ಏನೂ ಬದಲಾವಣೆಯಿಲ್ಲ. ನಾನು ಸರ್ಕಾರಕ್ಕೆ ಅಂತಹ ಯಾವುದೇ ವಿನಂತಿಯನ್ನು ಮಾಡಿಲ್ಲ. ಮಾಡುವುದೂ ಇಲ್ಲ. ನಾನು ಹೇಳಿದಂತೆ, ಆಗಸ್ಟ್ 1 ರೊಳಗೆ ಮನೆ ಖಾಲಿ ಮಾಡುತ್ತೇನೆ” ಎಂದರು.

ಸಚಿವರ ಟ್ವೀಟ್‌ಗೆ ಕಾಂಗ್ರೆಸ್ ಮುಖಂಡ ರಂದೀಪ್ ಸುರ್ಜೆವಾಲಾ ಕೂಡ ಪ್ರತಿಕ್ರಿಯಿಸಿದ್ದರು. ಪ್ರಿಯಾಂಕಾ ಜನರಿಗಾಗಿ ಹೋರಾಡುವವರು. ಅವರಿಗೆ ನಿಮ್ಮ ಸಹಾನುಭೂತಿ ಬೇಕಾಗಿಲ್ಲ. ಹಾಗಾಗಿ ನಿಮ್ಮ ಬಡಿವಾರವನ್ನು ನಿಲ್ಲಿಸಿ. ಆ ಬಂಗಲೆಯನ್ನು ನೀವು ಕಾಂಗ್ರೆಸ್ ಸಂಸದರಿಗೆ ಕೊಡುತ್ತೀರೋ ಅಥವಾ ಬಿಜೆಪಿ ವಕ್ತಾರರಿಗೆ ಕೊಡುತ್ತೀರೋ? ಎಂದು ಪ್ರಶ್ನಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಕೂಡ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿ ಪೋಸ್ಟ್ ಮಾಡಿದ್ದು, ಗಡುವಿಗೆ ಒಂದು ವಾರ ಮೊದಲು ಹೊರಡುವುದಾಗಿ ಹೇಳಿದ್ದಾರೆ.


ಇದನ್ನೂ ಓದಿ: ಉತ್ತರ ಪ್ರದೇಶವನ್ನು ಬಿಜೆಪಿ ’ಅಪರಾಧ ಪ್ರದೇಶ’ವನ್ನಾಗಿ ಮಾಡಿದೆ: ಪ್ರಿಯಾಂಕ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read