ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಗೆಳತಿ ನಟಿ ರಿಯಾ ಚಕ್ರವರ್ತಿ ವಿರುದ್ದ ದೂರು ದಾಖಲಾಗಿದೆ.
ಪಾಟ್ನಾದಲ್ಲಿ ನೆಲೆಸಿರುವ ಸುಶಾಂತ್ ತಂದೆ ತಮ್ಮ ಮಗನ ಸಾವಿಗೆ ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬ ಕಾರಣ ಎಂದು ಆರೋಪಿಸಿದೆ.
ನಟಿ ರಿಯಾ ಹಣಕಾಸು ವಿಚಾರದಲ್ಲಿ ಸುಶಾಂತ್‌ಗೆ ಮೋಸ ಮಾಡಿದ್ದಾರೆ ಹಾಗೂ ಅವರಿಗೆ ಮಾನಸಿಕ ಕಿರುಕುಳ ಕೊಟ್ಟಿದ್ದಾರೆ. ಇದಕ್ಕಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆರೋಪದಲ್ಲಿ ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದ 6 ಸದಸ್ಯರ ಮೇಲೆ ಎಫ್‌ಐಆರ್ ದಾಖಲಾಗಿದೆ.
ನಾಲ್ಕು ಜನರ ಪಾಟ್ನಾ ಪೊಲೀಸ್ ತಂಡ ತನಿಖೆಗಾಗಿ ಮುಂಬೈಗೆ ತೆರಳಿದೆ ಎನ್ನಲಾಗಿದೆ.
ಇದು ಮೊದಲ ಬಾರಿಗೆ ಸುಶಾಂತ್ ಕುಟುಂಬ ಬಹಿರಂಗವಾಗಿ ಹೊರಗೆ ಬಂದು ದೂರು ನೀಡಿದೆ. ಈ ಮೊದಲು ಮುಂಬೈ ಪೊಲೀಸರು ಪ್ರಕರಣ ಬೇಧಿಸುತ್ತಾರೆ ಎಂದು ನಂಬಿತ್ತು.
ರಿಯಾ ಚಕ್ರವರ್ತಿ ಕಳೆದ ತಿಂಗಳು ತನಿಖೆಗಾಗಿ ಸಿಬಿಐ ಮುಂದೆ ಹಾಜರಾಗಿದ್ದರು.
ಸುಶಾಂತ್ ಸಿಂಗ್ ಬಾಲಿವುಡ್‌ನ ಉದಯೋನ್ಮುಖ ನಟನಾಗಿದ್ದು, ಕಳೆದ ತಿಂಗಳು ಅವರು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಓದಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಸಾವು: ಆತ್ಮಹತ್ಯೆ ಶಂಕೆ


