ಸಕ್ರಾ ಆಸ್ಪತ್ರೆಯ ಮ್ಯಾನೆಜ್‌ಮೆಂಟ್ ವಿರುದ್ಧ ದೂರು ದಾಖಲಾದ ಒಂದು ದಿನದ ನಂತರ, ಹಾಸಿಗೆಗಳ ಹಂಚಿಕೆ ಮತ್ತು ಜೂನ್ 23 ರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಆಗುವ ವೆಚ್ಚದ ಕುರಿತು ಆಸ್ಪತ್ರೆಯು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ವಿವರವಾಗಿ ಪತ್ರ ಬರೆದಿದೆ.
ಸರ್ಕಾರದ ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿಗೆ ರೋಗಿಗಳ ಮತ್ತು ಚಿಕಿತ್ಸಾ ವೆಚ್ಚದ ವಿವರ ನೀಡಲು ಆಸ್ಪತ್ರೆಯು ನಿರಾಕರಿಸಿದ್ದರಿಂದ ಜಿಲ್ಲಾಧಿಕಾರಿ ಜಿ ಎನ್ ಶಿವಮೂರ್ತಿ ಆಸ್ಪತ್ರೆಯ ವಿರುದ್ಧ ಮಾರತಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು ಮತ್ತು ಎನ್‌ಡಿಎಂಎ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿತ್ತು.
ನಂತರ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಆಡಳಿತ ಮಂಡಳಿಯು ಅಧಿಕಾರಿಗಳು ಕೋರಿದ ಎಲ್ಲ ವಿವರಗಳನ್ನು ನೀಡಿದೆ.
“ನಿಗದಿತ ಸಮಯದೊಳಗೆ ಅಧಿಕಾರಿಗಳಿಗೆ ನಿಗದಿತ ಸ್ವರೂಪದಲ್ಲಿ ಸಂಬಂಧಿತ ವಿವರಗಳನ್ನು ಒದಗಿಸಲು ನಮಗೆ ಸಾಧ್ಯವಾಗಲಿಲ್ಲ. ಆದರೆ ಅದೇ ದಿನ ನಾವು ಅಗತ್ಯವಿರುವ ಬೆಡ್ ಮ್ಯಾಟ್ರಿಕ್ಸ್ ಅನ್ನು ಮಾರತಹಳ್ಳಿ ಪೊಲೀಸ್ ಠಾಣೆಯಿಂದ ಇನ್ಸ್ಪೆಕ್ಟರ್ ರಮೇಶ್ ಅವರಿಗೆ ಸಲ್ಲಿಸಿದ್ದೇವೆ. ಬಿಲ್ಲಿಂಗ್ ಮಾಹಿತಿಯನ್ನು ಸಹ ನೀಡಲು ನಾವು ಪ್ರಯತ್ನಿಸಿದ್ದೇವೆ, ಆದರೆ ಜೂನ್ 23 ರಿಂದ ನಾವು 50 ಕ್ಕೂ ಹೆಚ್ಚು ಖಾಸಗಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರಿಂದ ಇದಕ್ಕೆ ಸಾಕಷ್ಟು ಲೆಕ್ಕಾಚಾರಗಳು ಇದ್ದರಿಂದ ತಡವಾಯಿತು” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹಾಸಿಗೆಗಳ ಬಗ್ಗೆ ವಿವರಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ಆಸ್ಪತ್ರೆಯು ಸಿದ್ಧವಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.
91 ಎಚ್‌ಡಿಯು / ಆಕ್ಸಿಜನ್ ಹಾಸಿಗೆ, 14 ICU ಹಾಸಿಗೆ, 12 ವೆಂಟಿಲೇಟರ್ ಸುಸಜ್ಜಿತ ಹಾಸಿಗೆಗಳು ಸೇರಿದಂತೆ ಒಟ್ಟು 117 ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ನೀಡಲಾಗುವುದು ಎಂದು ಅದು ಪತ್ರದಲ್ಲಿ ಹೇಳಿದೆ. ಇದು ಆಸ್ಪತ್ರೆಯಲ್ಲಿರುವ 234 ವಿವಿಧ ವಿಭಾಗಗಳ ಹಾಸಿಗೆಯ 50% ಆಗಿದೆ ಎಂದು ಅದು ಹೇಳಿದೆ.
ಆಸ್ಪತ್ರೆಯು ತನ್ನ 56 ಉದ್ಯೋಗಿಗಳು ಕೊರೊನಾ ಪಾಸಿಟಿವ್ ಆಗಿದ್ದಾರೆ. 116 ಮಂದಿಯನ್ನು ಸಂಪರ್ಕತಡೆ ಅಗತ್ಯವಿರುವ ಹೆಚ್ಚಿನ ಅಪಾಯದ ಸಂಪರ್ಕಗಳಾಗಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಜುಲೈ ಅಂತ್ಯದ ವೇಳೆಗೆ ಆಸ್ಪತ್ರೆಯು 300 ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದು ಪತ್ರವು ಹೇಳಿದೆ.
ಇದನ್ನೂ ಓದಿ:


