ಆಗಸ್ಟ್ 5 ರಿಂದ ಕಂಟೈನ್‌ಮೆಂಟ್ ವಲಯಗಳ ಹೊರಗೆ ಇರುವ ಜಿಮ್ ಮತ್ತು ಯೋಗ ಶಾಲೆಗಳನ್ನು ತೆರೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.
65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ-ಅಸ್ವಸ್ಥತೆ(co-morbidities) ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮುಚ್ಚಿದ ಸ್ಥಳಗಳಲ್ಲಿ ಜಿಮ್‌ಗಳನ್ನು ಬಳಸಬಾರದೆಂದು ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿದೆ. ಯೋಗ ಸಂಸ್ಥೆಗಳು ಮತ್ತು ಜಿಮ್ನಾಷಿಯಂಗಳನ್ನು ನಿರ್ವಹಿಸುವ ಸಂಸ್ಥೆಗಳು ಎಲ್ಲಾ ಸದಸ್ಯರು, ಸಂದರ್ಶಕರು ಮತ್ತು ಸಿಬ್ಬಂದಿಗೆ ಅನುಗುಣವಾಗಿ ಸಲಹೆ ನೀಡುವಂತೆ ಕೇಳಿಕೊಳ್ಳಬೇಕು ಎಂದು ಮಾರ್ಗಸೂಚಿ ಹೇಳಿದೆ.
“ಮಾರ್ಗಸೂಚಿಗಳು ಸಿಬ್ಬಂದಿ, ಸದಸ್ಯರು ಮತ್ತು ಸಂದರ್ಶಕರ ನಡುವಿನ ಎಲ್ಲಾ ದೈಹಿಕ ಸಂಪರ್ಕಗಳನ್ನು ಕಡಿಮೆ ಮಾಡಲು ಮತ್ತು ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಅಂತರ, ಇತರ ತಡೆಗಟ್ಟುವಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿವೆ” ಎಂದು ಪ್ರಕಟಣೆ ತಿಳಿಸಿದೆ.
ಓದಿ: ಅನ್‌ಲಾಕ್ 3: ಕರ್ಫ್ಯೂ ಅಂತ್ಯ, ಆಗಸ್ಟ್ ತಿಂಗಳು ಶಾಲೆ ಬಂದ್; ಜಿಮ್, ಯೋಗ ಸಂಸ್ಥೆ ಓಪನ್


