ಉತ್ತರ ಪ್ರದೇಶದ ಅಜಂಘಡ ಜಿಲ್ಲೆಯ ಬನ್ಸ್‌ಗಾಂವ್‌ನಲ್ಲಿ ಮೊದಲ ಬಾರಿಗೆ ಗ್ರಾ.ಪಂ ಮುಖ್ಯಸ್ಥನಾದ ದಲಿತ ಜಾತಿಗೆ ಸೇರಿದ ಸತ್ಯಮೇವ್ ಜಯತ್ ಆಲಿಯಾಸ್ ಪಪ್ಪು ರಾಮ್ ಎಂಬಾತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಆತ ಮೇಲ್ಜಾತಿ ಠಾಕೂರರ ಮಾತು ಕೇಳದಿರುವುದೇ ಕೊಲೆಗೆ ಕಾರಣ ಎಂದು ದಲಿತರು ಆರೋಪಿಸಿದ್ದಾರೆ.
ಬನ್ಸ್‌ಗಾಂವ್‌ನಲ್ಲಿ ಮೇಲ್ಜಾತಿಗಳಿಗಿಂತ ದಲಿತರೆ ಅಧಿಕವಾಗಿರುವ ಪ್ರದೇಶವಾಗಿದೆ. ಇಲ್ಲಿಯ ಗ್ರಾಮ ಪಂಚಾಯ್ತಿಯ ಅಧಿಕಾರವು ಬ್ರಾಹ್ಮಣ ಮತ್ತು ಠಾಕೂರರಿಂದ ದಲಿತರಿಗೆ ವರ್ಗಾಹಿಸಲ್ಪಟ್ಟಿದೆ. ಇದನ್ನು ಸಹಿಸದ ಮೇಲ್ಜಾತಿಯವರು ಕೃತ್ಯವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸತ್ಯಮೇವ್ ಜಯತ್ ಕೊಲೆಯ ನಂತರ ಭಾರೀ ಪ್ರತಿಭಟನೆ ವ್ಯಕ್ತವಾಗಿದ್ದು, ಹಿಂಸಾಚಾರ ಭುಗಿಲೆದ್ದಿದೆ. ಪೊಲೀಸ್ ವಾಹನಕ್ಕೆ ಬೆಂಕಿ ಬಿದ್ದಿದ್ದು ಅದರಡಿ ಸಿಲುಕಿದ ಸೂರಜ್ ಎಂಬ 8 ವರ್ಷದ ಬಾಲಕ ಸಾವನಪ್ಪಿದ್ದಾನೆ.
ಸತ್ಯಮೇವ್ ಹತ್ಯೆಗೆ ಸಂಬಂಧಿಸಿದಂತೆ ವಿವೇಕ್ ಸಿಂಗ್ ಅಲಿಯಾಸ್ ಭೋಲು, ಸೂರ್ಯನ್ಶ್ ಕುಮಾರ್ ದುಬೆ, ಬ್ರಿಜೇಂದ್ರ ಸಿಂಗ್ ಅಲಿಯಾಸ್ ಗಪ್ಪು ಮತ್ತು ವಾಸಿಮ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದುಬೆಯ ವಿರುದ್ಧ ಕೊಲೆ ಯತ್ನ ಸೇರಿದಂತೆ ಇತರ ಐದು ಪ್ರಕರಣಗಳಿವೆ.
ನಾವು ಸತ್ಯಮೇವ್ ಕುಟುಂಬದ ಹೇಳಿಕೆ ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಏನೇ ಕಾರಣವಿದ್ದರೂ ಚುನಾಯಿತ ಪ್ರತಿನಿಧಿಯ ಕೊಲೆಯೂ ಗಂಭೀರ ಅಪರಾಧವಾಗಿದೆ. ಅಲ್ಲದೇ ಸೂರಜ್ ಸಾವಿನ ವಿಷಯವನ್ನು ತನಿಖೆ ಮಾಡಲಾಗುವುದು ಎಂದು ಡಿಐಜಿ ಸುಭಾಸ್ ಚಂದ್ರ ದುಬೆ ತಿಳಿಸಿದ್ದಾರೆ.
ಜಾತಿ ಮತ್ಸರ
ಪಪ್ಪು ರಾಮ್ ತನ್ನ ಹೆಸರನ್ನು ಸತ್ಯಮೇವ್ ಜಯತ್ ಎಂದು ಬದಲಿಸಿಕೊಂಡಿದ್ದರು. ಸಾಕಷ್ಟು ಓದಿಕೊಂಡಿದ್ದ ಅವರು, ಅಮೇರಿಕಾದಲ್ಲಿ ಗುಲಾಮಗಿರಿಯನ್ನು ತೊಲಗಿಸಿದ ಅಂಬ್ರಾಹಂ ಲಿಂಕನ್ ನೆನಪಿಗೆ ತನ್ನ ಸೋದರಳಿಯನಿಗೆ ಲಿಂಕನ್ ಎಂದು ಹೆಸರಿಟ್ಟಿದ್ದಾರೆ. ಮತ್ತೊಬ್ಬ ಸಹೋದರನ ಮಗನಿಗೆ ರಾಮು ರಾಮ್ ಎಂದು ಹೆಸರಿಟ್ಟಿದ್ದನು.
300 ದಲಿತ ಕುಟಂಬಗಳಿರುವ ಬನ್ಸ್‌ಗಾಂವ್‌ನಲ್ಲಿ 30 ಬ್ರಾಹ್ಮಣ ಮತ್ತು 30 ಠಾಕೂರ್ ಕುಟುಂಬಗಳಿವೆ. ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸಹಜವಾಗಿಯೇ ಹಿಂದಿನಿಂದಲೂ ಗ್ರಾಮ ಪ್ರಧಾನ್ ದಲಿತರೇ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಠಾಕೂರ್ ಮತ್ತು ಬ್ರಾಹ್ಮಣರು ದಲಿತರ ವಿರುದ್ಧ ದ್ವೇಷ ಸಾಧಿಸುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಠಾಕೂರರು ಮತ್ತು ಸತ್ಯಮೇವ್ ನಡುವೆ ವಾಗ್ದಾದ ನಡೆದಿತ್ತು. ಅವರು ಸತ್ಯಮೇವ್‌ನ ಕಂಡರೆ ಅಸೂಯೆ ಪಡುತ್ತಿದ್ದರು. ತಮ್ಮ ಮಾತು ಕೇಳದ ಕಾರಣಕ್ಕಾಗಿಯೇ ಸತ್ಯಮೇವ್‌ನನ್ನು ಕೊಂದಿದ್ದಾರೆ ಎಂದು ಸತ್ಯಮೇವ್ ಸೋದರಳಿಯಿ ಲಿಂಕನ್ ಹೇಳಿದ್ದಾರೆ.
ಸೂರ್ಯನ್ಸು ಕುಮಾರ್ ದುಬೆ ಎಂಬಾತ ಈ ಗ್ರಾಮದಲ್ಲಿ ವಾಸವಿಲ್ಲದಿದ್ದರೂ ಸಹ ಪದೇ ಪದೇ ಗ್ರಾ.ಪಂ ಗೆ ಬಂದು ವಾಸಸ್ಥಳ ದೃಢೀಕರಣ ಪತ್ರ ಕೊಡುವಂತೆ ದುಂಬಾಲು ಬಿದ್ದಿದ್ದ. ಕಳೆದ ಒಂದು ವಾರದಲ್ಲಿ ಮೂರು ಬಾರಿ ಬಂದು ಧಮಕಿ ಹಾಕಿದ್ದ. ಆದರೆ ಅವನ ಬೆದರಿಗೆಕೆ ಸತ್ಯಮೇವ್ ಬಗ್ಗಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ಠಾಕೂರರು ಗುಂಡು ಹಾರಿಸಿ ಸತ್ಯಮೇವ್‌ನನ್ನು ಕೊಂದಿದ್ದಾರೆ. ಕೊಲೆಯ ನಂತರ ಸತ್ಯಮೇವ್ ತಾಯಿಯ ಬಳಿ ಹೋಗಿ ಜಾತಿನಿಂದನೆ ಮಾಡಿ ಬೈಯ್ದಿದ್ದಾರೆ. ತಾನೇ ಕೊಂದಿದ್ದಾಗಿ ಹೇಳಿ ಶವವನ್ನು ಹೋಗಿ ನೋಡಿ ಎಂದು ಬೆದರಿಕೆ ಹಾಕಿದ್ದರು ಎಂದು ಲಿಂಕನ್ ಹೇಳಿದ್ದಾರೆ.
ವಿವೇಕ್ ಸಿಂಗ್ ಎಂಬಾತ ಬಂದು ಸತ್ಯಮೇವ್‌ರನ್ನು ತನ್ನ ಬೈಕ್‌ನಲ್ಲಿ ಕರೆದುಕೊಂಡ ಹೋದ. ನಂತರ ವೇಕ್ ಸಿಂಗ್ ಸೂರ್ಯನ್ಶ್ ಕುಮಾರ್ ದುಬೆ, ಬ್ರಿಜೇಂದ್ರ ಸಿಂಗ್ ಮತ್ತು ವಾಸಿಮ್ ಸೇರಿ ಹತ್ಯೆ ಮಾಡಿದ್ದಾರೆ ಎಂದು ಸತ್ಯಮೇವ್ ಪತ್ನಿ ಮುನ್ನಿ ದೇವಿ ಹೇಳಿದ್ದಾರೆಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಅಲ್ಲದೇ ಬಿಜೇಂದ್ರ ಸಿಂಗ್ ಎಂಬ ಆರೋಪಿಯೊಂದಿಗೆ ಕಳೆದ ತಿಂಗಳು ಜಮೀನಿನ ವಿಷಯಕ್ಕೆ ಜಗಳವಾಗಿತ್ತು. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.
ಉತ್ತರ ಪ್ರದೇಶದ 13 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ: ನಾಲಿಗೆ ಕತ್ತರಿಸಿ, ಕಣ್ಣು ಕಿತ್ತ ಪಾಪಿಗಳು


