ಹತ್ತುಲಕ್ಷ ಡಿಸ್‌ಲೈಕ್ ಗಳಿಸಿ, ಪ್ರಧಾನಿ ಮೋದಿಯ ‘ಮನ್-ಕಿ-ಬಾತ್’ ಕಾರ್ಯಕ್ರಮ ದಾಖಲೆ ಬರೆದಿದೆ. ಅದಾಗ್ಯೂ ಡಿಸ್‌ಲೈಕ್‌ಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಪ್ರತಿ ಬಾರಿ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಆದರೆ ಈ ಬಾರಿಯ ಆಗಸ್ಟ್ 30ರ ಮನ್ ಕಿ ಬಾತ್‌ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮೋದಿಯವರ ಜನಪ್ರಿಯತೆ ಕುಸಿದಿದೆ ಎಂಬ ಚರ್ಚೆ ಆರಂಭವಾಗಿತ್ತು.
ಮನ್ ಕಿ ಬಾತ್ ಕಾರ್ಯಕ್ರಮವನ್ನು ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಅಲ್ಲೆ ಅತ್ಯಧಿಕ ಜನ ಡಿಸ್‌ಲೈಕ್ ಮಾಡುವ ಮೂಲಕ ತಮ್ಮ ವಿರೋಧ ದಾಖಲಿಸಿದ್ದಾರೆ. ಈ ವರದಿ ಬರೆಯುವ ವೇಳೆಗೆ ಒಂದೇ ದಿನದಲ್ಲಿ, ಆ ವಿಡಿಯೋಗೆ 3 ಲಕ್ಷ ಜನರು ಲೈಕ್ ಒತ್ತಿದರೆ 10 ಲಕ್ಷ ಜನರು ಡಿಸ್‌ಲೈಕ್ ಒತ್ತುವ ಮೂಲಕ ಮೋದಿಯವರನ್ನು ಮುಜುಗರಕ್ಕೀಡುಮಾಡಿದ್ದಾರೆ.
ಇದನ್ನೂ ಓದಿ: ಮೋದಿಯವರದ್ದೇ ಯೂಟ್ಯೂಬ್‌ನಲ್ಲಿ ಅವರ ಜನಪ್ರಿಯತೆ ಕುಸಿತ: ಮನ್ ಕಿ ಬಾತ್ ತಿರಸ್ಕರಿಸಿದ ವಿದ್ಯಾರ್ಥಿಗಳು!
ಆದರೆ ಇಂದು ಈ ವರದಿ ಬರೆಯುವ ವೇಳೆಗೆ ಡಿಸ್ಲೈಕ್ ಗಳ ಸಂಖ್ಯೆ 1 ಮಿಲಿಯನ್ ದಾಟಿ ದಾಖಲೆ ಬರೆದಿದೆ. ಲೈಕ್ ಗಳ ಸಂಖ್ಯೆ ಕೇವಲ 3 ಲಕ್ಷ ದಾಟಿದೆ.

ಈ ನಡುವೆ ಡಿಸ್‌ಲೈಕ್‌ಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಇದರ ಕುರಿತು ಪ್ರಜಾವಾಣಿ ವರದಿ ಮಾಡಿದೆ.
“ಮಂಗಳವಾರ ಸಂಜೆ 6.30ರಲ್ಲಿ ಪರಿಶೀಲಿಸದಾಗ ಡಿಸ್‌ಲೈಕ್‌ಗಳ ಸಂಖ್ಯೆ 9.92 ಲಕ್ಷ ಇತ್ತು. 7 ಗಂಟೆಯಲ್ಲಿ 9.98 ಲಕ್ಷದಷ್ಟಿತ್ತು. ಆದರೆ ರಾತ್ರಿ 8.40 ರಲ್ಲಿ ಪರಿಶೀಲಿಸಿದಾಗ, ಡಿಸ್‌ಲೈಕ್‌ಗಳ ಸಂಖ್ಯೆ 9.3 ಲಕ್ಷಕ್ಕೆ ಕುಸಿದಿತ್ತು. ಅದು ಹೇಗೆ ಕುಸಿಯಲು ಸಾಧ್ಯ ಎಂದು ಪತ್ರಿಕೆ ಪ್ರಶ್ನಿಸಿದೆ.
ಬಿಜೆಪಿ ಐಟಿ ಸೆಲ್ ದೇಶದಲ್ಲಿ ಅತ್ಯಂತ ಪ್ರಭಾವಿ ಮತ್ತು ವಿಸ್ತೃತ ಜಾಲ ಹೊಂದಿದೆ ಎಂದು ಹೇಳಲಾಗುತ್ತದೆ. ಡಿಸ್‌ಲೈಕ್‌ಗಳಿಗಿಂತ ಲೈಕ್ ಸಂಖ್ಯೆ ಹೆಚ್ಚು ಮಾಡಿ ಅವಮಾನ ತಡೆಯಲು ಬಿಜೆಪಿ ಐಟಿ ಸೆಲ್ ಏನೆಲ್ಲಾ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಒಂದೇ ಸಮನೇ ಡಿಸ್‌ಲೈಕ್‌ಗಳ ಸಂಖ್ಯೆ ಏರತೊಡಗಿದೆ. ಹಾಗಾಗಿ ಕೊನೆಗೆ ಅಧಿಕಾರದ ಪ್ರಭಾವ ಬಳಿಸಿ ಡಿಸ್‌ಲೈಕ್‌ಗಳನ್ನೇ ಇಳಿಸುವ ಕೆಲಸಕ್ಕೆ ಬಿಜೆಪಿ ಕೈಹಾಕಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರವನ್ನು ಯೂಟ್ಯೂಬ್‌ನಲ್ಲಿ ಅತಿಹೆಚ್ಚು ಸಂಖ್ಯೆಯ ಜನರು ಡಿಸ್ ಲೈಕ್ ಮಾಡಿರುವ ಬೆನ್ನಲ್ಲೇ ಟ್ವಿಟರ್ ನಲ್ಲಿ #StudentsDislikePMModi ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿತ್ತು.
ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹೊತ್ತಲ್ಲಿ, ಲಕ್ಷಾಂತರ ವಿದ್ಯಾರ್ಥಿಗಳ, ಹಲವು ರಾಜ್ಯಗಳ ವಿರೋಧದ ನಡುವೆಯೂ NEET ಮತ್ತು JEE ಪರೀಕ್ಷೆಗಳನ್ನು ನಡೆಸಲು ಕೇಂದ್ರ ತಯಾರಿ ನಡೆಸಿರುವುದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಮೋದಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಈಗಾಗಲೇ ಜೆಇಇ ಮತ್ತು ನೀಟ್ ಪರೀಕ್ಷೆಗಳು ಪ್ರಾರಂಭವಾಗಿವೆ. ಆದರೂ ಮನ್-ಕಿ-ಬಾತ್ ವೀಡಿಯೋಗೆ ಡಿಸ್‌ಲೈಕ್‌ಗಳ ಸಂಖ್ಯೆ ಮಾತ್ರ ಒಂದೇ ಸಮನೆ ಏರುತ್ತಿದೆ (ಪ್ರಸ್ತುತ ಹತ್ತುಲಕ್ಷ). ಇದು ಮೋದಿ ಆಡಳಿತದ ವಿರುದ್ಧ ಜನಾಕ್ರೋಶ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: #StudentsDislikePMModi: ವಿದ್ಯಾರ್ಥಿಗಳಿಂದ ಟ್ವಿಟರ್ ನಲ್ಲಿ ಅಭಿಯಾನ ಟ್ರೆಂಡಿಂಗ್


