ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಭಾನುವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. 87 ವರ್ಷದ ಎಚ್.ಡಿ.ದೇವೇಗೌಡ, ಜೂನ್ ತಿಂಗಳಿನಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇವರು 1996 ರ ನಂತರ ಮೇಲ್ಮನೆಯ ಸದಸ್ಯರಾಗಿರುವುದು ಇದೇ ಮೊದಲು.
ಇದನ್ನೂ ಓದಿ: 101.3 ಲಕ್ಷ ಕೋಟಿ ರೂ. ಗೆ ಏರಿದ ಕೇಂದ್ರ ಸರ್ಕಾರದ ಆರ್ಥಿಕ ಹೊರೆ: ಹಣಕಾಸು…
ಸದನದ ಸಭೆಯಲ್ಲಿ, ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು, ‘ಹೊಸದಾಗಿ ಆಯ್ಕೆಯಾದ ಸದಸ್ಯರಿಂದ ಪ್ರಮಾಣ ವಚನ ಸ್ವೀಕರಿಸುವಂತೆ’ ಕರೆ ನೀಡಿದರು. ರಾಜ್ಯಸಭಾ ಸದಸ್ಯರಾಗಿ, ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ದೇವೇಗೌಡರು, ನಂತರ ಕುರ್ಚಿಗೆ ನಮಸ್ಕರಿಸಿದರು.
ಇದನ್ನೂ ಓದಿ: ಬಿಎಸ್‌ವೈಯಿಂದ ಪಕ್ಷದ ಗೌರವ ಹಾಳಾಗುತ್ತಿದೆ, ಅವರ ವಿರುದ್ದ ಕ್ರಮ ಕೈಗೊಳ್ಳಿ: ಶಂಕರ್ ಬಿದರಿ
ವೆಂಕಯ್ಯ ನಾಯ್ಡು, “ನಮ್ಮ ಮನೆಗೆ ಉತ್ತಮ ಸೇರ್ಪಡೆ. ಮಾಜಿ ಪ್ರಧಾನಿ ಮತ್ತು ನಮ್ಮ ದೇಶದ ಹಿರಿಯ-ನಾಯಕರಲ್ಲಿ ಒಬ್ಬರು ನಮ್ಮ ಸದನಕ್ಕೆ ಬಂದಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ಹಿಂದಿ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್


