Homeಮುಖಪುಟಚಿಲ್ ಡೊನಾಲ್ಡ್ ಚಿಲ್!: ಟ್ರಂಪ್ ಟ್ರೋಲ್ ಮಾಡಿ ಸೇಡು ತೀರಿಸಿಕೊಂಡ ಗ್ರೇಟಾ ಥನ್ಬರ್ಗ್!

ಚಿಲ್ ಡೊನಾಲ್ಡ್ ಚಿಲ್!: ಟ್ರಂಪ್ ಟ್ರೋಲ್ ಮಾಡಿ ಸೇಡು ತೀರಿಸಿಕೊಂಡ ಗ್ರೇಟಾ ಥನ್ಬರ್ಗ್!

ಎಷ್ಟೊಂದು ಹಾಸ್ಯಾಸ್ಪದ. ಡೊನಾಲ್ಡ್ ತನ್ನ ಕೋಪ ನಿರ್ವಹಣಾ ಸಮಸ್ಯೆಯ ಬಗ್ಗೆ ಕೆಲಸ ಮಾಡಬೇಕು, ನಂತರ ಸ್ನೇಹಿತನೊಂದಿಗೆ ಹಳೆಯ ಹಳೆಯ ಶೈಲಿಯ ಸಿನಿಮಾಗೆ ಹೋಗಬೇಕು! ಚಿಲ್, ಡೊನಾಲ್ಡ್, ಚಿಲ್!

- Advertisement -
- Advertisement -

11 ತಿಂಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನಿಂದ ಟ್ರೋಲ್‌ಗೊಳಗಾಗಿದ್ದ 17 ವರ್ಷದ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್, ಇಂದು ಸೋಲಿನ ಸನಿಹದಲ್ಲಿರುವ ಟ್ರಂಪ್‌ಗೆ ಅವರು ಬಳಸಿದ ಪದಗಳನ್ನೇ ಬಳಸಿ ಟ್ವೀಟ್ ಮಾಡುವ ಮೂಲಕ, ಭರ್ಜರಿ ಟ್ರೋಲ್ ಮಾಡಿ ಸೇಡು ತೀರಿಸಿಕೊಂಡಿದ್ದಾರೆ.

2019ರಲ್ಲಿ ಟೈಮ್ ಮ್ಯಾಗಜಿನ್‌ನ ವರ್ಷದ ವ್ಯಕ್ತಿಯಾಗಿ ಗ್ರೇಟಾ ಥನ್ಬರ್ಗ್ ಆಯ್ಕೆಯಾಗಿದ್ದರು. ಆಗ ಬಹಳಷ್ಟು ಜನ ಅವರಿಗೆ ಶುಭಾಶಯ ತಿಳಿಸಿದ್ದರು. ಆದರೆ ಟ್ರಂಪ್ ಮಾತ್ರ ಚಿಕ್ಕ ಹುಡುಗಿಯ ವಿರುದ್ಧ ‘ನಿನ್ನ ಅಹಂಕಾರ ಬಿಡು’ ಎಂದು ಟ್ವೀಟ್ ಮಾಡಿ ಅವಮಾನ ಮಾಡಿದ್ದರು.

11 ತಿಂಗಳಿನಿಂದ ತಾಳ್ಮೆಯಿಂದ ಕಾಯ್ದಿದ್ದ ಗ್ರೇಟಾ ಥನ್ಬರ್ಗ್ ಅಂದು ಟ್ರಂಪ್ ಬಳಸಿದ್ದ ಪದಗಳನ್ನೇ ಬಳಸಿ ಟ್ರೋಲ್ ಮಾಡಿದ್ದಾರೆ. ಮತ ಎಣಿಕೆ ನಿಲ್ಲಿಸಿ ಎಂದು ಟ್ರಂಪ್ ಮಾಡಿದ್ದ ಟ್ವೀಟ್‌ಗೆ ಗ್ರೇಟಾ ಹೀಗೆ ಪ್ರತಿಕ್ರಿಯೆ ನೀಡಿದ್ದಾಳೆ.

“ಎಷ್ಟೊಂದು ಹಾಸ್ಯಾಸ್ಪದ. ಡೊನಾಲ್ಡ್ ತನ್ನ ಕೋಪ ನಿರ್ವಹಣಾ ಸಮಸ್ಯೆಯ ಬಗ್ಗೆ ಕೆಲಸ ಮಾಡಬೇಕು, ನಂತರ ಸ್ನೇಹಿತನೊಂದಿಗೆ ಹಳೆಯ ಹಳೆಯ ಶೈಲಿಯ ಸಿನಿಮಾಗೆ ಹೋಗಬೇಕು! ಚಿಲ್, ಡೊನಾಲ್ಡ್, ಚಿಲ್!” ಎಂದು ಗ್ರೇಟಾ ಟ್ವೀಟ್ ಮಾಡಿದ್ದಾಳೆ.

ಈ ಟ್ವೀಟ್‌ಗೆ 12 ಲಕ್ಕಕ್ಕೂ ಅಧಿಕ ಜನ ಲೈಕ್ ಮಾಡಿರುವುದಲ್ಲದೇ ಲಕ್ಷಕ್ಕೂ ಅಧಿಕ ಮಂದಿ ಅದನ್ನು ರೀಟ್ವೀಟ್ ಮಾಡಿದ್ದಾರೆ. ಆ ಮೂಲಕ ಗ್ರೇಟಾ ಹೇಳಿಕೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ.

2019ರ ಡಿಸೆಂಬರ್‌ನಲ್ಲಿ ಗ್ರೇಟಾ ವಿರುದ್ಧ ಟ್ರಂಪ್ “ಎಷ್ಟೊಂದು ಹಾಸ್ಯಾಸ್ಪದ. ಗ್ರೇಟಾ ತನ್ನ ಕೋಪ ನಿರ್ವಹಣಾ ಸಮಸ್ಯೆಯ ಬಗ್ಗೆ ಕೆಲಸ ಮಾಡಬೇಕು, ನಂತರ ಸ್ನೇಹಿತನೊಂದಿಗೆ ಹಳೆಯ ಹಳೆಯ ಶೈಲಿಯ ಸಿನಿಮಾಗೆ ಹೋಗಬೇಕು! ಚಿಲ್, ಗ್ರೇಟಾ, ಚಿಲ್!” ಎಂದು ಟ್ರಂಪ್ ಮಾಡಿದ್ದರು. ಅದಕ್ಕೆ 2 ಲಕ್ಷ ಜನ ಲೈಕ್ ಒತ್ತಿದ್ದರು.

ಈಗ ಗ್ರೇಟಾ ತಿರುಗೇಟಿಗೆ ನೆಟ್ಟಿಗರು ಥ್ರಿಲ್ ಗೊಳಗಾಗಿದ್ದಾರೆ. ಒಂದೆಡೆ ಟ್ರಂಪ್ ಸೋಲುತ್ತಿದ್ದಂತೆ ಇನ್ನೊಂದೆಡೆ ಈ ಟ್ವೀಟ್ ಬಂದಿದ್ದು, ನೂರಾರು ಜನ ಗ್ರೇಟಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದು ತಪ್ಪು. ನಾನಿಲ್ಲಿ ಇರಬಾರದಾಗಿತ್ತು. ನಾನೀಗ ನನ್ನ ಶಾಲೆಯಲ್ಲಿ, ಸಾಗರದಾಚೆ ಇರಬೇಕಿತ್ತು. ಆದರೂ ನೀವು ನಮ್ಮ ಕಡೆ, ಯುವಜನರ ಕಡೆ ಬರುತ್ತೀರ, ನಿಮ್ಮ ಭರವಸೆ, ನಿರೀಕ್ಷೆಗಳನ್ನು ಹುಡುಕಿಕೊಂಡು. ನಿಮಗೆಷ್ಟು ಧೈರ್ಯ? ನೀವು ನಮ್ಮನ್ನು ವಿಫಲಗೊಳಿಸುತ್ತಿದ್ದೀರಿ. ಆದರೆ ಯುವಜನರು ನಿಮ್ಮ ದ್ರೋಹವನ್ನು ಅರಿಯಲು ಪ್ರಾರಂಭಿಸಿದ್ದಾರೆ. ಮುಂದಿನ ಪೀಳಿಗೆಗಳ ಎಲ್ಲಾ ಕಣ್ಣುಗಳು ನಿಮ್ಮ ಮೇಲಿವೆ. ಒಂದು ವೇಳೆ ನೀವು ನಮ್ಮನ್ನು ವಿಫಲಗೊಳಿಸುವುದನ್ನು ಆಯ್ಕೆ ಮಾಡಿಕೊಂಡರೆ, ನಾವು ನಿಮ್ಮನ್ನು ಎಂದೆಂದಿಗೂ ಕ್ಷಮಿಸಲಾರೆವು ಎಂದು ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಗ್ರೇಟಾ ಮಾಡಿದ ಭಾಷಣಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.


ಇದನ್ನೂ ಒದಿ: ವಿಶ್ವಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯದ ಕುರಿತು 16ರ ಬಾಲೆ ಗ್ರೇಟಾ ತನ್ಬೆರ್ಗ್‌ ಮಾಡಿದ ಭಾಷಣ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...