ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ತೀರ್ಮಾನ ಮಾಡಲು ಎನ್‌ಡಿಎ ಭಾನುವಾರ ಮಧ್ಯಾಹ್ನ 12.30 ಕ್ಕೆ ಸಭೆ ಸೇರಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ಇತ್ತೀಚೆಗಷ್ಟೇ ವಿಧಾನಸಭಾ ಚುನಾವಣೆ ನಡೆದಿದ್ದು, ಅದರಲ್ಲಿ ನಿತೀಶ್ ಕುಮಾರ್ ಅವರ ಪಕ್ಷವಾದ ಜೆಡಿಯು ಕಳಪೆ ಸಾಧನೆ ತೋರಿದೆ. ಚುನಾವಣೆಯಲ್ಲಿ ಮಹಾಘಟಬಂಧನ್ ಮಿತ್ರ ಪಕ್ಷವಾದ ಆರ್‌ಜೆಡಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಎನ್‌ಡಿಯ ಕೂಟದಲ್ಲಿ ಜೆಡಿ (ಯು) ಗಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ.
ಇದನ್ನೂ ಓದಿ: ಬಿಹಾರ ಮುಖ್ಯಮಂತ್ರಿ ಯಾರೆಂದು NDA ತೀರ್ಮಾನಿಸುತ್ತದೆ: ನಿತೀಶ್ ಕುಮಾರ್ ಅಚ್ಚರಿಯ ಹೇಳಿಕೆ
ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆಯೇ ಎಂಬ ಊಹಾಪೋಹಗಳು ಹಬ್ಬಿದ್ದವಾದರೂ, ಹಲವಾರು ಉನ್ನತ ಬಿಜೆಪಿ ನಾಯಕರು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಮತ್ತು ಬಿಜೆಪಿ ತನ್ನ ಚುನಾವಣಾ ಪೂರ್ವದ ಭರವಸೆಯನ್ನು ಉಳಿಸುತ್ತದೆ ಎಂದು ದೃಡಪಡಿಸಿದ್ದಾರೆ ಎಂದು ಹಿಂದುಸ್ಥಾನ್ ವರದಿ ಮಾಡಿದೆ.
ನಿನ್ನೆಯಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದ ನಿತೀಶ್ ಕುಮಾರ್ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದರೆ ಎಂದು ಎನ್‌ಡಿಎ ತೀರ್ಮಾನಿಸುತ್ತದೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಮೈತ್ರಿಕೂಟದಲ್ಲಿ ಕಳಪೆ ಸಾಧನೆ ಮಾಡಿದ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಬಾರದು ಎಂದು ಧ್ವನಿಯೆದ್ದಿದೆ.
ಇದನ್ನೂ ಓದಿ:ಬಿಹಾರ: ’ಧನ್ಯವಾದ ಯಾತ್ರೆ’ ಕೈಗೊಳ್ಳಲಿರುವ ಎಲ್‌ಜೆಪಿಯ ಚಿರಾಗ್ ಪಾಸ್ವಾನ್!


