ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲು ಆಗ್ರಹಿಸಿ ದೆಹಲಿಯಲ್ಲಿ ದೇಶದ ರೈತರು ನಡೆಸುತ್ತಿರುವ ಹೋರಾಟಕ್ಕೆ ವಕೀಲರು ಬೆಂಬಲ ನೀಡಿದ್ದಾರೆ.
ನಿನ್ನೆ ಸುಪ್ರೀಂ ಕೋರ್ಟ್ ಹೊರಗೆ ಹಿರಿಯ ವಕೀಲ ಎಚ್.ಎಸ್ ಫೂಲ್ಕ ನೇತೃತ್ವದಲ್ಲಿ ಜಮಾವಣೆಗೊಂಡ ವಕೀಲರು “ಲಾಯರ್ಸ್ ಇನ್ ಸಾಲಿಡಾರಿಡಿ ವಿತ್ ಫಾರ್‌ಮರ್ಸ್ (ರೈತರೊಂದಿಗೆ ವಕೀಲರ ಐಕ್ಯಮತ್ಯ) ಎಂಬ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
Delhi: Senior Advocate HS Phoolka assembles with lawyers outside the Supreme Court to express solidarity with farmers of the ' #DelhiChalo ' protest , reports ANI#FarmersDelhiProtest pic.twitter.com/yMkZ288hzV
— Live Law (@LiveLawIndia) November 29, 2020
ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರದೊಂದಿಗೆ ಮಾತುಕತೆ ತಿರಸ್ಕರಿಸಿರುವ ರೈತರು ದೆಹಲಿಯ ಎಲ್ಲಾ ಪ್ರವೇಶ ದ್ವಾರಗಳನ್ನು ಬಂದ್ ಮಾಡಿ ಪ್ರತಿಭಟನೆ ತೀವ್ರಗೊಳಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.
ರೈತರ ಹೋರಾಟಕ್ಕೆ ನೂರಾರು ಸಾಮಾಜಿಕ ಸಂಘಟನೆಗಳು, ಗುರುದ್ವಾರಗಳು, ಮಸೀದಿಗಳು, ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಹೋರಾಟನಿರತರಿಗೆ ಆಹಾರ-ನೀರು ನೀಡಿ ಸತ್ಕರಿಸುತ್ತಿವೆ.
ಇದನ್ನೂ ಓದಿ: ದೆಹಲಿ ಬಂದ್ ಮಾಡುವುದಾಗಿ ರೈತರ ಎಚ್ಚರಿಕೆ: ತಡರಾತ್ರಿ BJP ಸಭೆ ನಡೆಸಿದ ಅಮಿತ್ ಶಾ
ಇದನ್ನೂ ಓದಿ: ಪ್ರತಿಭಟನಾ ನಿರತ ರೈತರಿಗೆ ಆಹಾರ-ನೀರು ಒದಗಿಸಿದ ಆಪ್: ಹೋರಾಟಕ್ಕೆ ಬೆಂಬಲ


