ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಕಳೆದ 19 ದಿನಗಳಿಂದ ಕೇಂದ್ರದ ರೈತವಿರೋಧಿ ಕಾನೂನುಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ವಿಶ್ವದ ಅತ್ಯಂತ ಕಿರಿಯ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಾಮ್ ಬೆಂಬಲ ನೀಡಿದ್ದಾರೆ.
ರೈತರು ಪತ್ರಿಭಟನೆ ನಡೆಸುತ್ತಿರುವ ಸಿಂಘು ಗಡಿಗೆ ಭೇಟಿ ನೀಡಿರುವ ಒಂಬತ್ತು ವರ್ಷದ ಲಿಸಿಪ್ರಿಯಾ ಕಂಗುಜಾಮ್, ರೈತನಿಲ್ಲದಿದ್ದರೆ ಆಹಾರವಿಲ್ಲ, ನ್ಯಾಯ ಸಿಗುವವರೆಗೂ ವಿಶ್ರಾಂತಿಯಿಲ್ಲ ಎಂಬ ಘೋಷಣೆ ಕೂಗುತ್ತಿರುವ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, “ನನ್ನ ಧ್ವನಿಯು ವಿಶ್ವದೆಲ್ಲೆಡೆ ತಲುಪುತ್ತದೆ ಎಂಬ ವಿಶ್ವಾಸವಿದೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ರೈತರ ಹೋರಾಟಕ್ಕೆ ಬೆಂಬಲ ನೀಡಿದ ಎನ್‌ಡಿಎ ಮಿತ್ರಪಕ್ಷ RLP
Hope my voice will reach all over the world.
No farmers, No food.
No justice, No rest.#FightFor1Point5 #FarmersProtests #ActNow pic.twitter.com/nTHiqxSYs2
— Licypriya Kangujam (@LicypriyaK) December 12, 2020
ಕಳೆದ 14 ದಿನಗಳಿಂದ ಕೊರೆಯುವ ಚಳಿಯ ಮಧ್ಯೆಯೂ ತಮ್ಮ ಹೆತ್ತರವರು ಮತ್ತು ತಾತಂದಿರೊಂದಿಗೆ ಪ್ರತಿಭಟನಾ ಸ್ಥಳದಲ್ಲಿರುವ ಮಕ್ಕಳನ್ನು ಭೇಟಿಯಾದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದಿದ್ದು, “ರೈತರು ಹವಾಮಾನ ಬದಲಾವಣೆಯ ದೊಡ್ಡ ಬಲಿಪಶುಗಳಾಗಿದ್ದಾರೆ. ಹವಾಮಾನ ಬದಲಾವಣೆಯಿಂದ ಆಗಾಗ್ಗೆ ಪ್ರವಾಹ, ಬರಗಳು ಬಂದು ರೈತರ ಬೆಳೆಗಳನ್ನು ಹಾಳುಮಾಡುತ್ತವೆ. ಸಾವಿರಾರು ರೈತರು ಪ್ರತಿವರ್ಷ ಸಾಯುತ್ತಾರೆ. ನಮ್ಮ ನಾಯಕರು ರೈತರ ಧ್ವನಿಯನ್ನು ಕೇಳಬೇಕು” ಎಂದಿದ್ದಾರೆ.
Activist @LicypriyaK comes out in support of famer's protest.
She said Our farmers are the bigest victim of climate change. Frequent floods, droughts dstroying crops. Thousands of farmers R dying evry year. leaders must listen to the voice of the farmers.#FarmersProstests pic.twitter.com/ryF32xL6DS
— Manish Gupta (@manish_Rep) December 13, 2020
2015 ರ ಪ್ಯಾರಿಸ್ ಹವಾಮಾನ ಒಪ್ಪಂದದ 5 ನೇ ವಾರ್ಷಿಕೋತ್ಸವದ ಅಂಗವಾಗಿ, ಪರಿಸರ ಮಾಲಿನ್ಯವಾಗದಂತೆ ತಡೆಯುವಲ್ಲಿ ವಿಶ್ವದ ನಾಯಕರ ನಿಷ್ಕ್ರಿಯತೆಯನ್ನು ಖಂಡಿಸಿ ಶನಿವಾರ ವಿಶ್ವದೆಲ್ಲೆಡೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿ ಗಡಿಗೆ ಆಗಮಿಸಿದ್ದ ಲಿಸಿಪ್ರಿಯಾ, ರೈತರ ಪ್ರತಿಭಟನೆಗೆ ಬೆಂಬಲಿಸಿದ್ದಾರೆ.
ಇದನ್ನೂ ಓದಿ: ದೆಹಲಿ ರೈತ ಹೋರಾಟಕ್ಕೆ ನಿವೃತ್ತ IAS, IPS ಸೇರಿದಂತೆ 78 ಮಾಜಿ ಅಧಿಕಾರಿಗಳ ಬೆಂಬಲ


