ಜೆಡಿಎಸ್ ಬೆಂಬಲದಿಂದ ಬಿಜೆಪಿ ಸರ್ಕಾರ ವಿಧಾನಪರಿಷತ್‌ನಲ್ಲಿಯೂ ಅಂಗೀಕರಿಸಿರುವ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ- 2020ಗೆ ಸಹಿ ಹಾಕದಂತೆ ರಾಜ್ಯಪಾಲರ ಮೇಲೆ ಒತ್ತಡ ತರಲು ಇಂದು ಸಂಜೆ 4-6ರವರೆಗೆ ಟ್ವಿಟ್ಟರ್ ದಾಳಿ ನಡೆಸಲು ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯಹೋರಾಟ ಸಮಿತಿ ನಿರ್ಧಿರಿಸಿದೆ.
ಕಳೆದ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿಯು ಭೂಸುಧಾರಣಾ ತಿದ್ದಪಡಿ ಮಸೂದೆ 2020 ಅನ್ನು ಮಂಡಿಸಿತು. ಅದಕ್ಕೆ ಜೆಡಿಎಸ್ ಬೆಂಬಲ ನೀಡಿದ್ದರಿಂದ 37 ಮತಗಳೊಂದಿಗೆ ಅಂಗೀಕಾರಗೊಂಡಿತ್ತು. ಇದರಿಂದ ಕ್ರೋಧಗೊಂಡ ಐಕ್ಯ ಹೋರಾಟ ಸಮಿತಿಯು ತೀವ್ರ ಪ್ರತಿಭಟನೆ ನಡೆಸಿತ್ತು. ರಾಜ್ಯಪಾಲರು ಮಸೂದೆಗೆ ಸಹಿ ಹಾಕಬಾರದು ಎಂದು ಒತ್ತಾಯಿಸಿ ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯಹೋರಾಟ ಸಮಿತಿಯ ನೇತೃತ್ವದಲ್ಲಿ ಸಾವಿರಾರು ರೈತರು ಡಿಸೆಂಬರ್ 10 ರಂದು ಇಂದು ರಾಜಭವನ ಚಲೋ ನಡೆಸಿದ್ದರು. ಆಗ 20 ರೈತ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದ ರಾಜ್ಯಪಾಲರು “ಸದ್ಯಕ್ಕೆ ಭೂಸುಧಾರಣಾ ಮಸೂದೆಗೆ ಸಹಿ ಹಾಕುವುದಿಲ್ಲ ಮತ್ತು ರೈತ ಮುಖಂಡರೊಂದಿಗೆ ವಿವರವಾಗಿ ಚರ್ಚಿಸಲು ಸರ್ಕಾರಕ್ಕೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ” ಎಂದು ಐಕ್ಯ ಹೋರಾಟ ಸಮಿತಿಯ ಮುಖಂಡರು ತಿಳಿಸಿದ್ದರು.
ಕರ್ನಾಟಕದ ಭೂಸುಧಾರಣಾ ಕಾಯ್ದೆಗೆ 2020 ರ ತಿದ್ದುಪಡಿಗೆ ಸಹಿ ಹಾಕದಂತೆ ರಾಜ್ಯಪಾಲರನ್ನು ಕೇಳುವ ಟ್ವಿಟ್ಟರ್ ದಾಳಿಯನ್ನ (ಸ್ಟಾರ್ಮ್) ಮಾಡುತ್ತಿದ್ದೇವೆ
ನಮ್ಮೊಂದಿಗೆ ಸೇರಿ!!ಸೋಮವಾರ 14 ಡಿಸೆಂಬರ್ 2020 ಸಂಜೆ 4-6
ಹ್ಯಾಶ್ಟ್ಯಾಗಗಳು#GovernorDontSignKLRA2020 #ರಾಜ್ಯಪಾಲರೇಮಾತುಉಳಿಸಿಕೊಳ್ಳಿ@nammurabhoomi @Kranthikaripade pic.twitter.com/Z6XInYyXZN
— aikyahorata (@aikyahorata) December 13, 2020
ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ- 2020ಗೆ ಸಹಿ ಹಾಕಬಾರದು ಎಂದು ಒತ್ತಾಯಿಸಲು #GovernorDontSignKLRA2020 #ರಾಜ್ಯಪಾಲರೇಮಾತುಉಳಿಸಿಕೊಳ್ಳಿ ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಟ್ವಿಟ್ಟರ್ ಟ್ರೆಂಡ್ ಮಾಡಲು ಐಕ್ಯಹೋರಾಟ ಸಮಿತಿ ಕರೆ ನೀಡಿದೆ.
ಐಕ್ಯ ಹೋರಾಟದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಕಾಯಿದೆಗಳಿಗೆ ಸಹಿ ಹಾಕಬಾರದೆಂದು ಮನವಿ ಸಲ್ಲಿಸಿರುವುದು.
The #Aikyahorata delegation met with the governor and requested him not to sign the Acts.#BengaluruChalo #scrapKLRA2020 #ಬೆಂಗಳೂರುಚಲೋ #RaithdrohiBJPJDS pic.twitter.com/pDNzCvyZjk— aikyahorata (@aikyahorata) December 11, 2020
ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ, ಕ್ರಾಂತಿಕಾರಿ ಪಡೆ, ಕನ್ನಡಿಗ ಸೇರಿದಂತೆ ಹಲವು ಸಂಘಟನೆಗಳು ಮತ್ತು ಜನಪ್ರಿಯ ಟ್ವಿಟ್ಟರ್ ಹ್ಯಾಂಡಲ್‌ಗಳು ಐಕ್ಯಸಮಿತಿಯ ಕರೆಗೆ ಓಗೊಟ್ಟಿವೆ. “ಭೂಸುಧಾರಣೆ ಕಾಯ್ದೆಯಿಂದ ಉಳುವವನ ಭೂಮಿ ಉಳ್ಳವನ ಭೂಮಿ ಆಗುತ್ತದೆ. ಬಾಚಿ ಬಾಚಿ ಫಲವತ್ತಾದ ಅನ್ನ ನೀಡುವ ಭೂಮಿಯನ್ನು ಯಂತ್ರ ಮಾಡಲು, ಅನ್ನ ನೀಡುವ ಧಣಿಯಾದ ನೇಗಿಲಯೋಗಿಯನ್ನು ಗುಲಾಮರನ್ನಾಗಿ ಮಾಡಲು ಬಿಡುವುದಿಲ್ಲ. ರೈತನೇ ನಿಜವಾದ ಬಂಡವಾಳಶಾಹಿ ಆಗಬೇಕು” ಎಂದು ಕ್ರಾಂತಿಕಾರಿ ಪಡೆ ಟ್ವೀಟ್ ಮಾಡಿದೆ.
ಉಳುವವನೇ ಹೊಲದೊಡೆಯ ಕಾಯ್ದೆಯಿಂದ ಹಿಂದುಳಿದ ವರ್ಗದವರು ಅಷ್ಟೋ ಇಷ್ಟೋ ತಮ್ಮ ಸ್ವಂತ ನೆಲ ಕಂಡುಕೊಂಡು, ತಮ್ಮ ಶ್ರಮದಿಂದ ತಮ್ಮ ಜೀವನ ರೂಪಿಸಿಕೊಂಡರು. ಆದರೆ ಈ ಕಾನೂನಿಂದ ಉಳುವವನೇ ಅಲ್ಲ ಉಳ್ಳವನೇ ಹೊಲದೊಡೆಯ ಆಗುವನು. ಹಾಗಾದರೆ ಉಳುವವನ ಪರಿಸ್ಥಿತಿ ಏನು? #ಕ್ರಾಂತಿಕಾರಿ_ಪಡೆ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿಲಿದೆ ಎಂದು ಕನ್ನಡಿಗ ಎಂಬುವವರು ಟ್ವೀಟ್ ಮಾಡಿದ್ದಾರೆ.
ಉಳುವವನೇ ಹೊಲದೊಡೆಯ ಕಾಯ್ದೆಯಿಂದ ಹಿಂದುಳಿದ ವರ್ಗದವರು ಅಷ್ಟೋ ಇಷ್ಟೋ ತಮ್ಮ ಸ್ವಂತ ನೆಲ ಕಂಡುಕೊಂಡ ತಮ್ಮ ಶ್ರಮದಿಂದ ತಮ್ಮ ಜೀವನ ರೂಪಿಸಿಕೊಂಡರು ಆದರೆ ಈ ಕಾನೂನಿಂದ ಉಳುವವನೇ ಅಲ್ಲ ಉಳ್ಳವನೇ ಹೊಲದೊಡೆಯ ಆಗುವನು ಹಾಗಾದರೆ ಉಳುವವನ ಪರಿಸ್ಥಿತಿ ಏನು?#ಕ್ರಾಂತಿಕಾರಿ_ಪಡೆ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿಲಿದೆ https://t.co/FufaXMKHyi pic.twitter.com/6vtjEmmFYH
— #ಕನ್ನಡಿಗ (@ayaz9166) December 14, 2020
ಇದನ್ನೂ ಓದಿ: ಭೂಸುಧಾರಣಾ ಮಸೂದೆಗೆ ಸಹಿ ಇಲ್ಲ, ರೈತರೊಡನೆ ಚರ್ಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ: ರಾಜ್ಯಪಾಲ ವಾಜುಬಾಯಿ ವಾಲಾ


