Homeಮುಖಪುಟವಿಸ್ಟ್ರಾನ್ ಬಿಕ್ಕಟ್ಟು - ಕಾರ್ಮಿಕರ ಬಳಿ ಕ್ಷಮೆಯಾಚಿಸಿದ ಕಂಪೆನಿ; ಉಪಾಧ್ಯಕ್ಷನ ವಜಾ!

ವಿಸ್ಟ್ರಾನ್ ಬಿಕ್ಕಟ್ಟು – ಕಾರ್ಮಿಕರ ಬಳಿ ಕ್ಷಮೆಯಾಚಿಸಿದ ಕಂಪೆನಿ; ಉಪಾಧ್ಯಕ್ಷನ ವಜಾ!

ನರಸಾಪುರ ಘಟಕದಲ್ಲಿ ನಡೆದ ದುರದೃಷ್ಟಕರ ಘಟನೆಗಳ ನಂತರ ಕೆಲವು ಕಾರ್ಮಿಕರಿಗೆ ಸರಿಯಾಗಿ ಸಂಬಳ ನೀಡಲಾಗಿಲ್ಲ ಎಂದು ನಾವು ಕಂಡುಕೊಂಡಿದ್ದೇವೆಂದು ಕಂಪೆನಿ ಹೇಳಿಕೊಂಡಿದೆ

- Advertisement -
- Advertisement -

ಕಳೆದ ವಾರದಿಂದ ಸುದ್ದಿಯಲ್ಲಿರುವ ತೈವಾನ್ ಮೂಲದ ಐಫೋನ್ ತಯಾರಿಕಾ ಕಂಪೆನಿ ವಿಸ್ಟ್ರಾನ್ ಕಾರ್ಪೊರೇಷನ್, ಭಾರತದ ಐಫೋನ್ ಉತ್ಪಾದನಾ ವ್ಯವಹಾರದ ಮೇಲ್ವಿಚಾರಣೆ ನಡೆಸುತ್ತಿರುವ ತನ್ನ ಉಪಾಧ್ಯಕ್ಷನನ್ನು ಕರ್ತವ್ಯದಿಂದ ವಜಾಮಾಡಿದೆ.

ಕೋಲಾರದಲ್ಲಿನ ವಿಸ್ಟ್ರಾನ್ ಕಾರ್ಮಿಕರು ತಮ್ಮ ದುಡಿಮೆಯ ವೇತನ ಪಾವತಿಸಿಲ್ಲ ಎಂದು ಕಳೆದ ವಾರ ಘಟಕದಲ್ಲಿ ದಾಂದಲೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಕಂಪೆನಿಯು “ನರಸಾಪುರ ಘಟಕದಲ್ಲಿ ನಡೆದ ದುರದೃಷ್ಟಕರ ಘಟನೆಗಳ ನಂತರ, ಕೆಲವು ಕಾರ್ಮಿಕರಿಗೆ ಸರಿಯಾಗಿ ಅಥವಾ ಸಮಯಕ್ಕೆ ಸರಿಯಾಗಿ ಸಂಬಳ ನೀಡಲಾಗಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಈ ಬಗ್ಗೆ ನಾವು ತೀವ್ರವಾಗಿ ವಿಷಾದ ವ್ಯಕ್ತಪಡಿಸುತ್ತೇವೆ ಮತ್ತು ನಮ್ಮ ಎಲ್ಲಾ ಕಾರ್ಮಿಕರೊಂದಿಗೆ ಕ್ಷಮೆಯಾಚಿಸುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ ಎಂದು ಹಿಂದುಸ್ಥಾನ್ ಟೈಮ್ಸ್‌‌ ವರದಿ ಮಾಡಿದೆ.

“ವಿಸ್ಟ್ರಾನ್‌ನಲ್ಲಿ ಯಾವಾಗಲೂ ನಮ್ಮ ತಂಡದ ಸದಸ್ಯರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಮೊದಲ ಆದ್ಯತೆ. ಇದು ನಮ್ಮ ಪ್ರಮುಖ ಮೌಲ್ಯವಾಗಿದೆ” ಎಂದು ವಿಸ್ಟ್ರಾನ್ ಹೇಳಿದೆ.

ಇದನ್ನೂ ಓದಿ: ವಿಸ್ಟ್ರಾನ್‌ ದುರ್ಘಟನೆಗೆ ಕಂಪನಿಯೆ ಕಾರಣ: AICCTU ಸತ್ಯಶೋಧನಾ ವರದಿ

ಘಟನೆಯನ್ನು ಗಮನದಲ್ಲಿಟ್ಟುಕೊಂಡು ತಂಡಗಳನ್ನು ಪುನರ್ರಚಿಸುವುದಾಗಿ ಕಂಪನಿ ಘೋಷಿಸಿದೆ. “ಭಾರತದಲ್ಲಿ ನಮ್ಮ ವ್ಯವಹಾರದ ಮೇಲ್ವಿಚಾರಣೆಯ ಉಪಾಧ್ಯಕ್ಷರನ್ನು ವಜಾ ಮಾಡುತ್ತಿದ್ದೇವೆ. ನಾವು ನಮ್ಮ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತಿದ್ದು, ಈ ಸಮಸ್ಯೆಗಳು ಮತ್ತೆ ಸಂಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಂಡಗಳನ್ನು ಪುನರ್ರಚಿಸುತ್ತಿದ್ದೇವೆ” ಎಂದು ವಿಸ್ಟ್ರಾನ್ ಹೇಳಿದೆ.

ವಿಸ್ಟ್ರಾನ್ ಆಪಲ್‌‌‌ನ ಉನ್ನತ ಜಾಗತಿಕ ಪೂರೈಕೆದಾರ ಕಂಪೆನಿಯಲ್ಲಿ ಪ್ರಮುಖವಾಗಿದೆ. ಭಾರತದಲ್ಲಿ ಇದು ’ಐಫೋನ್ 7’ ಹ್ಯಾಂಡ್‌ಸೆಟ್‌ಗಳು ಮತ್ತು ’ಸೆಕೆಂಡ್ ಜನರೇಷನ್ ಐಫೋನ್ ಎಸ್‌ಇ’ ಡಿವೈಸ್‌ಗಳನ್ನು ಮಾಡುತ್ತದೆ.

ನಾಲ್ಕು ತಿಂಗಳ ಸಂಬಳಕ್ಕಾಗಿ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರು ಡಿಸೆಂಬರ್ 12 ರಂದು ಬೆಳಿಗ್ಗೆ 6:30 ರ ಸುಮಾರಿಗೆ ತೀವ್ರ ಆಕ್ರೋಶಕ್ಕೆ ಒಳಗಾಗಿ ಹಿಂಸಾಚಾರಕ್ಕೆ ಇಳಿದಿದ್ದರು. ಹಿಂಸಾಚಾರದಲ್ಲಿ 437.40 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಕಂಪನಿ ಹೇಳಿಕೊಂಡಿದೆಯಾದರೂ ಕಾರ್ಮಿಕ ಸಂಘಟನೆಗಳ ಒಕ್ಕೂಟ ಇದನ್ನು ಅಲ್ಲಗೆಳೆದಿದೆ.

ಇದನ್ನೂ ಓದಿ: ಸಂಬಳ ಕೊಡದ ಆರೋಪ: ಐಫೋನ್ ತಯಾರಿಕ ನರಸಾಪುರದ ‘ವಿಸ್ಟ್ರಾನ್’ ಕಂಪನಿಗೆ ಬೆಂಕಿ ಹಚ್ಚಿದ ಕಾರ್ಮಿಕರು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...