ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ತನ್ನ ಪತ್ನಿಗೆ ಉಡುಗೊರೆ ನೀಡಲು ಚಂದ್ರನ ಮೇಲೆ ಮೂರು ಎಕರೆ ಭೂಮಿಯನ್ನು ಖರೀದಿಸಿರುವ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ.
ಧರ್ಮೇಂದ್ರ ಅನಿಜಾ ಎಂಬುವವರು ತಮ್ಮ ಪತ್ನಿ ಸಪ್ನ ಅನಿಜಾ ಅವರಿಗೆ ಉಡುಗೊರೆ ನೀಡಲು ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಮೂಲಕ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿದ್ದಾರೆ.
“ಡಿಸೆಂಬರ್ 24 ರಂದು ನಮ್ಮ ವಿವಾಹ ವಾರ್ಷಿಕೋತ್ಸವವಿತ್ತು. ನಾನು ಅವಳಿಗೆ ವಿಶೇಷವಾಗಿ ಏನಾದರೂ ಕೊಡಬೇಕು ಎಂದು ಬಯಸಿದ್ದೆ. ಪ್ರತಿಯೊಬ್ಬರೂ ಕಾರು, ಆಭರಣಗಳಂತಹ ಆಸ್ತಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ನಾನು ಬೇರೆ ಏನನ್ನಾದರೂ ಮಾಡಬೇಕು ಎಂದು ಬಯಸಿದ್ದೆ. ಆದ್ದರಿಂದ, ನಾನು ಅವಳಿಗೆ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿದೆ” ಎಂದು ಧರ್ಮೇಂದ್ರ ಅನಿಜಾ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಲು ‘7–8 ಲಕ್ಷ ರೈತರನ್ನು’ ಸೇರಿಸಲಾಗಿದೆ – ಅಣ್ಣಾಮಲೈ
“ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಒಂದು ವರ್ಷ ಬೇಕಾಯಿತು. ನಾನು ಸಂತೋಷವಾಗಿದ್ದೇನೆ. ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿದ ರಾಜಸ್ಥಾನದ ಮೊದಲ ವ್ಯಕ್ತಿ ನಾನೇ ಎಂದು ಭಾವಿಸುತ್ತೇನೆ” ಎಂದು ಧರ್ಮೇಂದ್ರ ಅನಿಜಾ ಹೇಳಿದ್ದಾರೆ.
ಈ ವಿಶೇಷವಾದ ಉಡುಗೊರೆಯನ್ನು ಸ್ವೀಕರಿಸಿದ ಸಪ್ನಾ ಅನಿಜಾ, “ಪ್ರಪಂಚದ ಹೊರಗಿನ ಉಡುಗೊರೆಯನ್ನು ಸ್ವೀಕರಿಸುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಆಹಾರ ನೀಡಲು ಸಾಧ್ಯವಾಗಿಲ್ಲ ಎಂದು 8 ವರ್ಷದ ಮಗಳಿಗೆ ವಿಷವುಣಿಸಿದ ವೈದ್ಯೆ!
“ಈವೆಂಟ್ ಮ್ಯಾನೇಜ್‌ಮೆಂಟ್‌ನವರು ಚಂದ್ರನ ಮೇಲ್ಮೈನಂತೆಯೇ ಸೆಟ್ ಹಾಕಿದ್ದರು. ನಿಜಕ್ಕೂ ನಾನು ಚಂದ್ರ ಗ್ರಹದ ಮೇಲೆಯೇ ಇದ್ದೇನೆ ಎಂದು ಭಾಸವಾಗುತ್ತಿತ್ತು. ಈ ಪಾರ್ಟಿಯಲ್ಲಿ ಆಸ್ತಿ ದಾಖಲೆಯ ಪ್ರಮಾಣಪತ್ರವನ್ನು ನನಗೆ ಉಡುಗೊರೆಯಾಗಿ ನೀಡಿದರು” ಎಂದು ಹೇಳಿದರು.
ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಸ್ಫೂರ್ತಿ ಪಡೆದ ಕೆಲವು ತಿಂಗಳ ನಂತರ, ಬೋಧ್ ಗಯಾ ನಿವಾಸಿ ನೀರಜ್ ಕುಮಾರ್, ತಮ್ಮ ಜನ್ಮದಿನದಂದು ಚಂದ್ರ ಗ್ರಹದಲ್ಲಿ ಒಂದು ಎಕರೆ ಭೂಮಿಯನ್ನು ಖರೀದಿಸಿದ್ದರು.
ಇದನ್ನೂ ಓದಿ: ಅಮೆರಿಕಾದಲ್ಲಿ ಅಬ್ಬರಿಸಲಿರುವ ‘ಅಸುರನ್’ – 72ನೇ ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ಪ್ರದರ್ಶನ


