ಚೀನಾದ ವಾಹನ ಹಾಗೂ ಇತರ ಸರಕುಗಳ ಬಿಡಿಭಾಗಗಳ ಮಾರಾಟ ಕಂಪನಿಗಳಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದಿದ್ದ ಹಿನ್ನಲೆಯಲ್ಲಿ, ಬಿಡಿಭಾಗಗಳ ಪ್ರಾಕೇಜ್‌ಗಳ ಮಾದರಿಗಳನ್ನು ಕೊರೊನಾ ಪರೀಕ್ಷಗೆ ಒಳಪಡಿಸಲಾಗಿತ್ತು. ಇದೀಗ ಅವುಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಜಿನ್‌ಚೆಂಗ್ ನಗರದಲ್ಲಿ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಸ್ಥಳೀಯ ಕೇಂದ್ರವು ವಾಹನಗಳ ಟೈರ್ ಪ್ಯಾಕೇಜಿಂಗ್‌ನಲ್ಲಿ ವೈರಸ್‌ನ್ನು ಪತ್ತೆ ಮಾಡಿದೆ ಎಂದು ನಗರದ ಕೊರೊನಾ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಚೇರಿ ಶನಿವಾರ ತಿಳಿಸಿದೆ.
ಇದನ್ನೂ ಓದಿ: ಲಸಿಕೆಯ ಲಗುಬಗೆಯ ಲೋ ಪಾಲಿಟಿಕ್ಸ್? – ಏಕೈಕ ’ದೇಸಿ’ ಲಸಿಕೆ ಕೊವಾಕ್ಸಿನ್ ಎಷ್ಟು ಸುರಕ್ಷಿತ?
ಕೊರೊನಾ ಪಾಸಿಟಿವ್ ವರದಿಯಾಗುತ್ತಿದ್ದಂತೆ, ಸಂಬಂಧಿತ ಸರಕುಗಳನ್ನು ಸೀಲ್ ಮಾಡಲಾಗಿದೆ. ಸರಕುಗಳೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿದ್ದ ಸಿಬ್ಬಂದಿಗಳನ್ನು ನಿರ್ಬಂಧಿಸಲಾಗಿದೆ ಮತ್ತು ಎಲ್ಲರೂ ನೆಗೆಟಿವ್ ಆಗಿದ್ದಾರೆ ಎಂದು ತಿಳಿದು ಎಂದು TNIE ಪತ್ರಿಕೆ ವರದಿ ಮಾಡಿದೆ.
ವಾಹನದ ಬಿಡಿಭಾಗಗಳ ಪ್ಯಾಕೇಜಿಂಗ್‌ನಿಂದ ತೆಗೆದ ಇತರ ಮೂರು ಪಾಸಿಟಿವ್ ಮಾದರಿಗಳು ಹೆಬೀ ಪ್ರಾಂತ್ಯದ ಕ್ಯಾಂಗ್‌ಸೌ ನಗರದಲ್ಲಿ, ಶಾಂಡೊಂಗ್ ಪ್ರಾಂತ್ಯದ ಯಾಂಟೈ ಮತ್ತು ಲಿನ್ಯಿಯಲ್ಲಿ ಕಂಡುಬಂದಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ ಒಕ್ಕೂಟ ಸರ್ಕಾರ


