ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡೆನ್ ಅವರನ್ನು ಪ್ರಾಮಾಣೀಕರಿಸುವ ಕಾರ್ಯಕ್ರಮದಲ್ಲಿ, ಅಮೆರಿಕ ಸಂಸತ್ತಿನ ಹೊರಗಡೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದಾಂಧಲೆ ನಡೆಸಿದ್ದರು. ಈ ದಾಂಧಲೆ ಸಮಯದಲ್ಲಿ ಭಾತರದ ಧ್ವಜ ಕಾಣಿಸಿಕೊಂಡಿದ್ದು ವ್ಯಾಪಕ ಖಂಡನೆಗೊಳಗಾಗಿದೆ.
ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ಟ್ರಂಪ್ ಪರಾಜಯಗೊಂಡಿದ್ದರಾದರು, ತನ್ನ ಸೋಲನ್ನು ಅವರು ನಿರಾಕರಿಸುತ್ತಲೇ ಬಂದಿದ್ದರು. ಅವರ ಎದುರಾಳಿ ಜೋ ಬೈಡೆನ್ ಅವರ ಗೆಲುವನ್ನು ಅಮೆರಿಕ ಸಂಸತ್ತು ಗುರುವಾರ ಪ್ರಾಮಾಣಿಕರಿಸಿದೆ. ಆದರೆ ಸಂಸತ್ತಿನಲ್ಲಿ ಈ ಪ್ರಕ್ರಿಯೆ ನಡೆಯುವುದಕ್ಕಿಂಲೂ ಮುಂಚೆ, ಸಂಸತ್ತಿನ ಹೊರಗಡೆ ಟ್ರಂಪ್ ಬೆಂಬಲಿಗರು ಸಂಸತ್ತಿನ ಬ್ಯಾರಿಕೇಡ್ ಮುರಿದು ಒಳ ಪ್ರವೇಶಿಸಿದ್ದಾರೆ. ಇದರಿಂದ ಗೊಂದಲ ಉಂಟಾಗಿದ್ದು ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ನಾಲ್ಕು ಜನರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಜೋ ಬೈಡನ್-ಕಮಲಾ ಹ್ಯಾರಿಸ್ ಗೆಲುವನ್ನು ಅಂಗೀಕರಿಸಿದ ಅಮೆರಿಕ ಕಾಂಗ್ರೆಸ್
ಪ್ರಧಾನಿ ಮೋದಿ ದಾಳಿಯನ್ನು ಖಂಡಿದ್ದು, “ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ ಮತ್ತು ಹಿಂಸಾಚಾರದ ಸುದ್ದಿ ನೋಡಿ ಬೇಸರಗೊಂಡೆ. ಅಧಿಕಾರದ ಕ್ರಮಬದ್ಧ ಮತ್ತು ಶಾಂತಿಯುತ ವರ್ಗಾವಣೆ ಮುಂದುವರಿಯಬೇಕು. ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮಟ್ಟಹಾಕಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
Distressed to see news about rioting and violence in Washington DC. Orderly and peaceful transfer of power must continue. The democratic process cannot be allowed to be subverted through unlawful protests.
— Narendra Modi (@narendramodi) January 7, 2021
ಆದರೆ ಇದೀಗ ಈ ದಾಂದಲೆ ನಡೆಸುವ ಸಮಯಲ್ಲಿ ಭಾರತದ ಧ್ವಜ ಕಾಣಿಸಿಕೊಂಡಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವೈರಲಾಗಿದೆ. ಘಟನೆಯನ್ನು ಹಲವಾರು ಭಾರತೀಯರು ವಿರೋಧಿಸಿದ್ದಾರೆ. ಬಿಜೆಪಿ ನಾಯಕ ವರುಣ್ ಗಾಂಧಿ, “ಅಲ್ಲಿ ಭಾರತೀಯ ಧ್ವಜ ಯಾಕಿದೆ ? ಖಂಡಿತವಾಗಿಯೂ ಇದು ನಾವು ಭಾಗವಹಿಸಬೇಕಾದ ಹೋರಾಟವಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
Why is there an Indian flag there??? This is one fight we definitely don’t need to participate in… pic.twitter.com/1dP2KtgHvf
— Varun Gandhi (@varungandhi80) January 7, 2021
ಇದನ್ನೂ ಓದಿ: ಅಮೆರಿಕ ಸಂಸತ್ ಮೇಲೆ ದಾಳಿ: ಟ್ರಂಪ್ ಖಾತೆ ಸ್ಥಗಿತಗೊಳಿಸಿದ ಟ್ವಿಟರ್, ಫೇಸ್‌ಬುಕ್!
ವರುಣ್ ಗಾಂಧಿ ಟ್ವೀಟನ್ನು ರೀಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಶಶಿತರೂರ್, “ವರುಣ್ ಗಾಂಧಿಯವರೇ, ದುರದೃಷ್ಟವಾತ್, ಕೆಲವು ಭಾರತೀಯರು ಕೂಡಾ ಟ್ರಂಪ್ ಬೆಂಬಲಿಗರ ಹಾಗೆ ಗುಂಪು ಹಿಂಸಾಚಾರ ಬೆಂಬಲಿಸುವ ಮನಸ್ಥಿತಿಯವರೆ ಆಗಿದ್ದಾರೆ. ಬಾವುಟವನ್ನು ಹೆಮ್ಮೆಯ ಸಂಕೇತವಾಗಿ ಬಳಸದೇ ಅದನ್ನು ಅಸ್ತ್ರವನ್ನಾಗಿ ಬಳಸಲು ಬಯಸುತ್ತಾರೆ. ಯಾರೆಲ್ಲಾ ಅದನ್ನು ಒಪ್ಪುವುದಿಲ್ಲವೋ ಅವರೆಲ್ಲರೂ ರಾಷ್ಟ್ರ ವಿರೋಧಿಗಳು ಮತ್ತು ದೇಶದ್ರೋಹಿಳೆಂದು ಹೇಳುತ್ತಾರೆ. ಆ ಭಾವುಟ ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ” ಎಂದು ತಿರುಗೇಟು ನೀಡಿದ್ದಾರೆ. ಬಿಜೆಪಿಯು ರಾಷ್ಟ್ರದ ಸಂಕೇತಗಳನ್ನು ಬಳಸಿಕೊಂಡು ಅವರ ವಿರೋಧಿಗಳನ್ನು ಹಣಿಯುತ್ತಿರುವುದನ್ನು ಶಶಿ ತರೂರು ಇಲ್ಲಿ ಉಲ್ಲೇಖಿಸಿದ್ದಾರೆ.
Unfortunately, @varungandhi80, there are some Indians with the same mentality as that Trumpist mob, who enjoy using the flag as a weapon rather than a badge of pride, & denounce all who disagree with them as anti-nationals & traitors. That flag there is a warning to all of us. https://t.co/uJIaDlLklt
— Shashi Tharoor (@ShashiTharoor) January 7, 2021
ಪ್ರವೀಣ್ ಕುಮಾರ್ ರಾಜೇಂದ್ರನ್, “ಆಂತರಿಕ ಗಲಭೆಯ ಸಂದರ್ಭದಲ್ಲಿ ಭಾರತೀಯ ಧ್ವಜದ ಹಾರಾಟ ನಡೆಸಿರುವವರ ವೀಸಾವನ್ನು ಅಮೆರಿಕ ರದ್ದುಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
USA should cancel the visa of those who carried Indian flag during the internal riot. @WhiteHouse @JoeBiden
— Praveen Kumar Rajendran (@praveenkumar558) January 7, 2021
ಇದನ್ನೂ ಓದಿ: ಅಮೆರಿಕ ಸಂಸತ್ ಮೇಲೆ ಟ್ರಂಪ್ ಬೆಂಬಲಿಗರ ದಾಳಿ: ಒಬ್ಬನ ಮರಣ, ಹಲವರಿಗೆ ಗಾಯ
ತಿಲಕ್ ಅವರು, “ದೊಡ್ಡ ಗುಂಪಿನಲ್ಲಿರುವ ಮೂರ್ಖ ಜನರ ಶಕ್ತಿಯನ್ನು ಕಡೆಗಣಿಸಬೇಡಿ. ವಿಶ್ವದ ಹಳೆಯ ಪ್ರಜಾಪ್ರಭುತ್ವದ ಸಂಸತ್ತಿನ ಮೇಲೆ ನಡೆದ ದಾಳಿಗೆ ಶತಮೂರ್ಖ ಅನಿವಾಸಿಯೊಬ್ಬ ಭಾರತೀಯ ಧ್ವಜವನ್ನು ಹಿಡಿದಿದ್ದಾನೆ” ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.
#USCapitol
Never underestimate the power of stupid people in large group. A fool NRI holding Indian flag at attack on monument of oldest democracy white house. pic.twitter.com/masunJPGD1— Tilak. (@Tilakmotghare1) January 7, 2021
ಪ್ರಧಾನಿ ಮೋದಿಯ ಖಂಡನೆಗೆ ಕೆಲವರು ಆಕ್ಷೇಪ ವ್ಯಕ್ತಪಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಶೀವತ್ಸ ಅವರು, “‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ಗೆ ಏನಾಯಿತು? ನಿಮ್ಮ ‘ಪ್ರೇಂಡ್’ ಗಾಗಿ ನೀವು ಪ್ರಚಾರ ಮಾಡಿ ನಮ್ಮ ವಿದೇಶಾಂಗ ನೀತಿಯನ್ನು ಕುಗ್ಗಿಸಲಿಲ್ಲವೇ? ಭಾರತದಲ್ಲಿ ಕೊರೊನಾ ಹರಡುತ್ತಿರುವಾಗ, ನೀವು ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ₹ 100 ಕೋಟಿ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
What happened to 'Ab Ki Baar Trump Sarkar'? Didn't you Campaign for your 'friend' and subvert our foreign policy? You even wasted ₹100 crores of public money on Namaste Trump when Corona was upon us.
— Srivatsa (@srivatsayb) January 7, 2021
ಎಂತರನ್‌ಆಫ್ ಎಂಬ ಟ್ವಿಟ್ಟರ್ ಹ್ಯಾಂಡಲ್, ಬಿಜೆಪಿ ನಾಯಕ ವರುಣ್ ಗಾಂಧಿ ಟ್ವೀಟ್‌ಗೆ ಅಧ್ಯಕ್ಷೀಯ ಚುನಾವಣೆಗಿಂತಲೂ ಮುಂಚೆ ಪ್ರಧಾನಿ ಮೋದಿ ಅಲ್ಲಿನ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಟ್ರಂಪ್ ಪರ ಪ್ರಚಾರ ಮಾಡಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
— EnthaRunoffs (@enthahotness) January 7, 2021
ಇದನ್ನೂ ಓದಿ: ಅಮೆರಿಕಾ ನಾಲ್ಕು ಐತಿಹಾಸಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ – ಜೋ ಬೈಡೆನ್


