ದಿಲ್ಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟ ಭರ್ತಿ 60 ದಿನಗಳನ್ನು ಪೂರೈಸಿದೆ. ಈ ನಡುವೆ ಒಂದೂವರೆ ವರ್ಷಗಳ ಕಾಲ ಕೃಷಿ ಕಾಯ್ದೆಗಳನ್ನು ತಡೆಹಿಡಿಯುವುದಾಗಿ ಘೋಷಿಸಿರುವ ಕೇಂದ್ರ ಸರ್ಕಾರದಕ್ಕೆ ನಿರ್ಧಾರಕ್ಕೆ ರೈತರು ಕಿವಿಗೊಟ್ಟಿಲ್ಲ. ಜನವರಿ 26 ರಂದು ಗಣರಾಜ್ಯೋತ್ಸವದಂದು ಬೃಹತ್ ಟ್ರಾಕ್ಟರ್ ಪೆರೇಡ್ ನಡೆಸುವ ಮೂಲಕ ಇಡಿ ವಿಶ್ವಕ್ಕೆ ತಮ್ಮ ಹೋರಾಟವನ್ನು ಪ್ರದರ್ಶಿಸುವತ್ತ ಅವರು ಗಮನ ನೀಡಿದ್ದಾರೆ. ಅಲ್ಲದೇ ರೈತ ಹೋರಾಟದ ಮುಖವಾಣಿ ಕಿಸಾನ್ ಏಕ್ತಾ ಮೋರ್ಚಾ ಪ್ರತಿದಿನವೂ ಒಂದೊಂದು ಹ್ಯಾಷ್‌ಟ್ಯಾಗ್ ಅನ್ನು ಟ್ರೆಂಡ್ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದು ಇಂದು #StopChinaNotFarmers ಎಂಬ ಘೋಷಣೆ ನೀಡಿದೆ.
ಕೇಂದ್ರ ಸರ್ಕಾರ ಹೇಗಾದರೂ ಮಾಡಿ ರೈತ ಹೋರಾಟವನ್ನು ತಡೆಯಬೇಕೆಂದು ಪ್ರಯತ್ನಿಸುತ್ತಿದೆ. ಆದರೆ ಅದೇ ಸಮಯದಲ್ಲಿ ಚೀನಾ ದೇಶವು ಅರುಣಾಚಲ ಪ್ರದೇಶದಲ್ಲಿ ಗಡಿ ಕ್ಯಾತೆ ತೆಗೆದಿದೆ. ಭಾರತದ ಪ್ರದೇಶದೊಳಕ್ಕೆ ನುಗ್ಗಿರುವ ಚೀನಾ ಅರುಣಾಚಲ ಪ್ರದೇಶದಲ್ಲಿ ಪುಟ್ಟ ಗ್ರಾಮವನ್ನೇ ನಿರ್ಮಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಚೀನಾವನ್ನು ತಡೆಯಬೇಕೆ ಹೊರತು ರೈತ ಹೋರಾಟವನ್ನಲ್ಲ ಎಂದು ಕಿಸಾನ್ ಏಕ್ತಾ ಮೋರ್ಚಾ ಪ್ರತಿಪಾದಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿವೆ.
In times of war, the law falls silent. Hey modi your target should be China not Indian farmers
Shame on modi govt #StopChinaNotFarmers pic.twitter.com/LG1c7CAf0n
— Raj Sandhu kissan (@sandhu94717) January 22, 2021
“ಯುದ್ಧದ ಸಮಯದಲ್ಲಿ, ಕಾನೂನು ಮೌನವಾಗುತ್ತದೆ. ಮೋದಿಯವರೆ ಚೀನಾವನ್ನು ಟಾರ್ಗೆಟ್ ಮಾಡಿ, ರೈತರನ್ನಲ್ಲ. ಮೋದಿ ಸರ್ಕಾರಕ್ಕೆ ನಾಚಿಕೆಯಾಗಬೇಕು” ಎಂದು ರಾಜ್ ಸಂದು ಕಿಸಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
‘ಇಂದು ನೀವು ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸಲು ಬಯಸಿದರೆ “ಕಿಸಾನ್ ಮೋರ್ಚಾ” ಎಂಬ ಎರಡು ಸರಳ ಪದಗಳಲ್ಲಿ ವ್ಯಾಖ್ಯಾನಿಸಬಹುದು. ಅಲ್ಲಿ ಎಲ್ಲಾ ಧರ್ಮ ಮತ್ತು ಜಾತಿಗಳ ಜನರು ಒಟ್ಟಾಗಿ ಹೋರಾಡುತ್ತಿದ್ದಾರೆ. ಸಹೋದರತ್ವವನ್ನು ಕಾಪಾಡಿಕೊಳ್ಳಬೇಕು’ ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ. ಅದರಲ್ಲಿ ಬೌಧ್ಧರು, ಸಿಖ್ಖರು, ಮುಸ್ಲಿಂ ಮತ್ತು ಹಿಂದೂಗಳು ಒಟ್ಟಿಗೆ ಹೋರಾಟದಲ್ಲಿರುವ ಚಿತ್ರಗಳನ್ನು ಷೇರ್ ಮಾಡಲಾಗಿದೆ.
Today if you want to define nationalism then you can define in two simple words “KISAN MORCHA” where people from all religions and castes are struggling together.
?? BHAICHARA KAYAM RAHE ? #StopChinaNotFarmers pic.twitter.com/czx5HYjarn— Kisan Ekta Morcha (@Kisanektamorcha) January 22, 2021
ಇಂದಿನ ಹ್ಯಾಷ್‌ಟ್ಯಾಗ್ #StopChinaNotFarmers ಆಗಿದೆ. ಇದನ್ನು ಬಳಸಿ ಷೇರ್ ಮಾಡಿ, ವೈರಲ್ ಮಾಡಿ. ನಮ್ಮ ಧ್ವನಿ ಸರ್ಕಾರಕ್ಕೆ ಕೇಳಲೇಬೇಕು ಮತ್ತು ಅದು ಈ ಕರಾಳ ಕಾನೂನುಗಳನ್ನು ವಾಪಸ್ ಪಡೆಯಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ರೈತರ ಕರೆ ಸಫಲ ನೀಡಿದ್ದು ಕೆಲವೇ ಗಂಟೆಗಳಲ್ಲಿ ಈ ಹ್ಯಾಷ್‌ಟ್ಯಾಗ್ ಇಡೀ ಭಾರತದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ.
ರೈತರನ್ನು ತಡೆಯಲು ಸಿಂಗು ಗಡಿಯಲ್ಲಿ ಮರಳು ತುಂಬಿದ ಟ್ರಕ್‌ಗಳು, ಮುಳ್ಳುತಂತಿ, ಬ್ಯಾರಿಕೇಡ್‌ಗಳು ಮತ್ತು ಕಂಟೈನರ್‌ಗಳನ್ನು ಅಡ್ಡಲಾಗಿ ನಿಲ್ಲಿಸಲಾಗಿದೆ. ಮೋದಿಯವರು ಇದೇ ಕೋಪವನ್ನು ಚೀನಾದೊಂದಿಗೆ ತೋರಿಸಿದ್ದರೆ ಇಂದು ಅರುಣಾಚಲ ಪ್ರದೇಶದಲ್ಲಿ ಚೀನಾ ಗ್ರಾಮವೊಂದನ್ನು ನಿರ್ಮಿಸುತ್ತಿರಲಿಲ್ಲ ಎಂದು ನವಜೋತ್ ಕೌರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
Trucks full of sand, barbed wire, barricades and containers at Singhu border to stop the farmers.
If Modi had made such a fuss with China, it would not have been so fuzzy #StopChinaNotFarmers pic.twitter.com/zHL8p2vPWo
— Navjot Kaur Randhwa (@KaurNavjotjatti) January 22, 2021
ಗಣರಾಜ್ಯೋತ್ಸವವನ್ನು ಆಚರಿಸಲು ದೆಹಲಿಯಲ್ಲಿ ರೈತರು ತಮ್ಮ ಟ್ರ್ಯಾಕ್ಟರ್ ರ್ಯಾಲಿ ಮಾಡುವುದನ್ನು ತಡೆಯಲು ದೆಹಲಿ ಗಡಿಯಲ್ಲಿ ಸರ್ಕಾರದ ಸಿದ್ಧತೆ ಇದು! ಅವರು ಚೀನಾ ಗಡಿಯಲ್ಲಿ ಈ ರೀತಿಯ ತಯಾರಿ ಮಾಡಿದ್ದರೆ, ಅವರು ಲಡಾಖ್ ಮತ್ತು ಅರುಣಾಚಲದಲ್ಲಿ ನಮ್ಮ ಭೂಮಿಯನ್ನು ಚೀನಾ ಆಕ್ರಮಿಸದಂತೆ ತಡೆಯಬಹುದಿತ್ತು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.
ನಮ್ಮ ವರ್ತಮಾನವು ನಮ್ಮ ಭವಿಷ್ಯದ ಹಿಂದಿನದು. ಇದು ನಮ್ಮ ಐತಿಹಾಸಿಕ ಕ್ಷಣ. ನಾವು ಅದನ್ನು ಹೇಗೆ ಗೆದ್ದೆವೆ ಎಂಬುದನ್ನು ಜಗತ್ತಿಗೆ ತೋರಿಸುತ್ತೇವೆ ಎಂದು ಮಣಿ ಕೌರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಯಾರನ್ನೂ ಗೆಲ್ಲಲು ಅಥವಾ ಸೋಲಿಸಲು ನಾವು ಇಲ್ಲಿಲ್ಲ. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ !! ಎಲ್ಲಾ 3 ಮಸೂದೆಗಳನ್ನು ರದ್ದುಪಡಿಸಬೇಕೆಂದು ನಾವು ಬಯಸುತ್ತೇವೆಯೇ ಹೊರತು ಮುಂದೂಡಲೆಂದಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
Please stop _______?
Mine is ‘China’
Yours?
China or FarmersRT | Share | Like#StopChinaNotFarmers pic.twitter.com/aeI2FwBZkv
— Tractor2ਟਵਿੱਟਰ (@Tractor2twitr) January 22, 2021
ಇದನ್ನೂ ಓದಿ: ಕೃಷಿ ಕಾನೂನುಗಳಿಗೆ ಒಂದೂವರೆ ವರ್ಷ ತಡೆ – ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ ರೈತರು


