ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾನೂನುಗಳ ವಿರುದ್ಧ ರೈತರು ಆಂದೋಲನ ನಡೆಸುತ್ತಿರುವ ಹಿನ್ನೆಲೆಯಲ್ಲಿ, “ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ತಡೆಯಲು” ಜನವರಿ 30 ರ ಸಂಜೆ 5 ಗಂಟೆಯವರೆಗೆ ರಾಜ್ಯದ 14 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ಹರಿಯಾಣ ಸರ್ಕಾರ ಶುಕ್ರವಾರ ನಿರ್ಧರಿಸಿದೆ.
ಅಂಬಾಲಾ, ಯಮುನಾ ನಗರ್, ಕುರುಕ್ಷೇತ್ರ, ಕರ್ನಾಲ್, ಕೈತಾಲ್, ಪಾಣಿಪತ್, ಹಿಸಾರ್, ಜಿಂದ್, ರೋಹ್ಟಕ್, ಭಿವಾನಿ, ಚಾರ್ಖಿ ದಾದ್ರಿ, ಫತೇಹಾಬಾದ್, ರೇವಾರಿ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಶನಿವಾರ ಸಂಜೆ 5 ಗಂಟೆಯವರೆಗೆ ಮೊಬೈಲ್ ಕರೆಗಳನ್ನು ಹೊರತುಪಡಿಸಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಒಂದೇ ಒಂದು ಇಂಚು ಹಿಂದೆ ಸರಿಯದಿರಿ, ನಿಮ್ಮ ಜೊತೆ ನಾವಿದ್ದೇವೆ: ರೈತರಿಗೆ ರಾಹುಲ್ ಗಾಂಧಿ

ಇದನ್ನೂ ಓದಿ: ರೈತರನ್ನು ಗೌರವಿಸದ ದೇಶ ದೇಶವೇ ಅಲ್ಲ: ಮಾಜಿ ಸ್ಪೀಕರ್ ರಮೇಶ್ ಕುಮಾರ್
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಅಹಿತಕರ ಘಟನೆ ನಡೆದ ನಂತರ “ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ತೊಂದರೆಯಾಗದಂತೆ ತಡೆಯಲು” ಸೋನಿಪತ್, ಜಜ್ಜರ್ ಮತ್ತು ಪಾಲ್ವಾಲ್ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಮಂಗಳವಾರ ಆದೇಶಿಸಿತ್ತು. ಹೊಸ ಆದೇಶದಲ್ಲಿ ಶನಿವಾರ ಸಂಜೆ 5 ಗಂಟೆಯವರೆಗೆ ಈ ಮೂರು ಜಿಲ್ಲೆಗಳಲ್ಲಿ ಕೂಡಾ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.
ದೂರಸಂಪರ್ಕ ಸೇವೆಗಳಾದ 2 ಜಿ / 3 ಜಿ / 4 ಜಿ / ಸಿಡಿಎಂಎ / ಜಿಪಿಆರ್ಎಸ್ ಸೇರಿದಂತೆ ಎಲ್ಲಾ ಎಸ್‌ಎಂಎಸ್ ಸೇವೆಗಳು (ಬ್ಯಾಂಕಿಂಗ್ ಮತ್ತು ಮೊಬೈಲ್ ರೀಚಾರ್ಜ್ ಹೊರತುಪಡಿಸಿ) ಮತ್ತು ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಒದಗಿಸಲಾದ ಎಲ್ಲಾ ಡಾಂಗಲ್ ಸೇವೆಗಳನ್ನು ಸ್ಥಗಿತಗೊಳಿಸಲು ಹರಿಯಾಣ ಸರ್ಕಾರ ಆದೇಶಿಸಿದೆ. 14 ಜಿಲ್ಲೆಗಳು ಸೇರಿದಂತೆ, ಸೋನಿಪತ್, ಪಾಲ್ವಾಲ್ ಮತ್ತು ಜಜ್ಜರ್ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಜನವರಿ 30 ರ ಸಂಜೆ 5 ಗಂಟೆಯವರೆಗೆ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಗಾಜಿಪುರ್ ಗಡಿಯಲ್ಲಿ ನೀರು, ವಿದ್ಯುತ್ ಕಡಿತ ಮಾಡಿದ ಯುಪಿ ಸರ್ಕಾರ: ನೀರಿನ ವ್ಯವಸ್ಥೆ ಮಾಡಿದ ದೆಹಲಿ ಸರ್ಕಾರ


