ಸಿಎಎ ವಿರುದ್ಧ ಹೋರಾಟ ಮಾಡಿದ್ದ ಉತ್ತರಪ್ರದೇಶದ ವೈದ್ಯ ಡಾ. ಕಫೀಲ್ ಖಾನ್ ಅವರ ಹೆಸರನ್ನು ಗೋರಖ್‌ಪುರ ಜಿಲ್ಲೆಯ ಪೊಲೀಸರು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜೋಗೇಂದ್ರ ಕುಮಾರ್ ಅವರ ಸೂಚನೆಯ ಮೇರೆಗೆ ಕಫೀಲ್ ಖಾನ್ ಸೇರಿದಂತೆ ಇತರೆ 81 ಜನರ ಹೆಸರನ್ನು 2020ರ ಜೂನ್ 18 ರಂದು ಸೇರಿಸಲಾಗಿದ್ದು, ಇವರ ಮೇಲೆ ಪೊಲೀಸರು ಇನ್ನುಮುಂದೆ ನಿಗಾ ವಹಿಸಲಿದ್ದಾರೆ.
ಗೊರಖ್‌ಪುರ್ ಜಿಲ್ಲೆಯಲ್ಲಿ ಒಟ್ಟು 1,543 ರೌಡಿಶೀಟರ್‌ಗಳಿದ್ದಾರೆ. ಅವರ ಪಟ್ಟಿಯಲ್ಲಿ ಕಫೀಲ್ ಖಾನ್ ಕೂಡ ಸೇರಿದ್ದಾರೆ. ಕಳೆದ ಜೂನ್‌ನಲ್ಲಿಯೇ ಅವರನ್ನು ರೌಡಿಶೀಟರ್ ಎಂದು ಉಲ್ಲೇಖಿಸಲಾಗಿದ್ದು, ಈಗಷ್ಟೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಡಾ.ಕಫೀಲ್ ಖಾನ್‌ಗೆ ಅವರ ಹುದ್ದೆ ಹಿಂತಿರುಗಿಸಿ- ಯುಪಿ ಸರ್ಕಾರಕ್ಕೆ ಪತ್ರ ಬರೆದ ವೈದ್ಯಕೀಯ ಸಂಘ
“ಉತ್ತರ ಪ್ರದೇಶ ಸರಕಾರವು ನನ್ನನ್ನು ರೌಡಿ ಶೀಟರ್‌ಗಳ ಪಟ್ಟಿಯಲ್ಲಿ ಸೇರಿಸಿದೆ. ಜೀವನಪರ್ಯಂತ ನನ್ನ ಮೇಲೆ ನಿಗಾ ಇರಿಸುತ್ತಾರಂತೆ. ಅದು ಒಳ್ಳೆಯದೇ ಆಗಿದೆ. ದಿನದ 24 ಗಂಟೆಯೂ ನನ್ನ ಮೇಲೆ ನಿಗಾ ಇರಿಸಲು ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನೂ ಒದಗಿಸಿ. ಇದರಿಂದ ಕನಿಷ್ಠ ಸುಳ್ಳು ಪ್ರಕರಣಗಳಿಂದ ನಾನು ತಪ್ಪಿಸಿಕೊಳ್ಳಲು ಸಾಧ್ಯವಾಗಬಹುದು” ಎಂದು ಕಫೀಲ್ ಖಾನ್ ಹೇಳಿದ್ದಾರೆ.
ಕ್ರಿಮಿನಲ್‌ಗಳ ಮೇಲೆ ನಿಗಾ ಇಡಲಾಗದ ಸರ್ಕಾರ, ಅಮಾಯಕರ ವಿರುದ್ದ ರೌಡಿ ಶೀಟ್‌ಗಳನ್ನು ದಾಖಲಿಸುತ್ತಿದೆ. ಇದು ಉತ್ತರ ಪ್ರದೇಶದ ಪರಿಸ್ಥಿತಿ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧದ ಹೋರಾಟವನ್ನು ವಿಶ್ವಸಂಸ್ಥೆಗೆ ಕೊಂಡ್ಯೊಯ್ದ ಡಾ.ಕಫೀಲ್ ಖಾನ್!
ಪೌರತ್ವ ತಿದ್ದುಪಡಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಅಲಿಗಡ್ ಮುಸ್ಲಿಂ ವಿವಿಯಲ್ಲಿ 2019 ಡಿ. 10 ರಂದು ಡಾ ಕಫೀಲ್ ಖಾನ್ ಅವರು ಭಾಷಣ ಮಾಡಿದ್ದರು. ಅವರ ಭಾಷಣವು ದ್ವೇಷ ಅಥವಾ ಹಿಂಸೆಗೆ ಪ್ರಚೋದನೆ ನೀಡುತ್ತದೆ ಎಂದು 2020ರ ಜನವರಿಯಲ್ಲಿ ಡಾ.ಖಾನ್ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ಪ್ರಕರಣವನ್ನು ದಾಖಲಿಸಲಾಗಿತ್ತು.
ಆದರೆ, ಪ್ರಕರಣದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್, ಎನ್‌ಎಸ್‌ಎ ಅಡಿಯಲ್ಲಿ ಕಫೀಲ್ ಖಾನ್ ಅವರ ಬಂಧನವನ್ನು 2020ರ ಸೆಪ್ಟೆಂಬರ್ 1ರಂದು ರದ್ದುಗೊಳಿಸಿ, ಬಿಡುಗಡೆಗೊಳಿಸಿತ್ತು.
ಇದನ್ನೂ ಓದಿ: ತೋರಿಕೆಯ ದೇಶಭಕ್ತಿಗೂ ನಿಜವಾದ ದೇಶಭಕ್ತಿಗೂ ತುಂಬಾ ವ್ಯತ್ಯಾಸವಿದೆ – ಡಾ.ಕಫೀಲ್ ಖಾನ್ ಸಂದರ್ಶನ



ನಮ್ಮ ದೇಶದಲ್ಲೀಗ ವೈದ್ಯರು ರೌಡಿ ಶಿಟರ್ಗಳಾಗುತ್ತಿದ್ದಾರೆ. ಇದರ ಮುಂದುವರಿದ ಬಾಗ, ರೌಡಿ ಶೀಟರ್ಗಳು ಡಾಕ್ಟರ್ ಗಳಾಗಬಹುದಾ?
bari bhanagadi heluva suddigale aytalla; sarkaradinda?!