ಜನವರಿ 16ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪ ರಾಜ್ಯ ಸರ್ಕಾರದ ವತಿಯಿಂದ ನಡೆದ ಕ್ಷಿಪ್ರ ಕಾರ್ಯಪಡೆ ಬೆಟಾಲಿಯನ್ ಸ್ಥಾಪನೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಿ ಹಿಂದಿಯಲ್ಲಿ ಬ್ಯಾನರ್, ನಿರೂಪಣೆ ಸೇರಿದಂತೆ ಇಡೀ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ ನಿನ್ನೆ ಪ್ರಧಾನಿ ಮೋದಿಯವರು ತಮಿಳುನಾಡಿನಲ್ಲಿ ಚನ್ನೈ ಮೆಟ್ರೋ ಸೇರಿದಂತೆ ಹಲವು ಶಂಕುಸ್ಥಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮದ ಆಹ್ವಾನ ಪತ್ರಿಕೆ, ವೇದಿಕೆಯ ಬ್ಯಾನರ್ ಮತ್ತು ಭಾಷಣ ಸೇರಿದಂತೆ ಎಲ್ಲಿಯೂ ಹಿಂದಿ ಬಳಸಿಲ್ಲ. ಇದು ಕನ್ನಡಿಗರನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕರ್ನಾಟಕದಲ್ಲಿ ಬಿಜೆಪಿ ಆಡಳಿತವಿದೆ. ಹಾಗಾಗಿ ಇಲ್ಲಿನ ಬಿಜೆಪಿ ಮುಖಂಡರು ಹೈಕಮಾಂಡ್ ಅನ್ನು ಒಲೈಸುವುದಕ್ಕಾಗಿ ಕನ್ನಡವನ್ನು ಕಡೆಗಣಿಸಿ ಹಿಂದಿ ಹೇರಿಕೆ ಮಾಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧ ಗಟ್ಟಿ ಚಳವಳಿ ಇದೆ. ಅಲ್ಲದೇ ಅಲ್ಲಿ ಬಿಜೆಪಿ ಸರ್ಕಾರವಿಲ್ಲ. ಬಿಜೆಪಿಯ ಮಿತ್ರ ಪಕ್ಷಗಳು ಸಹ ಹಿಂದಿ ಹೇರಿಕೆಗೆ ಭಯಪಡುತ್ತಾರೆ. ಹಾಗಾಗಿ ಅಲ್ಲಿ ಹಿಂದಿ ಹೇರಿಕೆ ನಡೆಯುವುದಿಲ್ಲ. ಕರ್ನಾಟಕಕ್ಕೆ ಈ ಅನ್ಯಾಯ ಏಕೆ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಮಾಯ. ತಮಿಳುನಾಡಿನಲ್ಲಿ ತಮಿಳುಮಯ….@BJP4Karnataka pic.twitter.com/EeFpEqt3tL
— ಸಂಜಯ್.ಜಿ.ಡಿ/Sanjay.G.D?❤️ (@Sanjaysanju83) February 14, 2021
ಮೋದಿ ಕೇರಳದ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಅಲ್ಲಿ ಮಾತಾಡ್ತಾರೆ, ಅದಕ್ಕೆ ಮಲಯಾಳಂ ಅನುವಾದ ಸಹ ಇರುತ್ತೆ. ಅದೇ ನಮ್ಮಲ್ಲಿಗೆ ಬಂದ್ರೆ ಹಿಂದಿಲಿ ಮಾತಾಡ್ತಾರೆ, ಕನ್ನಡದ ಅನುವಾದ ಸಹ ಇರೋಲ್ಲ. ಕರಾವಳಿ ಜನ ಅಂತೂ ಅನುವಾದ ಬೇಡ ಅಂತಾರೆ. ಬಿಜೆಪಿನ ಗೆಲ್ಲಿಸಿದ್ದಕ್ಕೆ ನಮಗೆ ಸಿಗೋದು ಏನಪ್ಪಾ ಅಂದ್ರೆ #ಹಿಂದಿಹೇರಿಕೆ ಎಂದು ಸತ್ಯ ಹೊಳ್ಳ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋದಿ ಕೇರಳದ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಅಲ್ಲಿ ಮಾತಾಡ್ತಾರೆ, ಅದಕ್ಕೆ ಮಲಯಾಳಂ ಅನುವಾದ ಸಹ ಇರುತ್ತೆ.
ಅದೇ ನಮ್ಮಲ್ಲಿಗೆ ಬಂದ್ರೆ ಹಿಂದಿಲಿ ಮಾತಾಡ್ತಾರೆ, ಕನ್ನಡದ ಅನುವಾದ ಸಹ ಇರೋಲ್ಲ. ಕರಾವಳಿ ಜನ ಅಂತೂ ಅನುವಾದ ಬೇಡ ಅಂತಾರೆ.
ಬಿ ಜೆ ಪಿ ನ ಗೆಲ್ಲಿಸಿದ್ದಕ್ಕೆ ನಮಗೆ ಸಿಗೋದು ಏನಪ್ಪಾ ಅಂದ್ರೆ #ಹಿಂದಿಹೇರಿಕೆ https://t.co/boqjK9w01N— ಸತ್ಯ ಹೊಳ್ಳ Satya Holla (@nodisatya) February 14, 2021
ತಮಿಳು ನಾಡಿನಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ತಮಿಳು ಇರುತ್ತದೆ, ಕರ್ನಾಟಕದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಇರೊಲ್ಲಾ. ಇದರ ಅರ್ಥ, ಸಾವಿರಾರು ವರ್ಷ ಸ್ವಾಭಿಮಾನಿಗಳಾಗಿ ಬದುಕಿದ್ದ ಕನ್ನಡಿಗರು ಹುಸಿ ದೇಶಪ್ರೇಮದ ಹೆಸರಲ್ಲಿ ಸ್ವಾಭಿಮಾನ ಮರೆತು ಬದುಕುತ್ತಿದ್ದೇವೆ ಎಂದು ಅರುಣ್ ಜಾವಗಲ್ ವಿಷಾಧ ವ್ಯಕ್ತಪಡಿಸಿದ್ದಾರೆ.
ತಮಿಳು ನಾಡಿನಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ತಮಿಳು ಇರುತ್ತದೆ, ಕರ್ನಾಟಕದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಇರೊಲ್ಲಾ. ಇದರ ಅರ್ಥ, ಸಾವಿರಾರು ವರ್ಷ ಸ್ವಾಭಿಮಾನಿಗಳಾಗಿ ಬದುಕಿದ್ದ ಕನ್ನಡಿಗರು ಹುಸಿ ದೇಶಪ್ರೇಮದ ಹೆಸರಲ್ಲಿ ಸ್ವಾಭಿಮಾನ ಮರೆತು ಬದುಕುತ್ತಿದ್ದೇವೆ. pic.twitter.com/JCkS5qaP3b
— ಅರುಣ್ ಜಾವಗಲ್ | Arun Javgal (@ajavgal) February 14, 2021
ಕರ್ನಾಟಕದಲ್ಲಿ ವಿರೋಧ ಪಕ್ಷದಲ್ಲಿರೋ ಕಾಂಗ್ರೆಸ್ ನಾಯಕರೇ ಆಗಲಿ ಆಡಳಿತ ಪಕ್ಷ ಬಿಜೆಪಿಯ ನಾಯಕರೇ ಆಗಲಿ ಹಿಂದಿ ಹೇರಿಕೆ ಸಲ್ಲದು ಎಂದು ಕನ್ನಡ ಕಟ್ಟಾಳುಗಳಂತೆ ಮಾತಾಡ್ತಾರೆಯೇ ಹೊರತು, ಸಂವಿಧಾನ ತಿದ್ದುಪಡಿ ಮಾಡಿ ಹಿಂದಿಗಿರುವ ಹೆಚ್ಚುಗಾರಿಕೆಯನ್ನು ಹಾಗೂ ಹಿಂದಿ ಹೇರಲು ಸಂವಿಧಾನದಲ್ಲಿರುವ ವ್ಯವಸ್ಥೆಯನ್ನು ಹತ್ತಿಕ್ಕುವ ಬಗ್ಗೆ ಮಾತಾಡಲ್ಲ ಎಂದು ರಾಮಚಂದ್ರ ಎಂ ಟ್ವೀಟ್ ಮಾಡಿದ್ದಾರೆ.
ಭಾಷೆಯ ವಿಚಾರದಲ್ಲಿ ಕರುಣಾನಿಧಿ ಹೋರಾಟ ಅಷ್ಟು ಮಹತ್ವ ಪಡೆದಿದೆ. ಶತಮಾನಗಳು ಕಳೆದರೂ ತಮಿಳರು ಹಿಂದಿ ಹೇರಿಕೆ ಸಹಿಸುವುದಿಲ್ಲ!. ಕನ್ನಡಿಗರ ಕತೆ, “ಮೂರು ಕೊಟ್ಟರೆ ಮಾವನ ಕಡೆ, ಆರು ಕೊಟ್ಟರೆ ಅತ್ತೆ ಕಡೆ” ಎಂದು ವೆಂಕಟರಾಮು ವ ಎಂಬುವವರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಹಿಂದಿ ಹೇರಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ: ಬಿಎಸ್‌ವೈ, ಅಮಿತ್ ಶಾ ವಿರುದ್ಧ ಕಿಡಿ



ನಾವೂ ಕೂಡಾ ತಮಿಳುನಾಡಿನವರಂತೆ ದ್ವಿಭಾಷಾ ಸೂತ್ರಕ್ಕಾಗಿ ಒತ್ತಾಯಿಸಬೇಕು.