ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಪಕ್ಷಗಳೂ ಸಹ ತಮ್ಮ ಶಕ್ತಿ ಮೀರಿ ಪ್ರಚಾರ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕಲ್ಕತ್ತಾದಲ್ಲಿ ಫೆ.28ರಂದು ನಡೆದ ಎಡ ಪಕ್ಷಗಳ ಮೈತ್ರಿಯ ಬೃಹತ್ ಚುನಾವಣಾ ರ್‍ಯಾಲಿ ದೇಶದ ಗಮನ ಸೆಳೆದಿದೆ. “ಬಿಜೆಪಿ ತ್ಯಜಿಸಿ-ಟಿಎಂಸಿ ಸೋಲಿಸಿ” ಎನ್ನುವ ಘೋಷಣೆಗಳು ರ್‍ಯಾಲಿಯಲ್ಲಿ ಮೊಳಗಿದವು.
ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು 10 ವರ್ಷದ ನಂತರ ಎಡ ಪಕ್ಷವು ಕಾಂಗ್ರೆಸ್ ಹಾಗೂ ಹೊಸತಾಗಿ ರಚನೆಯಾಗಿರುವ ಮೈತ್ರಿಕೂಟ ಇಂಡಿಯನ್ ಸೆಕ್ಯುಲರ್ ಫ್ರಂಟ್( ಐಎಸ್ಎಫ್)ನೊಂದಿಗೆ ಭಾನುವಾರ ಬೃಹತ್ ರ್‍ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿಯ ನಂತರ ಮೂರನೇ ಶಕ್ತಿಯಾಗಿ ಹೊರಹೊಮ್ಮುವುದಾಗಿ ವಿಶ್ವಾಸ ವ್ಯಕ್ತಪಡಿಸಿದೆ.

ಇದಕ್ಕೆ ಸಾಕ್ಷಿಯಾಗಿ ಇಲ್ಲಿನ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮೆಗಾ ರ್‍ಯಾಲಿ ನಡೆಸುವ ಮೂಲಕ ಎಡಪಕ್ಷ-ಕಾಂಗ್ರೆಸ್-ಐಎಸ್‌ಎಫ್ ಮುಂಬರುವ ವಿಧಾನಸಭಾ ಚುನಾವಣೆಗೆ ತನ್ನ ಪ್ರಚಾರ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದಲ್ಲಿ ಬಹುಶಃ 10 ಲಕ್ಷಕ್ಕೂ ಹೆಚ್ಚು ಜನ ಇರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ತೆಲಂಗಾಣ: ಅಕ್ರಮ ಕೋಳಿ ಪಂದ್ಯದಲ್ಲಿ ಹುಂಜ ದಾಳಿ-ಮಾಲೀಕ ಸಾವು
ರ್‍ಯಾಲಿಯಲ್ಲಿ ಸಿಪಿಎಂ ನಾಯಕರು ತೃಣಮೂಲ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಜನಹಿತ ಸರಕಾರಕ್ಕಾಗಿ ಮೂರನೇ ಪರ್ಯಾಯ ಶಕ್ತಿಯ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಎಡ ಪಕ್ಷಗಳನ್ನು ಹಾಗೂ ಜನತಾ ಬ್ರಿಗೇಡ್ ಗೆ ಮತ ನೀಡಿ ಗೆಲ್ಲಿಸಲು ಕಾಮ್ರೇಡ್ ಸೀತಾರಾಂ ಯೆಚೂರಿ, ಕಾಮ್ರೇಡ್ ಡಿ.ರಾಜಾ ಕರೆ ನೀಡಿದ್ದಾರೆ.
“ಎಡ-ಕಾಂಗ್ರೆಸ್ ಪಕ್ಷಗಳು ಮತ್ತು ಇತರ ಜಾತ್ಯತೀತ ಶಕ್ತಿಗಳ ಮಹಾ ಮೈತ್ರಿಕೂಟವು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಕೇವಲ ಎರಡು ಆಯ್ಕೆಗಳ ಸ್ಪರ್ಧೆಯಾಗಲು ಬಿಡುವುದಿಲ್ಲ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಎರಡನ್ನೂ ಸೋಲಿಸುತ್ತೇವೆ” ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಹೇಳಿದ್ದಾರೆ.

ರ್‍ಯಾಲಿಯಲ್ಲಿ ಸಿಪಿಐ(ಎಂ) ನಾಯಕರು ಮಾತನಾಡಿ ಕೋಮುವಾದದ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಿದ್ದಾರೆ. ಜೊತೆಗೆ ಜನಹಿತ ಸರ್ಕಾರಕ್ಕಾಗಿ ಪರ್ಯಾಯವಾಗಿ ಮೂರನೇ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: “ಮಗಳು ಬೇರೊಬ್ಬರ ಸ್ವತ್ತು, ಕಳುಹಿಸಿ ಕೊಡಲಾಗುವುದು”: ವಿವಾದಾತ್ಮಕ ಟ್ವೀಟ್‌ಗೆ ಸ್ಪಷ್ಟನೆ ನೀಡಿದ ಸಚಿವ


