ವಕೀಲರು ಮತ್ತು ನ್ಯಾಯಾಧೀಶರಿಗೆ ಆದ್ಯತೆಯ ಮೇರೆಗೆ ವ್ಯಾಕ್ಸಿನೇಷನ್ ನೀಡಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ(ಪಿಐಎಲ್) ಹೂಡಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಬುಧವಾರ ಹೇಳಿದ್ದು, ಕೆಲವು ನಿರ್ಧಾರಗಳನ್ನು “ಕಾರ್ಯನಿರ್ವಾಹಕರ ಬುದ್ಧಿವಂತಿಕೆಗೆ” ಬಿಡಬೇಕು ಎಂದಿದೆ. ಮುಂಬೈ ಮೂಲದ ವಕೀಲರ ಗುಂಪೊಂದು ಈ ಪಿಐಎಲ್ ಸಲ್ಲಿಸಿದ್ದು, ಸಿಬ್ಬಂದಿ ಸೇರಿದಂತೆ ನ್ಯಾಯಾಂಗದ ಸದಸ್ಯರಿಗೆ ಮೊದಲು ಲಸಿಕೆ ಹಾಕಬೇಕು ಎಂದು ಮನವಿ ಮಾಡಿದ್ದರು.
ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಅವರ ನ್ಯಾಯಪೀಠವು ಈ ಮನವಿಯನ್ನು ಆಲಿಸಿ, ಪೌರ ಕಾರ್ಮಿಕರು ಮತ್ತು ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳಂತಹ ಅನೇಕರು ಸಾಂಕ್ರಾಮಿಕ ರೋಗದ ಮಧ್ಯೆ ಕೆಲಸ ಮುಂದುವರಿಸಿದ್ದಾರೆ. ಡಬ್ಬಾವಾಲಾಗಳು, ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳು ಪಿಐಎಲ್ ಯಾಕೆ ಸಲ್ಲಿಸಬಾರದು? ಎಲ್ಲರೂ ಮುಂಚೂಣಿ ಕೆಲಸಗಾರರಾಗಿದ್ದಾರೆ” ಎಂದು ಹೇಳಿದೆ.
ಇದನ್ನೂ ಓದಿ: ಇಂದು ನಂದಿಗ್ರಾಮದಿಂದ ನಾಮಪತ್ರ ಸಲ್ಲಿಸಲಿರುವ ಮಮತಾ ಬ್ಯಾನರ್ಜಿ; ಅವರು ಹೇಳಿದ್ದೇನು?
“ಕೆಲವೊಂದು ಕೆಲಸಗಳನ್ನು ಕಾರ್ಯನಿರ್ವಾಹಕನ ಬುದ್ಧಿವಂತಿಕೆಗೆ ಬಿಡಬೇಕು. ವ್ಯಾಕ್ಸಿನೇಷನ್ ನೀತಿಯಲ್ಲಿ ಏನು ತಪ್ಪಾಗಿದೆ ಎಂದು ನಮಗೆ ತಿಳಿಸಿ? ತಪ್ಪುಗಳಿಲ್ಲದ ನೀತಿ ನಿರ್ಧಾರದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ” ಎಂದು ಅದು ಹೇಳಿದೆ.
“ನೀವು ‘ಟೈಟಾನಿಕ್’ ಚಲನಚಿತ್ರವನ್ನು ನೋಡಿದ್ದೀರಾ? ಹಡಗಿನ ಕ್ಯಾಪ್ಟನ್ ಅನ್ನು ನೀವು ನೆನಪಿಸಿಕೊಳ್ಳಿ? ಇತರೆ ಪ್ರಯಾಣಿಕರನ್ನು ಸ್ಥಳಾಂತರಿಸುವವರೆಗೂ ಅವನು ಕಾದಿರುತ್ತಾನೆ. ಮೊದಲು, ಪ್ರತಿಯೊಬ್ಬರೂ ಲಸಿಕೆಯನ್ನು ಪಡೆಯಲಿ ನಂತರದ ಆದ್ಯತೆ ನ್ಯಾಯಾಂಗಕ್ಕೆ. ನಾನು ಇಲ್ಲಿ ನಾಯಕನಾಗಿದ್ದೇನೆ” ಎಂದು ಮುಖ್ಯ ನ್ಯಾಯಮೂರ್ತಿ ದತ್ತಾ ಹೇಳಿದ್ದಾರೆ.
ಭಾರತದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಜನವರಿ 16 ರಂದು ಪ್ರಾರಂಭವಾಗಿದ್ದು, ಆರೋಗ್ಯ ಕಾರ್ಯಕರ್ತರು, ಪುರಸಭೆಯ ಕಾರ್ಮಿಕರು, ಪೊಲೀಸ್, ರಕ್ಷಣಾ ಸಿಬ್ಬಂದಿ ಸೇರಿದಂತೆ ಇತರ ಮುಂಚೂಣಿ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲಾಗಿತ್ತು.
ಇದನ್ನೂ ಓದಿ: ಮಹಿಳಾ ದಿನದಂದೇ ಆದಿವಾಸಿ ಹೋರಾಟಗಾರ್ತಿ ಹಿಡ್ಮೆ ಮಾರ್ಖಂ ಅಪಹರಣ ಮಾಡಿದ ಪೊಲೀಸರು: ಆರೋಪ


