ಕೇಂದ್ರದ ಕೃಷಿ ನೀತಿಗಳ ವಿರುದ್ದ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ರಾಜ್ಯದ ಶಿವಮೊಗ್ಗದಲ್ಲಿ ದಕ್ಷಿಣ ಭಾತರದ ಮೊದಲ ‘ರೈತ ಮಹಾಪಂಚಾತ್’ ನಡೆಯುತ್ತಿದೆ. ಈಗಾಗಲೆ ಸಮಾವೇಶ ಪ್ರಾರಂಭವಾಗಿದ್ದು, ಐತಿಹಾಸಿಕ ರೈತ ಹೋರಾಟಕ್ಕೆ ಶಿವಮೊಗ್ಗ ನಗರವು ಸಾಕ್ಷಿಯಾಗಲಿದೆ.
ಐತಿಹಾಸಿಕ ರೈತ ಹೋರಾಟವನ್ನು, ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ ಧ್ವನಿಯಾಗಿರುವ ನಾನುಗೌರಿ.ಕಾಮ್ ಫೇಸ್‌ಬುಕ್ ಪೇಜ್‌ನಿಂದ ಲೈವ್ ಆಗಿ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಹೋರಾಟಕ್ಕೆ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಬೆಂಬಲ: ರೈತರ ಬೆನ್ನಿಗೆ ನಿಂತ ‘ಲಿಲ್ಲಿ ಸಿಂಗ್’
ರೈತ ಹೋರಾಟಕ್ಕೆ ರೈತ ಹೋರಾಟಗಾರ ರಾಕೇಶ್ ಟಿಕಾಯತ್, ದರ್ಶನ್ ಪಾಲ್, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ರೈತ ಹೋರಾಟಗಾರರು ಈಗಾಗಲೆ ಹೋರಾಟ ನಗರಿಗೆ ಬಂದು ಸೇರಿದ್ದಾರೆ. ಸಮಾವೇಶವು ದಕ್ಷಿಣ ಭಾರತದಲ್ಲೇ ಮೊದಲ ರೈತ ಮಹಾಪಂಚಾಯತ್ ಆಗಿರುವುದರಿಂದ ಭಾರಿ ಜನಸಾಗರ ಸೇರುವ ನಿರೀಕ್ಷೆಯಿದೆ.
#ShivamoggaMahapanchayat : Farmers of Karnataka come together in solidarity of farmers protesting in Delhi.
"We are all together in this…" Says farmers in Karnataka.@RakeshTikaitBKU @DarshanPal11 @KodihalliKRRS @Kisanektamorcha pic.twitter.com/wsqo4ZXfWJ
— Gauri Lankesh News (@Gauri_News) March 20, 2021
ದೆಹಲಿ ಕೇಂದ್ರಿತವಾಗಿ ನಡೆಯುತ್ತಿದ್ದ ರೈತ ಹೋರಾಟವನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಉದ್ದೇಶದಿಂದ ಹಳ್ಳಿ ಹಳ್ಳಿಗಳಲ್ಲೂ ರೈತ ಮಹಾಪಂಚಾಯತ್ ನಡೆಸಲು ರೈತ ಮುಖಂಡರು ಉದ್ದೇಶಿಸಿದ್ದರು. ಅದರಂತೆ ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳದಲ್ಲಿ ಹಲವಾರು ರೈತ ಮಹಾಚಂಚಾಯತ್‌ಗಳು ನಡೆಯುತ್ತಿದ್ದು, ಭಾರಿ ಸಂಖ್ಯೆಯ ಜನಬೆಂಬಲ ಪಡೆಯುತ್ತಿದೆ. ಹೀಗಾಗಿ, ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್ ರಾಜ್ಯದ ಶಿವಮೊಗ್ಗದಲ್ಲಿ ನಡೆಯುತ್ತಿದೆ.
ಶಿವಮೊಗ್ಗದ ರೈತ ಮಹಾಪಂಚಾಯತ್ ನಂತರ ಮಾರ್ಚ್ 21 ರಂದು ಹಾವೇರಿ ಮತ್ತು ಮಾರ್ಚ್ 22 ರಂದು ಬೆಳಗಾವಿಯಲ್ಲಿ ರೈತ ಮಹಾಪಂಚಾಯತ್ ನಡೆಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಮಾ. 26ಕ್ಕೆ ಸಂಪೂರ್ಣ ಭಾರತ್ ಬಂದ್ – ಹೋರಾಟನಿರತ ರೈತರ ಕರೆ


