ದೇಶದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ಏಪ್ರಿಲ್ 1 ರಿಂದ ಪ್ರಾರಂಭವಾಗುತ್ತಿದ್ದು ಈ ನಡುವೆ, ಕೋವಾಕ್ಸಿನ್ ತಯಾರಕರಾದ ಭಾರತ್ ಬಯೋಟೆಕ್ ಅನ್ನು ಉತ್ಪಾದನಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲು ಕೇಂದ್ರವು ಕೇಳಿಕೊಂಡಿದೆ ಎಂದು TNIE ಪತ್ರಿಕೆಯು ವರದಿ ಮಾಡಿದೆ.
ಪ್ರಸ್ತುತ ಲಸಿಕೆಗಳ ಪೂರೈಕೆ ಸಮಸ್ಯೆಯನ್ನು ಎದುರಿಸುತ್ತಿರುವ ಕೇಂದ್ರ ಸರ್ಕಾರವು ಕೊರೊನಾಕ್ಕಾಗಿ ತಯಾರಿಸಿದ “ದೇಶೀಯ ಲಸಿಕೆಗಳ ಸಾಮರ್ಥ್ಯ ವೃದ್ಧಿಗೆ” ಅನುಕೂಲವಾಗುವಂತೆ ಒಂದು ಸಮಿತಿಯನ್ನು ರಚಿಸಿದೆ. ಭಾರತದಲ್ಲಿ ಇಲ್ಲಿಯವರೆಗೆ ನೀಡಲಾದ 5,33,24,811 ಡೋಸ್‌ಗಳಲ್ಲಿ, 50 ಲಕ್ಷಕ್ಕಿಂತ ಕಡಿಮೆ ಅಥವಾ 10% ಲಸಿಕೆ ಪ್ರಮಾಣವು ದೇಶದ ಮೊದಲ ದೇಶೀಯ ಕೋವಿಡ್ ಲಸಿಕೆಯಾದ ಕೊವಾಕ್ಸಿನ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ: ರಾಜ್ಯದಲ್ಲಿ ನಾಲ್ಕು ದಿನಗಳಿಗೆ ಸಾಕಾಗುವಷ್ಟು ಮಾತ್ರ ಕೊರೊನಾ ಲಸಿಕೆ ದಾಸ್ತಾನು!
ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಹೇಳುವಂತೆ ಭಾರತದಲ್ಲಿ ಅನುಮತಿ ಲಭಿಸಿದ ಎರಡು ಲಸಿಕೆಗಳ ಸುಮಾರು 8.7 ಕೋಟಿ ಡೋಸೇಜ್‌ಗಳನ್ನು ಇಲ್ಲಿಯವರೆಗೆ ರಾಜ್ಯಗಳಿಗೆ ಕಳುಹಿಸಲಾಗಿದೆ. ಆದರೆ ಈಗ ಉದ್ದೇಶಿತ ಫಲಾನುಭವಿಗಳ ಸಂಖ್ಯೆ ಈಗ 34 ಕೋಟಿಗೆ ತಲುಪಿರುವುದರಿಂದ, ಮುಂದಿನ ಕೆಲವು ತಿಂಗಳುಗಳಲ್ಲಿ ಆದ್ಯತೆಯ ಜನಸಂಖ್ಯೆಗಾಗಿ ದೇಶಕ್ಕೆ 64 ಕೋಟಿ ಪ್ರಮಾಣದ ಲಸಿಕೆಗಳು ಬೇಕಾಗುತ್ತವೆ.
“ಇದು ಕಠಿಣ ಕಾರ್ಯವಾಗಿದೆ ಮತ್ತು ಭಾರತ್ ಬಯೋಟೆಕ್ ತನ್ನ ಉತ್ಪಾದನೆಯನ್ನು ಹೆಚ್ಚಿಸದಿದ್ದರೆ, ದೊಡ್ಡ ಸವಾಲಾಗಿ ಪರಿಣಮಿಸುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಧಿಕೃತವಾಗಿ, ಭಾರತದಲ್ಲಿ ಕೋವಿಡ್ ಲಸಿಕೆಗಳ ಕೊರತೆಯಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಸಚಿವಾಲಯದ ಅನೇಕ ಅಧಿಕಾರಿಗಳ ಪ್ರಕಾರ, ಈಗಿನಂತೆ ಸೀರಮ್ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಉತ್ಪಾದನಾ ಸಾಮರ್ಥ್ಯ 5-6 ಕೋಟಿ ಆಗಿದ್ದರೆ, ಭಾರತ್ ಬಯೋಟೆಕ್ ಒಂದು ಕೋಟಿ ಮಿಲಿಯನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. “ಆದಾಗ್ಯೂ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ 10 ಕೋಟಿ ಡೋಸ್‌ಗಳನ್ನು ತಯಾರಿಸಲು ಒಪ್ಪಿದೆಯಾದರೂ, ವಿದೇಶಗಳಿಗೆ ರಫ್ತು ಮಾಡುವ ಡೋಸ್‌ಗಳು ಕೂಡಾ ಅದರಲ್ಲೇ ಸೇರಿದೆ” ಎಂದು ಮೂಲವನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.
ಇದನ್ನೂ ಓದಿ: ಪ್ರತಿದಿನ 10-20 ಕೊರೊನಾ ಪ್ರಕರಣಗಳು: ಕುಂಭಮೇಳದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರದ ಸೂಚನೆ
“ಆದ್ದರಿಂದ, ಕೊವಾಕ್ಸಿನ್ ಎರಡನೇ ಆಯ್ಕೆಯಾಗುದರ ಬದಲಿಗೆ ಮಹತ್ವದ ಪಾತ್ರ ವಹಿಸಬೇಕಾಗುತ್ತದೆ” ಎಂದು ಮೂಲವು ತಿಳಿಸಿದೆ. ಈ ಕಾರಣಕ್ಕಾಗಿಯೇ ಸರ್ಕಾರ ಕಳೆದ ವಾರ ಅಂತರ ಸಚಿವಾಲಯದ ಸಮಿತಿಯನ್ನು ರಚಿಸಿ, ಲಸಿಕೆ ತಯಾರಕರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಮಾರ್ಗಗಳನ್ನು ಕಂಡುಕೊಳ್ಳಲು ಅನೇಕ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಕೇಳಿಕೊಂಡಿದೆ.
“ಸರ್ಕಾರವು ಕೆಲವು ಸಣ್ಣ ಉತ್ಪಾದಕರಿಂದ ಕೂಡಾ ವಿನಂತಿಗಳನ್ನು ಸ್ವೀಕರಿಸಿದೆ. ಕೆಲವು ಲಸಿಕೆ ಉತ್ಪಾದನಾ ಘಟಕಗಳನ್ನು ಕೋವಿಡ್ ಲಸಿಕೆ ಉತ್ಪಾದನಾ ಘಟಕಗಳಾಗಿ ಪರಿವರ್ತಿಸಲು ಕೆಲವು ರಾಜ್ಯ ಸರ್ಕಾರಗಳು ಕೋರಿವೆ ಆದರೆ ಇದಕ್ಕೆ ಜೈವಿಕ ಸುರಕ್ಷತೆಯ ಮಟ್ಟಗಳ ಉನ್ನತ ಮಾನದಂಡಗಳಾಗಿ ಪರಿವರ್ತನೆ ಅಗತ್ಯವಿರುತ್ತದೆ” ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆಂದು TNIE ತನ್ನ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: ಕೊರೊನಾ ಸೋಂಕಿಗಿಂತ ರಸ್ತೆ ಅಪಘಾತದಲ್ಲಿ ಮೃತಪಟ್ಟವರೇ ಹೆಚ್ಚು: ಸಚಿವ ನಿತಿನ್ ಗಡ್ಕರಿ


