ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಲ್‌ಡಿಎಫ್ (Left Democratic Front) ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಕೇರಳದ ಜನತೆ ಎಡಪಕ್ಷಗಳ ಅಧಿಕಾರವನ್ನು ಮೆಚ್ಚಿ ಮತ್ತೆಮ್ಮೆ ಅಧಿಕಾರ ನೀಡಿರುವುದನ್ನು ಇಂದಿನ ಮತ ಎಣಿಕೆಯ ಆರಂಭಿಕ ಮುನ್ನಡೆಗಳು ತಿಳಿಸಿವೆ.
140 ಸದಸ್ಯರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 71 ಸ್ಥಾನಗಳ ಅಗತ್ಯವಿದೆ. ಆದರೆ ಎಲ್‌ಡಿಎಫ್ ಈಗಾಗಲೇ 90 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುವ ಮೂಲಕ ಎಡಪಕ್ಷಗಳು ವಿಶಿಷ್ಟ ದಾಖಲೆಗೆ ಪಾತ್ರವಾಗಿವೆ.
ಪ್ರತಿಪಕ್ಷ ಯುಡಿಎಫ್ 47 ಸ್ಥಾನಗಳ ಮುನ್ನಡೆಗೆ ಸೀಮಿತವಾದರೆ ಬಿಜೆಪಿ 03 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಕೇರಳದಲ್ಲಿ 1982ರ ನಂತರ ಇದುವರೆಗೂ ಯಾವುದೆ ಒಂದು ಪಕ್ಷವಾಗಲೀ ಅಥವಾ ಮೈತ್ರಿಕೂಟವಾಗಲೀ ಪುನರಾವರ್ತಿತವಾಗಿ (ಸತತ ಎರಡನೇ ಬಾರಿ) ಸರ್ಕಾರ ರಚಿಸಿಲ್ಲ. 1982ರ ನಂತರ ಒಮ್ಮೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅಧಿಕಾರಕ್ಕೆ ಬಂದರೆ, ಮತ್ತೊಮ್ಮೆ ಸಿಪಿಐಎಂ ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಅಧಿಕಾರಕ್ಕೆ ಬರುವುದು ವಾಡಿಕೆ. ಆದರೆ ಈ ಬಾರಿ ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿರುವ ಮತದಾರರು ಎಲ್‌ಡಿಎಫ್ ಆಡಳಿತ ಮೆಚ್ಚೆ ಮತ್ತೆ ಅವರನ್ನೆ ಅಧಿಕಾರಕ್ಕೆ ತಂದಿದ್ದಾರೆ.
ಇದನ್ನೂ ಓದಿ; ತಮಿಳುನಾಡು: ಭರ್ಜರಿ ಮುನ್ನಡೆ ಸಾಧಿಸಿದ ಡಿಎಂಕೆ – ದಶಕದ ನಂತರ ಉದಯಿಸಿದ ಸೂರ್ಯ!


