ಶನಿವಾರ ಬೆಳಿಗ್ಗೆ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ‘ಕಡಿಮೆ ಒತ್ತಡದ ಪ್ರದೇಶ’(low-pressure area) ರೂಪುಗೊಂಡಿದೆ, ಇದರಿಂದಾಗಿ ಮೇ 24 ರೊಳಗೆ ‘ಯಾಸ್’ ಚಂಡಮಾರುತದ ಬೀಸುವಿಕೆಯು ತೀವ್ರವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಎಚ್ಚರಿಕೆ ನೀಡಿದೆ.
ಐಎಂಡಿ ಪ್ರಕಾರ, “ಅತ್ಯಂತ ತೀವ್ರವಾದ ಚಂಡಮಾರುತ ಬೀಸಲಿದ್ದು ಇದು ಉತ್ತರ-ವಾಯುವ್ಯ ದಿಕ್ಕಿಗೆ ತೆರಳಿ ಪಶ್ಚಿಮ ಬಂಗಾಳ, ಪಕ್ಕದ ಉತ್ತರ ಒಡಿಶಾಕ್ಕೆ ತಲುಪಿ ಬಾಂಗ್ಲಾದೇಶದ ತೀರಕ್ಕೆ ಮೇ 26 ರ ಸಂಜೆ ಸಾಗಲಿದೆ” ಎಂದು ತಿಳಿಸಿದೆ.
ಇದನ್ನೂ ಓದಿ: ‘ಇನ್ನು ಮುಂದೆ ನನ್ನ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ’ – ಜೈಲಿನಿಂದಲೆ ಸ್ಪರ್ಧಿಸಿ ಶಾಸಕನಾದ ಹೋರಾಟಗಾರ!
ಐಎಂಡಿ ತನ್ನ ಟ್ವೀಟ್‌ನಲ್ಲಿ, “ಇಂದು ಬೆಳಿಗ್ಗೆ ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ‘ಕಡಿಮೆ-ಒತ್ತಡದ ಪ್ರದೇಶ’ವು ರೂಪುಗೊಂಡಿದೆ. ಮೇ 24 ರೊಳಗೆ ಚಂಡಮಾರುತದ ಬೀಸುವಿಕೆಯು ತೀವ್ರಗೊಳ್ಳುತ್ತದೆ. ಅತ್ಯಂತ ತೀವ್ರವಾಗಿರುವ ಈ ಚಂಡಮಾರುತವು ಮತ್ತಷ್ಟು ತೀವ್ರವಾಗಲಿದ್ದು, ಭಾರತದ ಉತ್ತರ-ವಾಯುವ್ಯ ದಿಕ್ಕಿಗೆ ತೆರಳಿ ಪಶ್ಚಿಮ ಬಂಗಾಳ, ಪಕ್ಕದ ಉತ್ತರ ಒಡಿಶಾವನ್ನು ಸಾಗಿ ಬಾಂಗ್ಲಾದೇಶದ ಕರಾವಳಿಯನ್ನು 26 ನೇ ಸಂಜೆ ತಲುಪಲಿದೆ” ಎಂದು ಮಾಹಿತಿ ನೀಡಿದೆ.
Low pressure area has formed over eastcentral BoB today morning. To intensify into a CS by 24th May. To intensify further into Very Severe Cyclonic Storm, move north-northwestwards and cross West Bengal and adjoining north Odisha & Bangladesh coasts around 26th evening. pic.twitter.com/DakiLqpw0f
— India Meteorological Department (@Indiametdept) May 22, 2021
ಯಾಸ್ ಚಂಡಮಾರುತವು ಮೇ 26 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳದ ತೀರವನ್ನು ಮುಟ್ಟಲಿದೆ ಮತ್ತು ಎರಡೂ ರಾಜ್ಯಗಳಲ್ಲಿ ಮೇ 22 ರಿಂದ 26 ರವರೆಗೆ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಈ ಹಿಂದೆ ಊಹಿಸಿತ್ತು.
ಯಾಸ್ ಚಂಡಮಾರುತದ ಹಿನ್ನಲೆಯಲ್ಲಿ, ಪಶ್ಚಿಮ ಬಂಗಾಳದ ಮೀನುಗಾರರಿಗೆ ಮೇ 23 ರಿಂದ ಸಂಜೆ ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಲಾಗಿದೆ ಮತ್ತು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವವರು ಮೇ 23 ರ ಬೆಳಿಗ್ಗೆ ಕರಾವಳಿಗೆ ಮರಳುವಂತೆ ಸಲಹೆ ನೀಡಲಾಗಿದೆ.
ಇದನ್ನೂ ಓದಿ: ‘ಇಂಡಿಯನ್ ವೇರಿಯೆಂಟ್’ ಪದವಿರುವ ಪೋಸ್ಟ್‌ಗಳನ್ನು ಕಿತ್ತು ಹಾಕಿ: ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ನೋಟಿಸ್


