ಕಳೆದು ಒಂದು ವರ್ಷದಿಂದ ಕೊರೋನಾ ಸಾಂಕ್ರಾಮಿಕವು ಯುರೋಪ್, ಅಮೆರಿಕಾ ಮತ್ತು ಬ್ರಿಟನ್‌ನಲ್ಲಿ ವ್ಯಾಪಕ ಸಾವುನೋವುಗಳಿಗೆ ಕಾರಣವಾಗಿತ್ತು. ಸದ್ಯ ಬ್ರಿಟನ್ ನಲ್ಲಿ ಕೊರೋನಾ ತೀವ್ರತೆ ಗಣನೀಯವಾಗಿ ಇಳಿಮುಖವಾಗಿದೆ.
ಕಳೆದ 28 ದಿನಗಳ ಅವಧಿಯಲ್ಲಿ ಜೂನ್ 1 ರ ಮಂಗಳವಾರದಂದು ಬ್ರಿಟನ್‌ನಲ್ಲಿ ಒಂದೇ ಒಂದು ಕೊರೋನಾ ಸೋಂಕಿತರ ಸಾವು ಸಂಭವಿಸಿಲ್ಲ. ಕೇವಲ 2,473 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಕಳೆದ ಒಂದು ತಿಂಗಳಿನಿಂದ ಬ್ರಿಟನ್ ನಲ್ಲಿ ಕೋವಿಡ್ ಸೋಂಕು ಮತ್ತು ಸಾವಿನ ಪ್ರಮಾಣ ಇಳಿಮುಖವಾಗುತ್ತಿದ್ದು ಕೆಲವೇ ಕೆಲವು ಸಾವಿನ ಪ್ರಕರಣಗಳು ಮಾತ್ರ ವರದಿಯಾಗುತ್ತಿದೆ. ಇದಕ್ಕು ಹಿಂದಿನ ತಿಂಗಳುಗಳಿಗೆ ಮತ್ತು ಕಳೆದ 28 ದಿನಗಳಿಗೆ ಹೋಲಿಸಿದರೆ ಸೋಂಕಿನ ತೀವ್ರತೆ ಸಾಕಷ್ಟು ಇಳಿಮುಖವಾಗಿದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ.
ಕಳೆದ ವರ್ಷ ಮಾರ್ಚ್ 2020 ರ ಅವಧಿಯಲ್ಲಿ ಬ್ರಿಟನ್ ನಲ್ಲಿ ಕೊರೋನಾದಿಂದ ಯಾವುದೇ ಸಾವು ಸಂಭವಿಸಿರಲಿಲ್ಲ. ಅದಾದ ಮೇಲೆ 15 ತಿಂಗಳುಗಳ ಕಾಲ್ ಬ್ರಿಟನ್ ದೇಶದಲ್ಲಿ ಕೊರೋನಾ ಸೋಂಕು ಏರುತ್ತ ಇಳಿಯುತ್ತ ಸಾಗಿತ್ತು. ಕೆಲವು ತಿಂಗಳು ಬ್ರಿಟನ್ ನಲ್ಲಿ ಲಾಕ್ ಡೌನ್ ಕೂಡ ಹೇರಲಾಗಿತ್ತು. ಈಗ 15 ತಿಂಗಳ ನಂತರ ಬ್ರಿಟನ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಬಂದಿದೆ.
ಸಂಪೂರ್ಣ ಬ್ರಿಟನ್ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಸೋಮವಾರ ದೇಶದಲ್ಲಿ ಯಾವುದೇ ಕೋವಿಡ್ ಸಂಬಂಧಿಸಿದ ಸಾವು ಸಂಭವಿಸಿಲ್ಲ. ವ್ಯಾಕ್ಸೀನ್ ಗಳು ಕೆಲಸ ಮಾಡುತ್ತಿರುವುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಬ್ರಿಟನ್ ನ ಆರೋಗ್ಯ ಸಚಿವ ಮ್ಯಾಟ್ ಹ್ಯಾಂಕೊಕ್ ತಿಳಿಸಿದ್ದಾರೆ.
ಕೊರೋನಾ ಸೋಂಕು ಬ್ರಿಟನ್ ನಿಂದ ಇನ್ನೂ ನಿರ್ಮೂಲನೆಯಾಗಿಲ್ಲ ಎಂಬುದನ್ನು ಜನರು ಮರೆಯಬಾರದು. ಕೈತೊಳೆಯುತ್ತಿರುವ, ಮುಖ ತೊಳೆಯುತ್ತಿರುವ, ದೈಹಿಕ ಅಂತರದ ನಿಯಮಗಳನ್ನು ಮುಂದುವರೆಸಿ. ವ್ಯಾಕ್ಸೀನ್ ನ ಎರಡು ಡೋಸ್ ಗಳನ್ನು ಕಡ್ಡಾಯವಾಗಿ ಪಡೆಯಿರಿ ಎಂದು ಬ್ರಿಟನ್ ನ ಆರೋಗ್ಯ ಸಚಿವ ಮ್ಯಾಟ್ ಹ್ಯಾಂಕೊಕ್ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
ಇದುವರೆಗೆ ಬ್ರಿಟನ್‌ನಲ್ಲಿ 1,27,782 ಜನರು ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಬ್ರಿಟನ್ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಜಗತ್ತಿನಲ್ಲಿ 5 ನೇ ಸ್ಥಾನದಲ್ಲಿದೆ ಎಂದು ಜಾನ್ಸ್ ಹಾಪಕಿನ್ಸ್ ವಿಶ್ವವಿದ್ಯಾಲಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ..
ಇದನ್ನೂ ಓದಿ: ಉಚಿತ ಸಾರ್ವತ್ರಿಕ ವ್ಯಾಕ್ಸಿನೇಷನ್‌ಗೆ ಕೇಂದ್ರವನ್ನು ಒತ್ತಾಯಿಸಿ ಕೇರಳ ವಿಧಾನಸಭೆ ನಿರ್ಣಯ


