ದೇಶದಲ್ಲಿ ಕಳೆದ ಒಂದು ದಿನದಲ್ಲಿ 60,471 ಹೊಸ ಕೊರೊನಾ ವೈರಸ್ ಏರಿಕೆ ಕಂಡಿದ್ದು, 75 ದಿನಗಳ ನಂತರ ದಾಖಲಾದ ಅತಿ ಕಡಿಮೆ ಏರಿಕೆ ಇದಾಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಕೊರೊನಾ ಪ್ರಕರಣಗಳು 2.95 ಕೋಟಿಗೆ ತಲುಪಿದೆ. ಜೊತೆಗೆ ದೈನಂದಿನ ಪಾಸಿಟಿವಿಟಿ ದರದ ಪ್ರಮಾಣವು 3.45% ಕ್ಕೆ ಇಳಿದಿದೆ ಎಂದು ಒಕ್ಕೂಟ ಆರೋಗ್ಯ ಸಚಿವಾಲಯ ತಿಳಿಸಿದೆ.
ಸೋಂಕಿನಿಂದಾಗಿ 2,726 ಹೊಸ ಸಾವುಗಳಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು 3,77,031 ಜನರು ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ. ಸೋಮವಾರ ದೇಶದಾದ್ಯಂತ 17.51 ಲಕ್ಷಕ್ಕಿಂತ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗಿದೆ. ದೈನಂದಿನ ಪಾಸಿಟಿವಿಟಿ ದರವು 3.45% ಕ್ಕೆ ಇಳಿದಿದೆ.
ಇದನ್ನೂ ಓದಿ: ಕೊರೊನಾ ನಿರ್ವಹಣೆ ಟೀಕೆಗಳಿಂದ ಬಚಾವಾಗಲು ಬಿಜೆಪಿಯ ಹೊಸ ಯೋಜನೆ
ಏತನ್ಮಧ್ಯೆ, ದೇಶದಲ್ಲಿ ನೀಡಲಾಗುವ ಒಟ್ಟು ಕೊರೊನಾ ಲಸಿಕೆ ಪ್ರಮಾಣವು 25.87 ಕೋಟಿ ಮೀರಿದೆ ಎಂದು ಒಕ್ಕೂಟ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. 18-44 ವಯೋಮಾನದ 20.99 ಲಕ್ಷ ಫಲಾನುಭವಿಗಳು ಮೊದಲ ಡೋಸ್ ಪಡೆದರೆ, 1.16 ಲಕ್ಷ ಮಂದಿ ಲಸಿಕೆಯ ಎರಡನೇ ಡೋಸ್ ಅನ್ನು ಸೋಮವಾರ ಪಡೆದರು ಎಂದು ಅದು ಹೇಳಿದೆ.
ಕರ್ನಾಟಕದಲ್ಲಿಯೂ ಇಳಿಕೆ
ಕಳೆದ ದಿನ ಕರ್ನಾಟಕದಲ್ಲಿ 1.49 ಲಕ್ಷ ಪರೀಕ್ಷೆಗಳು ನಡೆಲಾಗಿದ್ದು, ಇದರಲ್ಲಿ 6,835 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮಂತ್ರಿ ಕೆ. ಸುಧಾಕರ್ ತಿಳಿಸಿದ್ದಾರೆ. ಈ ಪ್ರಕರಣಗಳೊಂದಿಗೆ ರಾಜ್ಯದ ಕೊರೊನಾ ಪಾಸಿಟಿವಿಟಿ ಪ್ರಮಾಣ 4.56% ರಷ್ಟಿದೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲೇ ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದ ಬೆಂಗಳೂರಿನಲ್ಲಿ ಕೂಡಾ ಪ್ರಕರಣಗಳು ಕಡಿಮೆಯಾಗಿದೆ. ಕಳೆದ ದಿನ ನಗರದ 1,470 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಒಂದೇ ದಿನದಲ್ಲಿ 2,409 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯದಾದ್ಯಂತ ಕಳೆದ ಒಂದು ದಿನದಲ್ಲಿ ಒಟ್ಟು 15,409 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ : 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ-ಆರೋಪಿಯ ಬಂಧನ


