ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತೆ ನತಾಶಾ ನರ್ವಾಲ್, ದೇವಂಗನಾ ಕಾಳಿತ, ಆಸಿಫ್ ಇಕ್ಬಾಲ್‌ಗೆ ಇಂದು ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
50,000 ರೂ ವೈಯಕ್ತಿಕ ಬಾಂಡ್, ಎರಡು ಸ್ಥಳೀಯ ಶ್ಯೂರಿಟಿಗಳ ಜೊತೆಗೆ ಮೂವರು ತಮ್ಮ ಪಾಸ್‌ಪೋರ್ಟ್‌ಗಳನ್ನು ಶರಣಾಗಿಸುವುದು ಮತ್ತು ಪ್ರಕರಣಕ್ಕೆ ಅಡ್ಡಿಯುಂಟುಮಾಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿರುವ ಷರತ್ತುಗಳ ಅಡಿಯಲ್ಲಿ ಜಸ್ಟೀಸ್ ಸಿದ್ಧಾರ್ಥ್ ಮೃದಲ್ ಮತ್ತು ಅನೂಪ್ ಜೆ ಭಂಭಾನಿ ಅವರಿದ್ದ ಪೀಠ ಜಾಮೀನು ನೀಡಿದೆ.
ನತಾಶಾ ನರ್ವಾಲ್ ಮತ್ತು ದೇವಂಗನಾ ಕಾಳಿತಾ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಾಗಿದ್ದಾರೆ. ಪಿಂಜ್ರಾ ತೋಡ್ ಎಂಬ ಸಂಘಟನೆಯ ಸದಸ್ಯರಾದ ಇವರು ಮೇ 2020 ರಿಂದಲೂ ಬಂಧನದಲ್ಲಿದ್ದಾರೆ. ಆಸಿಫ್ ಇಕ್ಬಾಲ್ ತನ್ಹಾ ಅವರು ಬಿ.ಎ. ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯರಾಗಿದ್ದ ನತಾಶಾರವರ ತಂದೆ ಮಹಾವೀರ್ ನರ್ವಾಲ್‌ರವರು ಕೋವಿಡ್ ಕಾರಣದಿಂದ ನಿನ್ನೆ ನಿಧನರಾಗಿದ್ದರು. ನತಾಶಾರವರ ಸಹೋದರ ಸಹ ಕೋವಿಡ್ ಪಾಸಿಟಿವ್ ಆಗಿ ಐಸೋಲೇಷನ್‌ನಲ್ಲಿರುವ ಕಾರಣ ಅಂತ್ಯಕ್ರಿಯೆ ನಡೆಸಲು ಬೇರೆ ಯಾರೂ ಇಲ್ಲ ಎಂದು ಕೋರ್ಟ್ ನತಾಶಾಗೆ ಮೂರು ವಾರಗಳ ಜಾಮೀನು ನೀಡಲಾಗಿತ್ತು. ಮೂರು ವಾರಗಳ ನಂತರ ಅವರು ಜೈಲಿಗೆ ವಾಪಸಾದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ಉದ್ದ ಕೂದಲು ಬಿಟ್ಟ ಕಾರಣಕ್ಕೆ ಪಾಕಿಸ್ತಾನದ ಕಲಾವಿದನನ್ನು ಬಂಧಿಸಿದ ಪೊಲೀಸರು! ತೀವ್ರ ಖಂಡನೆ



ಈ ಯುವ ಹೋರಾಟಗಾರರಿಗೆ ಜಾಮೀನು ದೊರಕಿರುವುದು ಸ್ವಾಗತಾರ್ಹ.