ತಮ್ಮ ವಿಡಿಯೋ ಮತ್ತು ಬರಹಗಳಲ್ಲಿ ’ಬ್ರಾಹ್ಮಣ್ಯ’ ಎಂಬ ಪದ ಬಳಸಿರುವುದರ ವಿರುದ್ಧ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಚಿತ್ರನಟ, ಸಾಮಾಜಿಕ ಹೋರಾಟಗಾರ ಚೇತನ್ ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ನನ್ನನ್ನು 4 ಗಂಟೆಗಳ ಕಾಲ ಪ್ರಶ್ನಿಸಲಾಯಿತು. ನಾನು ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆ ಇದ್ದು ಹೋರಾಟ ಮುಂದುವರೆಯುತ್ತದೆ ಎಂದು ನಟ ಚೇತನ್ ವಿಚಾರಣೆ ನಂತರ ಹೇಳಿಕೆ ನೀಡಿದ್ದಾರೆ.
“ಇಂದು, ನನ್ನ ಸಾಮಾಜಿಕ ಜಾಲತಾಣದಲ್ಲಿನ ಬ್ರಾಹ್ಮಣ್ಯವನ್ನು ವಿರೋಧಿಸುವ ವೀಡಿಯೊಗಳು ಮತ್ತು ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ 4 ಗಂಟೆಗಳ ಕಾಲ ನನ್ನನ್ನು ಪ್ರಶ್ನಿಸಲಾಯಿತು.. ನಾನು ಸತ್ಯದ ಜೊತೆಗೆ ಮತ್ತು ಪ್ರಜಾಪ್ರಭುತ್ವಕ್ಕೆ ಬೆಂಬಲವಾಗಿ ನಿಂತಿದ್ದೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸಮಾನತೆ, ನ್ಯಾಯ ಮತ್ತು ಅಹಿಂಸೆಗಾಗಿ ಜಾಗತಿಕ ಆಂದೋಲನಕ್ಕೆ ನನ್ನದೇ ಆದ ಸಣ್ಣ ರೀತಿಯಲ್ಲಿ ಕೊಡುಗೆ ನೀಡಿದ್ದಕ್ಕೆ ನನಗೆ ಹೆಮ್ಮೆ ಇದೆ. ಹೋರಾಟ ಮುಂದುವರಿಯುತ್ತದೆ! ಎಂದು ಚೇತನ್ ಘೋಷಿಸಿದ್ದಾರೆ.
— Chetan Kumar / ಚೇತನ್ (@ChetanAhimsa) June 16, 2021
ಇಂದು ಅವರು ಬಸವನಗುಡಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ನೂರಾರು ಬೆಂಬಲಿಗರು ಸಹ ಜೊತೆಗೂಡಿದ್ದಾರೆ. ಅವರು ಹೇಳಿಕೆ ದಾಖಲಿಸಿ ಹೊರಬರುತ್ತಿದ್ದಂತೆ ಅವರಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿ ನಿಮ್ಮೊಡನೆ ನಾವಿದ್ದೇವೆ ಎಂದು ಬೆಂಬಲ ಸೂಚಿಸಿದ್ದಾರೆ.
ಇಂದು BAMCEF ರಾಷ್ಟ್ರೀಯ ಅಧ್ಯಕ್ಷ ವಾಮನ್ ಮೆಶ್ರಮ್‌ರವರು ನಟ ಚೇತನ್‌ರವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬ್ರಾಹ್ಮಣ್ಯದ ವಿರುದ್ಧದ ಹೋರಾಟಕ್ಕಾಗಿ ನಾವು ನಿಮ್ಮನ್ನು ಸ್ವಾಗತಿಸುತ್ತೇವೆ ಮತ್ತು ನಿಮ್ಮ ದಿಟ್ಟ ನಿಲುವನ್ನು ನಾವು ಪ್ರಶಂಸಿಸುತ್ತೇವೆ. BAMCEF ಸಂಘಟನೆಯಾಗಿ ನಾವು ನಮ್ಮ ಸಂಪೂರ್ಣ ಸಾಂಸ್ಥಿಕ ಸಾಮರ್ಥ್ಯಗಳೊಂದಿಗೆ ನಿಮ್ಮೊಂದಿಗೆ ನಮ್ಮ ಸಹಾನುಭೂತಿ ಮತ್ತು ಐಕಮತ್ಯ ಸೂಚಿಸುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ನೋಟಿಸ್: ಠಾಣೆಗೆ ಹೋಗುತ್ತೇನೆ, ಹೋರಾಟ ಮುಂದುವರೆಸುತ್ತೇನೆ ಎಂದ ನಟ ಚೇತನ್



ಚೇತನರ ಹೋರಾಟಕ್ಕೆ ಜಯವಾಗಲಿ.
BAMCEF?