2017ರಲ್ಲಿ ಟಿಎಂಸಿ ತ್ಯಜಿಸಿ ಬಿಜೆಪಿ ಸೇರಿ ಶಾಸಕರಾಗಿದ್ದ ಹಿರಿಯ ಮುಖಂಡ ಮುಕುಲ್ ರಾಯ್ ಕಳೆದ ವಾರ ವಾಪಸ್ ಟಿಎಂಸಿ ಸೇರಿದ್ದಾರೆ. ಇದೇ ಸಂದರ್ಭದಲ್ಲಿ ಅವರಿಗೆ ನೀಡಲಾಗಿದ್ದ Z ಶ್ರೇಣಿಯ ವಿಐಪಿ ರಕ್ಷಣೆಯನ್ನು ಒಕ್ಕೂಟ ಸರ್ಕಾರ ವಾಪಸ್ ಪಡೆದಿದೆ ಎನ್ನಲಾಗಿದೆ.
ಮುಕುಲ್ ರಾಯ್‌ಗೆ ನೀಡಲಾಗಿದ್ದ ರಕ್ಷಣೆಯನ್ನು ನಿಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ನಿರ್ದೇಶನ ನೀಡಿದೆ.
ಕಳೆದ ವಾರ ಮುಕುಲ್ ರಾಯ್ ಬಿಜೆಪಿ ತ್ಯಜಿಸಿ ತನ್ನ ಮಗ ಸುಬ್ರಂಗ್ಶು ರಾಯ್ ಜೊತೆಗೆ ಟಿಎಂಸಿ ಸೇರಿದ್ದರು. ಅವರ ಅನುಯಾಯಿಗಳು ಸಹ ಬಿಜೆಪಿ ಬಿಟ್ಟು ಟಿಎಂಸಿ ಸೇರುತ್ತಾರೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.
ಮುಕುಲ್ ರಾಯ್‌ರವರೆ ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದು ತಮಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆಯುವಂತೆ ಕೋರಿದ್ದರು. ಅದು ಈಗ ಕಾರ್ಯರೂಪಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
2017ರಲ್ಲಿ ಮುಕುಲ್ ರಾಯ್ ಟಿಎಂಸಿ ತ್ಯಜಿಸಿ ಬಿಜೆಪಿ ಸೇರಿದ ನಂತರ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಜೊತೆಗೆ Z ಶ್ರೇಣಿಯ ವಿಐಪಿ ರಕ್ಷಣೆ ನೀಡಲಾಗಿತ್ತು. ಅವರು ಪಶ್ಚಿಮ ಬಂಗಾಳದಲ್ಲಿ ಸಂಚರಿಸುವಾಗ 22-24 ಸಿಆರ್‌ಪಿಎಫ್ ಕಮಾಂಡೊಗಳು ಅವರಿಗೆ ರಕ್ಷಣೆ ನೀಡಲು ಸಂಚರಿಸುತ್ತಿದ್ದವು.
ಮತ್ತೊಂದು ಕೇಂದ್ರ ಅರೆಸೈನಿಕ ಪಡೆ ಸಿಐಎಸ್ಎಫ್ ಸುಬ್ರಂಗ್ಶುವಿಗೆ ನೀಡುತ್ತಿರುವ ಸಣ್ಣ ವರ್ಗದ ಭದ್ರತಾ ರಕ್ಷಣೆಯನ್ನು ಸಹ ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ತಂದೆ-ಮಗನಿಗೆ ಈಗ ರಾಜ್ಯ ಪೊಲೀಸರು ಭದ್ರತೆ ಒದಗಿಸುತ್ತಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಬೇರೊಬ್ಬರು ಸಿಎಂ ಆಗಲಿ: ಎಚ್.ವಿಶ್ವನಾಥ್



ಗೌರವಯುತವಾಗಿ ಯೆಡ್ಯೂರಪ್ಪನವರು ಪಡತ್ಯಾಗ ಮಾಡುವದು ಒಳಿತು.
ತಮ್ಮ ಜಾತ್ಯಾತೀತ ನಡುವಳಿಕೆ, ಮುತ್ಸದ್ದಿತನ, ಹೊಸತನ ಮತ್ತು ಇಳಿಯ ವಯಸ್ಸಿನಲ್ಲೂ ಇರುವ ಲವಲವಿಕೆ ನಿಜವಾಗಿಯೂ ಅಚ್ಚರಿ ಮೂಡಿಸುತ್ತದೆ.
ಆಡಳಿತದ ಮೇಲೆ ಗುರುತರ ಆಪಾದನೆ ಬರುತ್ತಿರುವ ಈ ಹಂತದಲ್ಲಿ ನಿರ್ಗಮಿಸಿದರೆ, ನಾಡಿನ ಜನತೆಗೆ ಅವರ ಬಗ್ಗೆ ಇನ್ನೂ ಹೆಚ್ಚಿನ ಗೌರವ ಮುದುತ್ತದೆ.
ಮಿಕ್ಕಿದ್ದು ಅವರ ಕುಟುಂಬ ವರ್ಗವೇ ನಿರ್ಧರಿಸಲಿ ?