ಲೋಕಸಭೆ ವಿರೋಧಪಕ್ಷದ ನಾಯಕನ ಸ್ಥಾನದಿಂದ ಅಧೀರ್ ರಂಜನ್ ಚೌಧರಿ ಅವರ ಬದಲಾವಣೆಗೆ ಸಿದ್ಧತೆಗಳು ಆರಂಭವಾಗಿದೆ. ಪಶ್ಚಿಮ ಬಂಗಾಳದ ಸಂಸದ ಚೌಧರಿ ಬದಲಾಗಿ ಬೇರೆ ನಾಯಕರನ್ನು ನೇಮಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಜುಲೈ 19 ರಿಂದ ಆಗಸ್ಟ್ 13 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು ಇದಕ್ಕೂ ಮೊದಲೇ ವಿರೋಧಪಕ್ಷದ ನಾಯಕರ ಬದಲಾವಣೆ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಚೌಧರಿ ಬದಲಾಗಿ ಶಶಿ ತರೂರ್ ಅಥವಾ ಮನೀಶ್ ತಿವಾರಿ ಅವರನ್ನು ವಿರೋಧಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಸಂಭವವಿದ್ದು, ಸದ್ಯದಲ್ಲೇ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ತೀರ್ಮಾನ ಹೊರಬೀಳಬಹುದಾಗಿದೆ. ಶಶಿ ತರೂರ್ ಮತ್ತು ಮನೀಶ್ ತಿವಾರಿ ಕಾಂಗ್ರೆಸ್‌ನ G-23 ರ ಗುಂಪು ಎಂದು ಗುರುತಿಸಲಾದ ನಾಯಕತ್ವದ ಬದಲಾವಣೆ ಕುರಿತು ಪತ್ರ ಬರೆದ ಸಂಸದರ ಪಟ್ಟಿಗೆ ಸೇರಿದವರಾಗಿದ್ದಾರೆ.
ಅಧೀರ್ ರಂಜನ್ ಚೌಧರಿ ಉಸ್ತುವಾರಿಯಲ್ಲಿ ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳ ಚುನಾವಣೆಯನ್ನು ಎದುರಿಸಿ ಹೀನಾಯ ಸೋಲನ್ನು ಅನುಭವಿಸಿತ್ತು. ಚೌಧರಿ ಅವರ ವೈಫಲ್ಯದ ಕಾರಣಕ್ಕೆ ಮತ್ತು ತೃಣಮೂಲ ಕಾಂಗ್ರೆಸ್ ಜೊತೆ ಹಳಸಿದ ಕಾಂಗ್ರೆಸ್ ಸಂಬಂಧವನ್ನು ಸರಿಪಡಿಸುವ ಉದ್ಧೇಶವು ಇದರಲ್ಲಿ ಇದೆ ಎಂದು ಹೇಳಲಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಸಂಸತ್ತಿನ ಒಳಗೆ ಹೋರಾಟವನ್ನು ನಡೆಸಲು ಕಾಂಗ್ರೆಸ್‌ಗೆ TMC ಮತ್ತು ಇತರ ವಿರೋಧಪಕ್ಷಗಳ ಬೆಂಬಲ ಅಗತ್ಯವಾಗಿದ್ದು ಈ ದೃಷ್ಟಿಯಿಂದ ಪ್ರಭಾವಿ ಸಂಸದರೊಬ್ಬರನ್ನು ಲೋಕಸಭೆಯ ವಿರೊಧ ಪಕ್ಷದ ನಾಯಕರನ್ನಾಗಿ ನೇಮಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ.
ಇದನ್ನೂ ಓದಿ; ಯುಪಿ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾರರ ಅಪಹರಣ, ಬಲ ಪ್ರಯೋಗದಿಂದ ಮತ ಚಲಾಯಿಸದಂತೆ ಮಾಡಲಾಗಿದೆ-…


