Homeಅಂತರಾಷ್ಟ್ರೀಯಇಂಗ್ಲೆಂಡ್‌ : ಜನಾಂಗ ದ್ವೇಷದ ವಿರುದ್ಧ ಫುಟ್ಬಾಲ್‌ ಆಟಗಾರರ ಜೊತೆ ನಿಂತ ಜಗತ್ತು

ಇಂಗ್ಲೆಂಡ್‌ : ಜನಾಂಗ ದ್ವೇಷದ ವಿರುದ್ಧ ಫುಟ್ಬಾಲ್‌ ಆಟಗಾರರ ಜೊತೆ ನಿಂತ ಜಗತ್ತು

ನಿಲ್ಲದ ತಾರತಮ್ಯ. ಜನಾಂಗ ದ್ವೇಷದ ದಳ್ಳುರಿಗೆ ಇಂಗ್ಲೆಂಡ್‌ ಆಟಗಾರರು ಗುರಿ. ಯುರೋ ಸೋಲಿಗೆ ಭುಗಿಲೆದ್ದ ಆಕ್ರೋಶ. ಜನಾಂಗ ದ್ವೇಷ ಖಂಡಿಸಿ ಕಪ್ಪು ವರ್ಣೀಯ ಆಟಗಾರರ ಜೊತೆ ನಿಂತ ಜಗತ್ತು.

- Advertisement -
- Advertisement -

ಯುರೋ ಕಪ್ ಸೋಲಿನ ನಂತರ ಜನಾಂಗೀಯ ನಿಂದನೆಯ ದಳ್ಳುರಿಗೆ ಗುರಿಯಾಗಿದ್ದ ಇಂಗ್ಲೆಂಡ್‌ ತಂಡದ ಆಟಗಾರರ ಬೆಂಬಲಕ್ಕೆ ಇಡೀ ಜಗತ್ತು ಒಂದಾಗಿದೆ. ವಿಶ್ವ ಪ್ರಸಿದ್ಧ ಕ್ರೀಡಾಪಟುಗಳು, ಹೋರಾಟಗಾರರು, ರಾಜಕಾರಣಿಗಳು, ಸಿನೆಮಾ ನಟರು ಜನಾಂಗೀಯ ನಿಂದನೆಯ ಅಮಾನವೀಯ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಳೆದ ವರ್ಷದ ಬ್ಲಾಕ್‌ ಲೈವ್‌ ಮ್ಯಾಟರ್ಸ್‌ ಅಂದೋಲನ ಮತ್ತೆ ಮುನ್ನೆಲೆಗೆ ಬಂದಿದೆ.

ಯುರೊ ಕಪ್‌ ಫುಟ್ಬಾಲ್‌ ಟೂರ್ನಿ ಜುಲೈ 11ಕ್ಕೆ ತೆರೆ ಕಂಡಿದೆ. ಫೈನಲ್‌ನಲ್ಲಿ ಇಟಲಿ ತಂಡ ಇಂಗ್ಲೆಂಡ್‌ ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್‌ ತನಗೆ ಸಿಕ್ಕ 5 ಅವಕಾಶಗಳಲ್ಲಿ 2 ಸಾರಿ ಮಾತ್ರ ಗೋಲುಗಳಿಸಲು ಯಶಸ್ವಿಯಾಗಿತ್ತು. ಇಂಗ್ಲೆಂಡ್‌ ಸೋಲಿನ ಬೆನ್ನಲ್ಲೇ ವಿವಾದವೊಂದು ಹುಟ್ಟಿಕೊಂಡಿದೆ. ಇಂಗ್ಲೆಂಡ್ ಸೋಲಿಗೆ 22 ಮಾರ್ಕಸ್‌ ರಷ್‌ಫೋರ್ಡ್‌, ಬುಕಾಯೊ ಸಾಕಾ ಮತ್ತು ಜೇಡೆನ್ ಸ್ಯಾಂಚೊ ಅವರನ್ನು ಹೊಣೆಗಾರನನ್ನಾಗಿ ಮಾಡಿ ಜನಾಂಗೀಯ ನಿಂದನೆಯ ಸಂದೇಶಗಳು ಫೇಸ್‌ಬುಕ್‌, ಟ್ವಿಟ್ಟರ್‌ಗಳಲ್ಲಿ ಹರಿದಾಡುತ್ತಿದೆ.

ಫೈನಲ್‌ ಪಂದ್ಯದ ಅಂತಿಮ ಕ್ಷಣದಲ್ಲಿ ಮಾರ್ಕಸ್‌ ರಷ್‌ಫೋರ್ಡ್‌ ಒದ್ದ ಪೆನಾಲ್ಟಿ ಶೂಟೌಟ್‌ ಗೋಲು    ಗೋಲು ಪೆಟ್ಟಿಗೆಯ ಕಂಬಕ್ಕೆ ಬಡಿದು ಹೊರ ನಡೆದಿತ್ತು. ರಷ್‌ಫೋರ್ಡ್‌ ಸೇರಿದಂತೆ ಬುಕಾಯೊ ಸಾಕಾ ಮತ್ತು ಜೇಡೆನ್ ಸ್ಯಾಂಚೊ ಕೂಡ ಗೋಲುಗಳಿಸಲು ಸಾಧ್ಯವಾಗಿರಲಿಲ್ಲ. ಈ ಆಟಗಾರರನ್ನು ಜನಾಂಗೀಯ ಕಾರಣಕ್ಕೆ ಟೀಕಿಸುವ ಸಂದೇಶಗಳು ಇಂಗ್ಲೆಂಡ್‌ ದೇಶದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಮಾರ್ಕಸ್‌ ರಷ್‌ಫೋರ್ಡ್‌, ಬುಕಾಯೊ ಸಾಕಾ ಮತ್ತು ಜೇಡೆನ್ ಸ್ಯಾಂಚೊ

ಇದನ್ನೂ ಓದಿ: ಯುರೋ ಕಪ್‌ ಫೈನಲ್‌: ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಇಟಲಿ ತಂಡ

ರಷ್‌ಫೋರ್ಡ್‌ ಗೋಲು ಗಳಿಸಲು ವಿಫಲವಾಗಿದ್ದಕ್ಕೆ ಭಾವನಾತ್ಮಕ ಟ್ವೀಟ್‌ ಮಾಡಿ ಇಂಗ್ಲೆಂಡ್‌ ಜನತೆಯ ಕ್ಷಮೆ ಕೋರಿದ್ದಾರೆ. 55 ವರ್ಷಗಳ ನಂತರ ಫೈನಲ್ ಪ್ರವೇಶ. ಗೆಲುವಿಗೆ ಒಂದು ಪೆನಾಲ್ಟಿ ಗೆಲುವನ್ನು ನಮ್ಮಿಂದ ಕಸಿದುಕೊಂಡಿತು. ಇದಕ್ಕಾಗಿ ಕ್ಷಮೆ ಕೋರುತ್ತೇನೆ” ಎಂದು ರಾಷ್‌ಫೋರ್ಡ್‌ ಟ್ವೀಟ್‌ ಮಾಡಿದ್ದಾರೆ.

ಗೋಲು ಗಳಿಸಲು ವಿಫಲವಾಗಿದ್ದಕ್ಕೆ ವಿಷಾದವಿದೆ. ನಾನು ನಾನಾಗಿರುವುದಕ್ಕೆ ಮತ್ತು ನಾನು ಬಂದಿರುವ ಪ್ರದೇಶದ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ರಾಷ್‌ಫೋರ್ಡ್‌ ತಮ್ಮ ವಿರುದ್ಧ ಕೆಳಿಬರುತ್ತಿರುವ ಜನಾಂಗೀಯ ನಿಂದನೆಗೆ ಭಾವನಾತ್ಮಕ ಸಂದೇಶದ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಧರ್ಮದ ಹೆಸರಿನ ತಾರತಮ್ಯ ಕೂಡಾ ಜನಾಂಗೀಯ ನಿಂದನೆ ಆಗಿದೆ: ಇರ್ಫಾನ್ ಪಠಾಣ್

ಜಗತ್ತಿನ ಸುಪ್ರಸಿದ್ಧ ಕ್ರೀಡಾಪಟುಗಳು ಇಂಗ್ಲೆಂಡ್‌ ಆಟಗಾರರಿಗೆ ಬೆಂಬಲಿಸಿ ಜನಾಂಗೀಯ ನಿಂದನೆಯನ್ನು ಖಂಡಿಸಿದ್ದಾರೆ. ವರ್ಣ ತಾರತಮ್ಯದ ಮನೋಭಾವನೆ ಮನುಷ್ಯತ್ವಕ್ಕೆ ವಿರುದ್ಧವಾದದ್ದು ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಜನಾಂಗೀಯ ನಿಂದನೆಯಿಂದಾಗಿ ಬ್ರಿಟನ್‌ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜಕುಮಾರ ಪ್ರಿನ್ಸ್‌ ವಿಲಿಯಮ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಬ್ರಿಟನ್ ಅಧ್ಯಕ್ಷ ಬೋರಿಸ್‌ ಜಾನ್ಸನ್‌ ಜನಾಂಗೀಯ ನಿಂದನೆಯನ್ನು ಖಂಡಿಸಿದ್ದು ಬ್ರಿಟನ್ ನೆಲ ಜಗತ್ತಿನ ಎಲ್ಲಾ ಧರ್ಮ, ಜನಾಂಗಗಳನ್ನು ಒಳಗೊಂಡಿದ್ದು ಎಲ್ಲರ ಪರವಾಗಿ ನಿಲ್ಲುತ್ತದೆ. ರಷ್‌ಫೋರ್ಡ್ ವಿರುದ್ಧದ ನಿಂದನೆಯನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಘಟನೆಗಳಿಗೆ ಬ್ರಿಟನ್‌ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಬ್ರಿಟನ್‌ ಗೃಹ ಸಚಿವೆ ಪ್ರೀತಿ ಪಟೇಲ್ ಕೂಡ ಈ ಘಟನೆಯನ್ನು ಖಂಡಿಸಿದ್ದು, ತಾರತಮ್ಯವನ್ನು ಸಹಿಸಲು ಸಾಧ್ಯವಿಲ್ಲವೆಂದಿದ್ದಾರೆ.

ಟೂರ್ನಿಮೆಂಟ್‌ ಆರಂಭದಲ್ಲಿ ತಂಡವನ್ನು ಪ್ರಕಟಿಸಿದಾಗ ಕಪ್ಪು ವರ್ಣೀಯರಿಗೆ ಅವಕಾಶ ನೀಡಿರುವುದು ತೋರಿಕೆಯ ರಾಜಕೀಯ ಎಂದು ನೀವು ಹೇಳಿದ್ದಿರಿ. ಟೂರ್ನಿಯ ಉದ್ದಕ್ಕೂ ಆಟಗಾರರ ವಿರುದ್ಧ ಪ್ರೇಕ್ಷಕರು ನಿಂದಿಸುತ್ತಿದ್ದಾಗ ಪ್ರಧಾನಿಗಳು ಯಾವುದೇ ಖಂಡನೆ ವ್ಯಕ್ತಪಡಿಸಲಿಲ್ಲ. ಎಂದು ಇಂಗ್ಲೆಂಡ್‌ನ ಪ್ರಸಿದ್ಧ ಫುಟ್ಬಾಲ್‌ ಆಟಗಾರ ಬ್ರಿಟನ್‌ ಸರ್ಕಾರದ ಇಬ್ಬಗೆಯ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್‌ ಫುಟ್ಬಾಲ್‌ ಅಸೋಸಿಯೇಶನ್‌ ಘಟನೆಯನ್ನು ಖಂಡಿಸಿದ್ದು, ತಾರತಮ್ಯಕ್ಕೆ ಅವಕಾಶವಿಲ್ಲ ಎಂದಿದೆ.

ಈ ಕಷ್ಟದ ಗಳಿಗೆಯಲ್ಲಿ ಇಂಗ್ಲೆಂಡ್‌ ತಂಡ ರಾಷ್‌ಫೋರ್ಡ್‌ ಜೊತೆ ನಿಲ್ಲುತ್ತದೆ. ಇಂಗ್ಲೆಂಡ್‌ ತಂಡ ನಮ್ಮ ಎಲ್ಲಾ ಆಟಗಾರರ ಪರವಾಗಿಯೂ ನಿಲ್ಲುತ್ತದೆ. ಈ ಘಟನೆಯನ್ನು ಕ್ಷಮಿಸಲು ಸಾಧ್ಯವಿಲ್ಲ. ಕ್ರೀಡೆ ಎಲ್ಲರನ್ನು ಒಂದುಗೂಡಿಸುವ ಮಾಧ್ಯಮ. ಇಂಗ್ಲೆಂಡ್‌ ಫುಟ್ಬಾಲ್‌ ತಂಡ ಇದಕ್ಕೆ ಯಾವಾಗಲೂ ಬದ್ಧವಾಗಿರುತ್ತದೆ ಎಂದು ಸೌಥ್‌ಗೇಟ್‌ ಅಂತರ್ಜಾಲ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ.

ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳು ಜನಾಂಗೀಯ ನಿಂದನೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲಿಟ್‌ ಮಾಡುವುದಾಗಿ ಹೇಳಿದ್ದು ಈಗಾಗಲೇ ಸಾವಿರಾರು ಸಂದೇಶಗಳನ್ನು ಟ್ವಿಟ್ಟರ್‌ ಮತ್ತು ಫೇಸ್‌ಬುಕ್‌ಗಳು ಅಳಿಸಿ ಹಾಕಿದ್ದು, ಅಂತಹ ಖಾತೆಗಳನ್ನು ನಿಷ್ಕ್ರಿಯ ಗೊಳಿಸಿವೆ.

– ರಾಜೇಶ್‌ ಹೆಬ್ಬಾರ್‌

ಇದನ್ನೂ ಓದಿ: ಜನಾಂಗೀಯ ತಾರತಮ್ಯದ ಘೋಷಣೆ ಕೂಗುವ ವಿಡಿಯೋ ರಿಟ್ವೀಟ್ ಮಾಡಿದ ಟ್ರಂಪ್!

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

0
ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ. ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್‌ ಅಕ್ಟೋಪ್ರಾಕ್‌, ಯಂಬಾಲಿ ಮತ್ತು ಎಂಗಾ...