ಅಫ್ಘಾನ್ ಮತ್ತು ಪಾಕಿಸ್ತಾನದ ಪ್ರಮುಖ ಗಡಿಯಾಗಿರುವ ಸ್ಪಿನ್ ಬೋಲ್ಡಾಕ್‌ನ ‘ಗಡಿ ಕ್ರಾಸಿಂಗ್ ಕೇಂದ್ರ’ವನ್ನು ತಾವು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನ್ ಬುಧವಾರ ಹೇಳಿದೆ. ವಿದೇಶಿ ಪಡೆಗಳು ಅಫ್ಘಾನಿಸ್ಥಾನದಿಂದ ವಾಪಾಸಾಗುತ್ತಿದ್ದಂತೆ ದೇಶದ ಮೇಲಿನ ಹಿಡಿತವನ್ನು ತಾಲಿಬಾನ್ ಹೆಚ್ಚಿಸುತ್ತಿದೆ.
“ಮುಜಾಹಿದ್ದೀನ್(ತಾಲಿಬಾನ್)ಗಳು ಕಂದಹಾರ್‌ನ ವೆಶ್ ಎಂಬ ಪ್ರಮುಖ ಗಡಿ ಪಟ್ಟಣವನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಸ್ಪಿನ್ ಬೋಲ್ಡಾಕ್, ಚಮನ್ ಮತ್ತು ಕಂದಹಾರ್ ಪದ್ಧತಿಗಳ ನಡುವಿನ ಪ್ರಮುಖ ರಸ್ತೆ ಮುಜಾಹಿದ್ದೀನ್ ನಿಯಂತ್ರಣದಲ್ಲಿದೆ” ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಹೆಚ್ಚಳ: ರಾಯಭಾರಿ ಕಚೇರಿ ಸಿಬ್ಬಂದಿ ಭಾರತಕ್ಕೆ ವಾಪಾಸ್!
ಪಾಕಿಸ್ತಾನದ ಭದ್ರತಾ ಮೂಲವು ದಂಗೆಕೋರರು ಗಡಿ ಕ್ರಾಸಿಂಗ್ ಅನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವುದನ್ನು ದೃಡಪಡಿಸಿದೆ. ಅಫ್ಘಾನ್ ರಕ್ಷಣಾ ಸಚಿವಾಲಯವು ಬೆಳವಣಿಗೆಗಳನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.
“ಚಮನ್-ಸ್ಪಿನ್ ಬೋಲ್ಡಾಕ್ ಗಡಿ ಕ್ರಾಸಿಂಗ್‌ನ ಅಫ್ಘಾನ್ ಭಾಗವನ್ನು ತಾಲಿಬಾನ್ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಅವರು ತಮ್ಮ ಧ್ವಜವನ್ನು ಅಲ್ಲಿ ಹಾರಿಸಿದ್ದು, ಅಫ್ಘಾನ್ ಧ್ವಜವನ್ನು ತೆಗೆದು ಹಾಕಿದ್ದಾರೆ” ಎಂದು ಪಾಕಿಸ್ತಾನದ ಭದ್ರತಾ ಮೂಲವು ತಿಳಿಸಿದ್ದಾರೆ ಎಎಫ್‌ಪಿ ವರದಿ ಮಾಡಿದೆ.
ಅಮೆರಿಕಾ ನೇತೃತ್ವದ ವಿದೇಶಿ ಪಡೆಗಳು ಸೈನ್ಯವನ್ನು ಹಿಂತೆಗೆದುಕೊಳ್ಳಲು ಪ್ರಾರಂಭಿಸಿದ ಮೇ ತಿಂಗಳಿನಿಂದ ತಾಲಿಬಾನ್ ಗ್ರಾಮಾಂತರ ಪ್ರದೇಶದಲ್ಲಿ ವ್ಯಾಪಕ ಆಕ್ರಮಣವನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಅಂದಿನಿಂದ, ಬಂಡುಕೋರರು ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಇರಾನ್‌ನ ಗಡಿಯಲ್ಲಿನ ಕನಿಷ್ಠ ಮೂರು ಕ್ರಾಸಿಂಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ತಾಲಿಬಾನ್ ಆಕ್ರಮಣ: ತಜಕಿಸ್ತಾನದಲ್ಲಿ ರಕ್ಷಣೆ ಪಡೆದ 1000 ಕ್ಕೂ ಹೆಚ್ಚು ಅಫ್ಘಾನ್ ಸೈನಿಕರು


