ದೂರ ಸಂಪರ್ಕ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಹಣದ ಪಾವತಿಗೆ ನಾಲ್ಕು ವರ್ಷಗಳ ಕಾಲಾವಕಾಶದ ಜೊತೆಗೆ ಶೇ.100ರಷ್ಟು ವಿದೇಶಿ ಹೂಡಿಕೆಗೂ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಟೆಲಿಕಾಮ್ ಸಂಸ್ಥೆಗಳು 1.47 ಲಕ್ಷ ಕೋಟಿ ರೂ.ಗಳನ್ನು ಪಾವತಿ ಮಾಡಬೇಕಾಗಿದೆ. ಇದರಲ್ಲಿ ಪಾವತಿಯಾಗದ ಪರವಾನಗಿ ಶುಲ್ಕ ರೂ. 92,642 ಕೋಟಿ ರೂ., ತರಂಗಾಂತರಗಳ ಬಾಕಿ ಶುಲ್ಕ 55,054 ಕೋಟಿ ರೂ. ಇದೆ.
ವೊಡಾಫೋನ್ ಇಂಡಿಯಾ ನೀಡಬೇಕಾಗಿರುವ ಬಾಕಿ 58,000 ಕೋಟಿ ರೂ. ಇದೆ. ಸರ್ಕಾರಕ್ಕೆ ಅತಿಹೆಚ್ಚು ಬಾಕಿ ಉಳಿಸಿಕೊಂಡಿರುವ ಕಂಪೆನಿ ಇದಾಗಿದ್ದು, ಭಾರತಿ ಏರ್‌ಟೆಲ್ ಮತ್ತು ಟಾಟಾ ಟೆಲಿಸರ್ವೀಸ್ ನಂತರದ ಸ್ಥಾನಗಳಲ್ಲಿವೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವರಾದ ಅಶ್ವಿನಿ ವೈಷ್ಣವ್, ದೂರಸಂಪರ್ಕದಲ್ಲಿ ಸುಧಾರಣೆ ತರಲಾಗುತ್ತಿದೆ. ಬಾಕಿ ಪಾವತಿಯನ್ನು ಮುಂದೂಡಲಾಗುತ್ತಿದ್ದು, ಇದಕ್ಕೆ ಕಂಪೆನಿಗಳು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದಿದ್ದಾರೆ.
ಬಾಕಿ ವಸೂಲಾಗದ ಸಂಬಂಧ ಸುಪ್ರೀಂಕೋರ್ಟ್ ಗಮನ ಸೆಳೆದಿತ್ತು. ಸಾರ್ವಜನಿಕ ಸಂಸ್ಥೆಗಳಿಂದ ಬಾಕಿಯನ್ನು ತುಂಬಿಕೊಡುವಂತೆ ದೂರಸಂಪರ್ಕ ಇಲಾಖೆ ಕೋರಿದ್ದನ್ನು ಸುಪ್ರೀಂ ಕೋರ್ಟ್ ಟೀಕಿಸಿತ್ತು.
ಇದನ್ನೂ ಓದಿ: ಟೆಲಿಕಾಂ ಕುರಿತ ನಮ್ಮ ತೀರ್ಪು ದುರುಪಯೋಗವಾಗುತ್ತಿದೆ : ಕೇಂದ್ರಕ್ಕೆ ಸುಪ್ರೀಂ ಚಾಟಿ


