ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ರೈತರು ಎಲ್ಲೆಂದರಲ್ಲಿ ಮದ್ಯ ಸೇವಿಸುತ್ತಿರುವ ದೃಶ್ಯಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಕೃಷಿ ಕಾನೂನುಗಳಿಗೆ ವಿರುದ್ದವಾಗಿ ರೈತರು ಸೆಪ್ಟೆಂಬರ್ 05, 2021 ರಂದು ಮುಜಾಫರ್ ನಗರದಲ್ಲಿ ‘ಕಿಸಾನ್ ಮಹಾಪಂಚಾಯತ್’ ನಡೆಸಿದ ಹಿನ್ನೆಲೆಯಲ್ಲಿ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಪ್ರತಿಪಾದನೆ: ‘ ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ರೈತರು ಎಲ್ಲೆಂದರಲ್ಲಿ ಮದ್ಯವನ್ನು ಸೇವಿಸುತ್ತಿರುವ ದೃಶ್ಯಗಳು
ಫ್ಯಾಕ್ಟ್‌ಚೆಕ್
ಪೋಸ್ಟ್‌ನಲ್ಲಿ ಷೇರ್ ಮಾಡಿದ ವಿಡಿಯೋದ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗುತ್ತಿರುವ ಈ ವಿಡಿಯೋ ಕುರಿತು ಸ್ಪಷ್ಟನೆ ನೀಡುವು ಟ್ರಾಕ್ಟರ್ ಟು ಟ್ವಿಟರ್ ಖಾತೆಯ ಟ್ವೀಟ್ ಒಂದು ಕಂಡುಬಂದಿದೆ. ‘ಬಾಬಾ ರೋಡ್ ಷಾ ಜಿ’ ಮೇಳಕ್ಕೆ ಸಂಬಂಧಿಸಿದ ವಿಡಿಯೋವನ್ನು ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ರೈತರು ಮದ್ಯಕ್ಕಾಗಿ ಪರಾದಾಡುತ್ತಿರುವ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳುತ್ತಿರುವುದಾಗಿ ಆ ಟ್ವೀಟ್‌ನಲ್ಲಿ ತಿಳಿಸಲಾಗಿದೆ.
Hate mongers like @rishibagree are shamelessly using an old video of a local mela from Punjab to defame protesting farmers.@CPDelhi @PunjabPoliceInd @HaryanaPolice27 Please book this person for spreading false info & hatred against farmers.
Source: https://t.co/yvmUuEeu8p pic.twitter.com/vcow1fIjPp
— Tractor2ਟਵਿੱਟਰ (@Tractor2twitr) September 16, 2021
ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಎರಡು ಬೇರೆ ಬೇರೆ ವಿಡಿಯೋ ಕ್ಲಿಪ್‌ಗಳು ಇರುವುದನ್ನು ನಾವು ಗಮನಿಸಬಹುದು. ಮೇಲಿನ ವಿವರಗಳ ಆಧಾರವಾಗಿ ಈ ವಿಡಿಯೋ ಕ್ಲಿಪ್‌ಗಳಿಗೆ ಸಂಬಂಧಿಸಿದ ವಿವರಗಳನ್ನು ಒಂದೊಂದಾಗಿ ತಿಳಿದಿಕೊಳ್ಳೋಣ.
ವಿಡಿಯೋ ಕ್ಲಿಪ್ -1
ಈ ವಿಡಿಯೋ ಕ್ಲಿಪ್‌ನಲ್ಲಿನ ದೃಶ್ಯಗಳನ್ನು ಗುಗೂಲ್‌ನಲ್ಲಿ ಹುಡುಕಿದಾಗ. ಇವೇ ದೃಶ್ಯಗಳು ಇರುವ ವಿಡಿಯೋವನ್ನು ಬಳಕೆದಾರನೊಬ್ಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ‘‘ಬಾಬಾ ರೋಡ್ ಷಾ ಜಿ’ ಮೇಳದಲ್ಲಿ ಎಲ್ಲೆಂದರಲ್ಲಿ ಮದ್ಯ ಸರಬರಾಜು ಮಾಡುತ್ತಿರುವ ದೃಶ್ಯಗಳೆಂದು” ವಿಡಿಯೋ ವಿವರಣೆಯಲ್ಲಿ ತಿಳಿಸಿದ್ದಾರೆ. ಪಂಜಾಬ್ ರಾಜ್ಯದ ಕೌಂಕೆ ಕಲಾನ್ ಎನ್ನುವ ಗ್ರಾಮದಲ್ಲಿ ಪ್ರತಿ ವರ್ಷ ಈ ‘ಬಾಬಾ ರೋಡ್ ಷಾ ಜಿ’ ಮೇಳಾ ನಡೆಸುತ್ತಾರೆ. 06 ಸೆಪ್ಟೆಂಬರ್ 2021 ರಂದು ನಡೆದ ‘ ಬಾಬಾ ರೋಡ್ ಷಾ ಜಿ’ ಮೇಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪೂರ್ತಿ ವಿಡಿಯೋವನ್ನು ‘PunjabLive1.com’ ನ್ಯೂಸ್ ಚಾನೆಲ್ ಪ್ರಕಟಿಸಿದೆ. ಪೋಸ್ಟ್ ನಲ್ಲಿ ಹಂಚಿಕೊಂಡ ವಿಡಿಯೋ ಕ್ಲಿಪ್‌ನಲ್ಲಿನ ಒಬ್ಬ ವ್ಯಕ್ತಿ, ಈ ವಿಡಿಯೋದಲ್ಲಿಯೂ ಸಹ ಕಾಣಿಸುತ್ತಿರುವುದನ್ನು ನಾವು ಗಮನಿಸಬಹುದು. ಬಾಬಾ ರೋಡ್ ಷಾ ಜಿ’ ಮೇಳಕ್ಕೆ ಸಂಬಂಧಿಸಿ ಹಂಚಿಕೊಂಡಿರುವ ಮತ್ತೊಂದು ವಿಡಿಯೋದಲ್ಲಿಯೂ ಸಹ ಈ ವ್ಯಕ್ತಿ ಕಾಣಿಸುತ್ತಿರುವುದರ ಆದಾರದ ಮೇಲೆ ಈ ವಿಡಿಯೋ ‘ಬಾಬಾ ರೋಡ್ ಷಾ ಜಿ’ ಮೇಳಕ್ಕೆ ಸಂಬಂಧಿಸಿರುವುದೆಂದು ಖಚಿತವಾಗಿ ಹೇಳಬಹುದು.
ವಿಡಿಯೋ ಕ್ಲಿಪ್ -2
ಈ ವಿಡಿಯೋ ಕ್ಲಿಪ್‌ನಲ್ಲಿನ ದೃಶ್ಯಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿ ಹುಡುಕಿದಾಗ, ಇದೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ‘ ಬಾಬಾ ರೋಡ್ ಷಾ ಜಿ’ ಮೇಳಕ್ಕೆ ಸಂಬಂಧಿಸಿದ ವಿಡಿಯೋವಾಗಿ ಹಂಚಿಕೊಂಡಿರುವುದಾಗಿ ತಿಳಿಯಿತು. ಆ ವಿಡಿಯೋಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಇವೇ ದೃಶ್ಯಗಳೊಂದಿಗೆ ಹೋಲಿಕೆ ಇರುವ ವಿಡಿಯೋವನ್ನು ‘Daily News Punjab’ ವಾಹಿನಿ 07 ಸೆಬ್ಟಂಬರ್ 2021ರಂದು ಪ್ರಕಟಿಸಿದೆ. ಈ ವಿಡಿಯೋದಲ್ಲಿನ ದೃಶ್ಯಗಳು ‘ ಬಾಬಾ ರೋಡ್ ಷಾ ಜಿ’ ಮೇಳಕ್ಕೆ ಸಂಬಂಧಿಸಿರುವವೆಂದು ವಿಡಿಯೋ ವಿವರಣೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮದ ಹೆಸರಿನಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸಂದೀಪ್ ಸಿಂಗ್ ಎನ್ನುವ ಸ್ವತಂತ್ರ ಪತ್ರಕರ್ತ, ಕೌಂಕೆ ಕಲಾನ್ ಗ್ರಾಮಸ್ಥರನ್ನು ವಿಡಿಯೋದ ಸ್ಪಷ್ಟತೆಗಾಗಿ ಸಂದರ್ಶಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ 06 ಸೆಪ್ಟೆಂಬರ್ 2021 ರಂದು ನಡೆದ ‘ಬಾಬಾ ರೋಡ್ ಶಾ ಜಿ’ ಮೇಳಕ್ಕೆ ಸಂಬಂಧಿಸಿದೆ ಎಂದು ಕೌಂಕೆ ಕಲಾನ್ ಗ್ರಾಮಸ್ಥರು ಸಂದೀಪ್ ಸಿಂಗ್ ಅವರಿಗೆ ಹೇಳಿದ್ದಾರೆ. ಈ ತನಿಖಾ ವೀಡಿಯೋದಲ್ಲಿ ಕಾಣುವ ಕಟ್ಟಡಗಳು ಮತ್ತು ಬಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಕಾಣುವ ದೃಶ್ಯಗಳನ್ನು ಹೋಲುತ್ತವೆ. ಇದರ ಜೊತೆಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋ, ‘ಬಾಬಾ ರೋಡ್ ಶಾ ಜಿ’ ಮೇಳಕ್ಕೆ ಸಂಬಂಧಿಸಿದೆ ಎಂದು ಜನ ಶಕ್ತಿ ನ್ಯೂಸ್ ಪಂಜಾಬ್ ಸುದ್ದಿ ವಾಹಿನಿ ಸ್ಪಷ್ಟಪಡಿಸಿದೆ. ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮಕ್ಕೆ ಸಂಬಂಧಿಸಿಲ್ಲ ಎಂದು ಖಚಿತವಾಗಿ ಹೇಳಬಹುದು.
ಒಟ್ಟಿನಲ್ಲಿ, ‘ಬಾಬಾ ರೋಡ್ ಷಾ’ ಮೇಳಕ್ಕೆ ಸಂಬಂಧಿಸಿದ ವಿಡಿಯೋವನ್ನು ಕಿಸಾನ್ ಮಹಾಪಂಚಾಯತ್‌ನಲ್ಲಿ ರೈತರು ಮದ್ಯಕ್ಕಾಗಿ ಕಿತ್ತಾಡುತ್ತಿರುವ ದೃಶ್ಯವೆಂದು ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: ಫ್ಯಾಕ್ಟ್ ಚೆಕ್: ಮೋದಿ ಕೊನೆಯ ಭರವಸೆಯೆಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿಲ್ಲ, ಇದು ಎಡಿಟ್ ಫೋಟೊ



