2020ರಲ್ಲಿ ಬಿಡುಗಡೆಯಾದ ಮಲಯಾಳಂ ಸಿನಿಮಾಗಳಿಗೆ ಸಂಬಂಧಿಸಿದಂತೆ 51ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಜಿಯೋ ಬೇಬಿ ಅವರು ನಿರ್ದೇಶಿಸಿರುವ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಆಯ್ಕೆಯಾಗಿದೆ.
‘ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾವು ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಮಹಿಳಾ ಸ್ವಾವಲಂಬನೆ, ಮಹಿಳಾ ಸ್ವತಂತ್ರಕ್ಕೆ ಅಡುಗೆ ಮನೆಯೇ ಅತಿದೊಡ್ಡ ಸಂಕೋಲೆಯಾಗಿರುವುದನ್ನು ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿತ್ತು. ದೃಶ್ಯಗಳೇ ಮಾತನಾಡುವಂತೆ ಚಿತ್ರಕತೆಯನ್ನು ಜಿಯೋ ಬೇಬಿ ಎಣೆದಿದ್ದು, ಚಿತ್ರಕತೆ ಪ್ರಶಸ್ತಿಗೆ ಅವರು ಆಯ್ಕೆಯಾಗಿದ್ದಾರೆ.
‘ವೆಲ್ಲಮ್’ ಚಿತ್ರದ ನಟನೆಗಾಗಿ ಜಯಸೂರ್ಯ ಅತ್ಯುತ್ತಮ ನಟ, ‘ಕಪ್ಪೆಲ’ ಸಿನಿಮಾ ನಟನೆಗಾಗಿ ಅನ್ನಾ ಬೆನ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.


‘ಅಯ್ಯಪ್ಪನ್ನುಮುಂ ಕೋಶಿಯುಂ’ ಅತ್ಯುತ್ತಮ ಮನರಂಜನಾ ಸಿನಿಮಾವಾಗಿ ಆಯ್ಕೆಯಾಗಿದೆ. ಈ ಸಿನಿಮಾದ ನಿರ್ದೇಶಕ ಸಚ್ಚಿ (ಸಚ್ಚಿದಾನಂದ) 2020ರ ಜೂನ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಖ್ಯಾತ ನಟಿ ಸುಹಾಸಿನಿ ಮಣಿರತ್ನಂ ಅಧ್ಯಕ್ಷತೆಯಲ್ಲಿ ರೂಪಿಸಿದ್ದ ಪ್ರಶಸ್ತಿ ಸಮಿತಿಯಲ್ಲಿ ಕನ್ನಡ ಚಿತ್ರನಿರ್ದೇಶಕ ಪಿ.ಶೇಷಾದ್ರಿ ಅವರೂ ಇದ್ದರು. ಒಟ್ಟು ಎಂಬತ್ತು ಸಿನಿಮಾಗಳು ಪ್ರಶಸ್ತಿ ಸುತ್ತಿನಲ್ಲಿದ್ದವು.
ಪ್ರಶಸ್ತಿ ಪಟ್ಟಿ
ಅತ್ಯುತ್ತಮ ನಟ : ಜಯಸೂರ್ಯ (ವೆಲ್ಲಮ್), ಅತ್ಯುತ್ತಮ ನಟಿ : ಅನ್ನಾ ಬೆನ್ (ಕಪ್ಪೆಲ), ಅತ್ಯುತ್ತಮ ಸಿನಿಮಾ: ದಿ ಗ್ರೇಟ್ ಇಂಡಿಯನ್ ಕಿಚನ್ (ನಿರ್ದೇಶನ – ಜಿಯೋ ಬೇಬಿ), ಅತ್ಯುತ್ತಮ ಮನರಂಜನಾತ್ಮಕ ಸಿನಿಮಾ: ಅಯ್ಯಪ್ಪನುಮ್ ಕೋಶಿಯುಂ (ನಿರ್ದೇಶನ : ಸಚಿ), ಅತ್ಯುತ್ತಮ ನಿರ್ದೇಶಕ: ಸಿದ್ಧಾರ್ಥ ಶಿವ (ಎನ್ನಿವರ್), ಅತ್ಯುತ್ತಮ ಚೊಚ್ಚಲ ನಿರ್ದೇಶನ: ಮೊಹಮ್ಮದ್ ಮುಸ್ತಾಫಾ (ಕಪ್ಪೆಲಾ), ಅತ್ಯುತ್ತಮ ಚಿತ್ರಕಥೆ : ಜಿಯೋ ಬೇಬಿ (ದಿ ಗ್ರೇಟ್ ಇಂಡಿಯನ್ ಕಿಚನ್), ಅತ್ಯುತ್ತಮ ಸಂಕಲನ : ಮಹೇಶ್ ನಾಯಾಯಣನ್ (ಸಿ ಯೂ ಸೂನ್), ಅತ್ಯುತ್ತಮ ಸಂಗೀತ ನಿರ್ದೇಶಕ : ಎಂ.ಜಯಚಂದ್ರನ್ (ಸೂಫಿಯಂ ಸುಜಾತಯಂ), ಅತ್ಯುತ್ತಮ ಗಾಯಕ : ಶಾಬಾಝ್ ಅಮಾನ್, ಅತ್ಯುತ್ತಮ ಗಾಯಕಿ : ನಿತ್ಯಾ ಮಮ್ಮೆನ್, ಅತ್ಯುತ್ತಮ ಗೀತರಚನೆ : ಅನ್ವರ್ ಅಲಿ.



ಅಯ್ಯಪ್ಪನುಂ ಕೋಶಿಯುಂ ಸಿನಿಮಾ ನಿರ್ದೇಶಕರಾದ ಸಚ್ಚಿದಾನಂದ ಮರಣಹೊಂದಿದ್ದು 2020 ಜೂನ್ ತಿಂಗಳಲ್ಲಿ.