ಕೊರೊನಾ ಒಂದನೆ ಮತ್ತು ಎರಡನೇ ಅಲೆಯ ಸಮಯದಲ್ಲಿ ಭಾರಿ ಸಂಕಷ್ಟಕ್ಕೆ ಒಳಗಾಗಿದ್ದ ಮಹಾರಾಷ್ಟ್ರದಲ್ಲಿ ಇದೀಗ ಸೋಂಕು ತಹಬದಿಗೆ ಬಂದಿದೆ. ರಾಜ್ಯವು ತನ್ನ ಕೊರೊನಾ ನಿಯಮಗಳನ್ನು ಹಂತ-ಹಂತವಾಗಿ ಸಡಿಲಿಕೆ ಮಾಡುತ್ತಿದೆ. ರಾಜ್ಯದ ಹೊಸ ನಿಮಯಗಳಂತೆ ಇಂದಿನಿಂದ ರೆಸ್ಟೋರೆಂಟ್‌ಗಳು ಮಧ್ಯರಾತ್ರಿ 12 ರ ವರೆಗೆ ಮತ್ತು ಅಂಗಡಿಗಳನ್ನು ರಾತ್ರಿ 11 ಗಂಟೆಯವರೆಗೆ ತೆರೆದಿಡಲು ಅನುಮತಿ ನೀಡಲಾಗಿದೆ.
ಇದಕ್ಕಿಂತಲೂ ಮುಂಚೆ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿಗೆ ರಾತ್ರಿ 10 ರವರೆಗೆ ಮಾತ್ರ ತೆರೆದಿಡಲು ಅನುಮತಿ ನೀಡಲಾಗಿತ್ತು. ಹೊಸ ಸಡಿಲಿಕೆ ಘೋಷಣೆಯಾಗಿದ್ದರೂ, ರೆಸ್ಟೋರೆಂಟ್ ಸಿಬ್ಬಂದಿಗೆ ಸಂಪೂರ್ಣವಾಗಿ ಲಸಿಕೆ ಹಾಕುವುದು ಅತ್ಯಗತ್ಯ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ರೈತರ ಹತ್ಯಾಕಾಂಡ ವಿರೋಧಿಸಿ ಮಹಾರಾಷ್ಟ್ರ ಬಂದ್: ಅಂಗಡಿ ಮುಂಗಟ್ಟು, ಮಾರುಕಟ್ಟೆ ಸಂಪೂರ್ಣ ಬಂದ್
ಹೆಚ್ಚುವರಿ ಕ್ರಮವಾಗಿ, ಅಗತ್ಯವೆನಿಸಿದರೆ ಸಮಯವನ್ನು ಕಡಿತಗೊಳಿಸಲು ಸ್ಥಳೀಯ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಆದರೆ ಯಾವುದೇ ಹೆಚ್ಚುವರಿ ಸಮಯದ ವಿಸ್ತರಣೆಯನ್ನು ವಿಶೇಷ ಅನುಮತಿಯಿಲ್ಲದೆ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಚೇರಿಯು ಈ ಆದೇಶದ ಪ್ರತಿಯೊಂದಿಗೆ ಸುದ್ದಿಯನ್ನು ಟ್ವೀಟ್ ಮಾಡಿದೆ.
Restaurants & eateries can now remain open till 12 midnight, while shops and establishments can stay open till 11 pm with immediate effect. pic.twitter.com/HqPXctl620
— CMO Maharashtra (@CMOMaharashtra) October 19, 2021
ಸೋಮವಾರವಷ್ಟೇ ವ್ಯವಹಾರದ ಸಮಯವನ್ನು ವಿಸ್ತರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು.
ಇದನ್ನೂ ಓದಿ: ಮಹಾರಾಷ್ಟ್ರ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರ ಬಂಧನ
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಕುಸಿಯುತ್ತಿರುವುದರಿಂದ ಸರ್ಕಾರವು ಮನೋರಂಜನಾ ಉದ್ಯಾನವನಗಳು ಮತ್ತು ಚಿತ್ರಮಂದಿರಗಳನ್ನು ಮತ್ತೆ ತೆರೆಯುವುದಾಗಿ ಘೋಷಿಸಿತ್ತು. ಚಿತ್ರಮಂದಿರಗಳನ್ನು ಅಕ್ಟೋಬರ್ 22 ರಿಂದ ತೆರೆಯಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಕಳೆದ ತಿಂಗಳು, ರಾಜ್ಯದ ಅತೀ ದೊಡ್ಡ ಆಚರಣೆಯಾದ ಗಣೇಶ ಹಬ್ಬದ ಸಮಯದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕಟ್ಟುಪಾಡುಗಳನ್ನು ಜಾರಿಗೆ ತಂದಿತ್ತು.
“ಹಬ್ಬಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ಯಾರೂ ಬಯಸುವುದಿಲ್ಲ. ಆದರೆ ಜನರ ಜೀವನ ಬಹಳ ಮುಖ್ಯವಾದುದಾಗಿದೆ” ಎಂದು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.
ಮಹಾರಾಷ್ಟ್ರದಲ್ಲಿ ಇದುವರೆಗೂ 65.9 ಲಕ್ಷ ಜನರಿಗೆ ಕೊರೊನಾ ಸೋಂಕಿದ್ದು, ಇದುವರೆಗೂ 1.4 ಲಕ್ಷ ಜನರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, 26 ಆರೋಪಿಗಳ ಬಂಧನ


