Homeಮುಖಪುಟಆರ್‌‌ಎಸ್‌‌ಎಸ್‌ನ ಅನೇಕ ವಿಚಾರಗಳು ಎಡಪಂಥೀಯದಂತಿವೆ: ದತ್ತಾತ್ರೇಯ ಹೊಸಬಾಳೆ

ಆರ್‌‌ಎಸ್‌‌ಎಸ್‌ನ ಅನೇಕ ವಿಚಾರಗಳು ಎಡಪಂಥೀಯದಂತಿವೆ: ದತ್ತಾತ್ರೇಯ ಹೊಸಬಾಳೆ

- Advertisement -
- Advertisement -

ಆರ್‌ಎಸ್‌ಎಸ್‌ನ ಹಲವು ವಿಚಾರಗಳು ಎಡಪಂಥೀಯದಂತಿವೆ. ಹಿಂದುತ್ವವು ಎಡವೂ ಅಲ್ಲ, ಬಲವೂ ಅಲ್ಲ ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಮುಖಂಡ ರಾಮ್‌ ಮಹದೇವ್‌ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಮಾತನಾಡಿರುವ ಅವರು, ಭೌಗೋಳಿಕ, ಧಾರ್ಮಿಕ ಮತ್ತು ರಾಜಕೀಯ ವಿಭಜನೆಯಾದ ಎಡ-ಬಲ, ಪೂರ್ವ-ಪಶ್ಚಿಮಗಳು ಮಸುಕಾಗಿವೆ, ಕರಗಿಹೋಗಿವೆ ಎಂದು ತಿಳಿಸಿದ್ದಾರೆ.

“ಇದುವರೆಗೆ ಜಗತ್ತು ಎಡಕ್ಕೆ ನಡೆದಿದೆ ಅಥವಾ ಬಲವಂತವಾಗಿ ಎಡಕ್ಕೆ ಹೋಗಿದೆ. ಈಗಿನ ಪರಿಸ್ಥಿತಿಯಲ್ಲಿ ಜಗತ್ತು ಬಲಕ್ಕೆ ಚಲಿಸುತ್ತಿರುವುದರಿಂದ ಅದು ಕೇಂದ್ರದಲ್ಲಿದೆ. ಹಿಂದುತ್ವ ಎಂದರೆ ಎಡವೂ ಅಲ್ಲ, ಬಲವೂ ಅಲ್ಲ” ಎಂದು ಹೇಳಿರುವ ಹೊಸಬಾಳೆ, “ಮಾನವತಾವಾದವು ಹಿಂದುತ್ವದ ಅವಿಭಾಜ್ಯ ಅಂಗ” ಎಂದು ಪ್ರತಿಪಾದಿಸಿದ್ದಾರೆ.

“ನಾನು ಆರ್‌ಎಸ್‌ಎಸ್‌ನಿಂದ ಬಂದವನು. ಸಂಘದ ತರಬೇತಿ ಶಿಬಿರಗಳಲ್ಲಿ ನಮ್ಮ ಬೋಧನೆಯಲ್ಲಿ ನಾವು ಎಂದಿಗೂ ಬಲಪಂಥೀಯರು ಎಂದು ಹೇಳಿಲ್ಲ. ನಮ್ಮ ಅನೇಕ ವಿಚಾರಗಳು ಎಡಪಂಥೀಯ ವಿಚಾರಗಳಂತೆ ಮತ್ತು ಅನೇಕವು ಖಂಡಿತವಾಗಿಯೂ ಬಲಪಂಥೀಯ ವಿಚಾರಗಳಂತೆ ಇವೆ” ಎಂದಿದ್ದಾರೆ.

ಹೀಗಾಗಿ ಬಲ-ಎಡ, ಪೂರ್ವ ಪಶ್ಚಿಮ ಎಂಬ ಭೌಗೋಳಿಕ, ಧಾರ್ಮಿಕ ರಾಜಕೀಯ ವಿಭಾಗೀಕರಣ ಆಗಿದೆ. ಆ ಎಲ್ಲ ವಿಷಯಗಳು ಮಸುಕಾಗಿವೆ, ಮಂಕಾಗಿವೆ ಮತ್ತು ಕರಗಿದೆ ಎಂದು ನಾನು ಭಾವಿಸುತ್ತೇನೆ. ಇಂದು ಜಗತ್ತು ಪರಸ್ಪರರ ಆಲೋಚನೆಗಳನ್ನು ಸ್ವೀಕರಿಸುತ್ತಿದೆ, ಹೊಸ ಮನುಷ್ಯ ಹೊರಹೊಮ್ಮುತ್ತಿದ್ದಾನೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಪ್ರಚಾರಕ್‌ ಹಾಗೂ ಭಾರತೀಯ ಜನ ಸಂಘದ ಅಧ್ಯಕ್ಷರಾಗಿದ್ದ ದೀನ್‌ದಯಾಳ್‌ ಉಪಾಧ್ಯಾಯ ಅವರು, ಪ್ರಾಚೀನ ಭಾರತದ ವಿಚಾರಗಳನ್ನು ಆಧುನಿಕ ಪರಿಭಾಷೆಗೆ ತಂದು ನವಪೀಳಿಗೆ ಹೇಗೆ ಆಚರಿಸಬೇಕೆಂದು ತಿಳಿಸಲು ಯತ್ನಿಸಿದ್ದಾರೆ ಎಂದು ಹೊಸಬಾಳೆ ವಿವರಿಸಿದ್ದಾರೆ.

ಭಾರತದ ವಿಚಾರಗಳಿಗೆ ಹಾಗೂ ಸಂಪ್ರದಾಯಕ್ಕೆ ಪೂರ್ಣ ವಿರಾಮ ಎಂಬುದಿಲ್ಲ. ಪೂರ್ವ- ಪಶ್ಚಿಮ, ಎಡ- ಬಲಗಳೆಲ್ಲವೂ ಪ್ರಸ್ತುತ ರಾಜಕೀಯ ಡಿಸ್‌ಕೋರ್ಸ್ ಹಾಗೂ ಭೌಗೋಳಿಕ ರಾಜಕೀಯ ಎಂದು ಹೇಳಲು ಬಯಸುತ್ತೇನೆ. ಪ್ರಸ್ತುತ ಎಂದರೆ ಎರಡನೇ ಮಹಾಯುದ್ಧ ನಂತರದ ಹಾಗೂ ಜಾಗತೀಕರಣ ಕಾಲವಾಗಿದೆ” ಎಂದು ವಿವರಿಸಿದ್ದಾರೆ.

“ಪಶ್ಚಿಮವು ಸಂಪೂರ್ಣವಾಗಿ ಪೂರ್ವವಲ್ಲ, ಪೂರ್ವವು ಸಂಪೂರ್ಣವಾಗಿ ಪೂರ್ವವಲ್ಲ. ಎಡವು ಸಂಪೂರ್ಣವಾಗಿ ಎಡವಲ್ಲ ಅಥವಾ ಬಲವು ಸಂಪೂರ್ಣವಾಗಿ ಬಲವಲ್ಲ” ಎಂದು ಹೊಸಬಾಳೆ ಅವರು ಒತ್ತಿ ಹೇಳಿದ್ದಾರೆ.

ದೀನದಯಾಳ್ ಉಪಾಧ್ಯಾಯ ಅವರು ಹಿಂದುತ್ವ ಮಾದರಿ ಎಂಬ ಪದವನ್ನು ಬಳಸಿಲ್ಲ, ಆದರೆ ಸಮಗ್ರ ಮಾನವತಾವಾದಿ ತತ್ವಶಾಸ್ತ್ರ ಎಂದು ಬಳಸಿದ್ದಾರೆ ಎಂದು ಹೊಸಬಾಳೆ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ಕಾನೂನಿನ ಭಾರತೀಕರಣ ಕುರಿತು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ  ಎನ್‌.ವಿ.ರಮಣ ಅವರು ಹೇಳಿದ್ದಾರೆಂದು ಉಲ್ಲೇಖಿಸಿರುವ ಹೊಸಬಾಳೆ, “ಸಾಮಾನ್ಯವಾಗಿ ನಮ್ಮ ನ್ಯಾಯ ವಿತರಣೆಯು ಸಾಮಾನ್ಯ ಜನರಿಗೆ ಅನೇಕ ಅಡೆತಡೆಗಳನ್ನು ಉಂಟುಮಾಡುತ್ತಿದೆ. ನ್ಯಾಯಾಲಯದ ಕೆಲಸ ಮತ್ತು ಶೈಲಿಯು ಭಾರತದ ಸಂಕೀರ್ಣತೆಗಳಿಗೆ ಸರಿಹೊಂದುವುದಿಲ್ಲ. ವಸಾಹತುಶಾಹಿ ಮೂಲದ ಕಾನೂನುಗಳು, ಭಾರತೀಯ ಜನಸಂಖ್ಯೆಯ ಅಗತ್ಯಗಳಿಗೆ ಸೂಕ್ತವಾಗಿರುವುದಿಲ್ಲ. ನಮ್ಮ ಕಾನೂನು ವ್ಯವಸ್ಥೆಯ ಭಾರತೀಕರಣ ಇಂದಿನ ಅಗತ್ಯವಾಗಿದೆ” ಎಂದಿದ್ದಾರೆ.


ಇದನ್ನೂ ಓದಿರಿ: ಆರ್‌ಎಸ್‌ಎಸ್‌ ಸಾಮಾಜಿಕ ನ್ಯಾಯದ ವಿರೋಧಿ, ಅದು ಮನುಸ್ಮೃತಿಯನ್ನು ನಂಬುತ್ತದೆ: ಮಲ್ಲಿಕಾರ್ಜುನ ಖರ್ಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೊಸಬಾಲೆಯವರ RSS ಬಗೆಗಿನ ವ್ಯಾಖ್ಯಾನ, ಅಚ್ಚರಿದಾಯಕವಾದರೂ ಸ್ವಾಗತರ್ಹವಾಗಿದೆ.
    ಭಾರತ ಮತ್ತು ಅಲ್ಪಸಂಖ್ಯಾತರ ಬಗ್ಗೆ, ಶ್ರೀ ಮೋಹನ್ ಭಾಗವತ್ ಅವರ ವಿಚಾರಗಳು, ಹೆಗಡೆವರ್ ಮತ್ತು ಇತರೆ ಆರ್ಎಸ್ಎಸ್ ನ ಹಿರಿಯರ ಪರಿಕಲ್ಪನೆಗಿಂತ ಹೆಚ್ಚು ವಾಸ್ತವಿಕ ಮತ್ತು ಇಂದಿನ ಪರಿಸ್ಥಿತಿಗೆ ಅನುಗುಣವಾಗಿದೆ.
    ತಮ್ಮ ವಿಚಾರಧಾರೆ ಹಾಗು ವಾಸ್ತವಂಶಗಳನ್ನು ಸಂಘದ ಎಲ್ಲಾ ಸದಸ್ಯರಿಗೆ ಮನವರಿಕೆ ಮಾಡಿಕೊಡಲು ಅನಿವಾರ್ಯವಾಗಿರುವ ತರಬೇತಿ ಶಿಬಿರಗಳನ್ನು ಶೀಘ್ರವಾಗಿ ಹಮ್ಮಿಕೊಳ್ಳಬೇಕು.
    ಅನಿವಾರ್ಯವಾದರೆ ರಾಜಕೀಯ ಸಂಘಟನೆಯಾದ BJP ಯಿಂದ ಸ್ವಲ್ಪ ಮಟ್ಟದ ಅಂತರವನ್ನು ಕಾಯ್ದು ಕೊಳ್ಳುವತ್ತಾಲೂ ಯೋಚಿಸಬೇಕು.
    ವಿಚಾರಧಾರೆ ಹಾಗು ಅದರ ಅಳವಡಿಕೆ ಮುಖ್ಯವೇ ಹೊರತು ರಾಜಕೀಯ ಅಧಿಕಾರವಲ್ಲ.
    ಈ ನಿಟ್ಟಿನಲ್ಲಿ ಯೋಚಿಸಲಿಕ್ಕದರೂ ಪ್ರಾರಂಭಿಸೋಣ

    ??

    Jai Hind

    Innie

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...