ಈ ವರ್ಷ ದೆಹಲಿಯಲ್ಲಿ ನಡೆದ ಕೋಮುಗಲಭೆಯ ಪ್ರಚೋದಕ ಎಂದು ಆರೋಪಿಸಲಾಗಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ‘ಗೋಲಿ ಮಾರೋ’ (ಗುಂಡು ಹೊಡೆಯಿರಿ) ಎಂಬ ಘೋಷಣೆಗಳು ‘ಮತ್ತೇ’ ಮೊಳಗಿವೆ. ಪ್ರತಿ ಶುಕ್ರವಾರ ನಮಾಜ್ ನಡೆಯುತ್ತಿದ್ದ ಗುರ್ಗಾಂವ್‌ನ ಸೆಕ್ಟರ್ 12 ಎ ಪ್ರದೇಶದಲ್ಲಿ ಬಿಜೆಪಿ ಬೆಂಬಲಿತ ಕೋಮು ಆಧಾರಿತ ಸಂಘಟನೆ ಆಯೋಜಿಸಿದ್ದ ಗೋವರ್ಧನ ಪೂಜೆಯಲ್ಲಿ ಅವರು ಶುಕ್ರವಾರ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿ ‘ಗೋಲಿ ಮಾರೋ’ ಘೋಷಣೆಗಳನ್ನು ಕೂಗಲಾಗಿದೆ.
ಕಳೆದು ವರ್ಷ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ಕಪಿಲ್ ಮಿಶ್ರಾ ನಡೆಸುತ್ತಿದ್ದ ರ್‍ಯಾಲಿಯಲ್ಲಿ ಕೂಡಾ ‘ಗೋಲಿ ಮಾರೊ’ ಘೋಷಣೆಗಳು ಕೂಗಲಾಗಿತ್ತು. ಇದರ ನಂತರ ಅಲ್ಲಿ ಕೋಮುಗಲಭೆ ನಡೆದು ಐವತ್ತಕ್ಕೂ ಹೆಚ್ಚು ಜನರು ಸಾವನಪ್ಪಿದ್ದರು ಹಾಗೂ ಸಾವಿರಾರು ಜನರು ಗಾಯಗೊಂಡು ಕೋಟ್ಯಾಂತರ ರುಪಾಯಿಗಳ ಆಸ್ತಿಪಾಸ್ತಿ ನಷ್ಟವಾಗಿದ್ದವು.
ಇದನ್ನೂ ಓದಿ: ದೆಹಲಿ: ಸ್ಥಳೀಯರ ವಿರೋಧದಿಂದ ನಮಾಜ್‌ಗೆ ನಿಗದಿಪಡಿಸಿದ್ದ 8 ಸ್ಥಳಗಳ ಅನುಮತಿ ವಾಪಸ್
ಗುರುಗಾಂವ್‌ನ ಸೆಕ್ಟರ್ 12ಎ ಸೈಟ್‌ನಲ್ಲಿ ಪ್ರತಿ ಶುಕ್ರವಾರ ನಮಾಜ್ ಅನ್ನು ನಿರ್ವಹಿಸಲಾಗುತ್ತಿತ್ತು. ಆದರೆ ಇದಕ್ಕೆ ಬಿಜೆಪಿ ಬೆಂಬಲಿತ ಕೋಮು ಆಧಾರಿತ ಸಂಘಟನೆಗಳು ಕಳೆದ ಎರಡು ವಾರಗಳಿಂದ ವಿರೋಧ ವ್ಯಕ್ತಪಡಿಸಿ, ನಮಾಜ್‌ಗೆ ಅಡ್ಡಿಪಡಿಸಿವೆ. ಕಳೆದ ತಿಂಗಳ ಕೊನೆಯಲ್ಲಿ, 26 ಜನರ ಬಿಜೆಪಿ ಬೆಂಬಲಿತ ಗುಂಪು ನಮಾಜ್ ಮಾಡುವುದನ್ನು ಅಡ್ಡಿ ಪಡಿಸಿದ್ದಕ್ಕಾಗಿ ಬಂಧಿಸಲಾಗಿತ್ತು.
ಈ ನಡುವೆ ಗುರುಗ್ರಾಮ್ ಆಡಳಿತವು ಮುಸ್ಲಿಮರಿಗೆ ನಮಾಜ್ ಮಾಡಲು ಗೊತ್ತುಪಡಿಸಿದ 37 ಸ್ಥಳಗಳ ಪೈಕಿ ಎಂಟರಲ್ಲಿ ಸ್ಥಳೀಯರ ವಿರೋಧದಿಂದ ಮಂಗಳವಾರ ಅನುಮತಿ ವಾಪಸ್ ಪಡೆದಿದೆ. ಗುರುಗ್ರಾಮ್ ಜಿಲ್ಲಾಡಳಿತದ ಅಧಿಕೃತ ಹೇಳಿಕೆಯ ಪ್ರಕಾರ, ಸ್ಥಳೀಯ ಜನರು ಮತ್ತು ಆರ್‌ಡಬ್ಲ್ಯೂಎಯಿಂದ ಆಕ್ಷೇಪಣೆ ಬಂದಿರುವ ಕಾರಣ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
ಶುಕ್ರವಾರ ಅದೇ ಸ್ಥಳದಲ್ಲಿ ಗೋವರ್ಧನ ಕಾರ್ಯಕ್ರಮದಲ್ಲಿ ಹಿಂದೂ ವಿರೋಧಿಗಳಿಗೆ ಗುಂಡು ಹೊಡೆಯಿರಿ ಎಂದು ಘೋಷಣೆಗಳನ್ನು ಕೂಗಲಾಗಿದೆ. ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಕಪಿಲ್ ಮಿಶ್ರಾ ಪಟಾಕಿ ನಿಷೇಧದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Fact check: ಕಟ್ಟಡದ ಮೇಲೆ ಒಟ್ಟಾಗಿ ನಮಾಜ್ ಮಾಡುತ್ತಿರುವುದು ನಿಜವೇ??
“ನಿಮ್ಮ ರಾಜಕೀಯಕ್ಕಾಗಿ ರಸ್ತೆಗಳನ್ನು ಬಳಸಬೇಡಿ. ನಾವು ಶಾಹೀನ್ ಬಾಗ್‌ನಲ್ಲಿ ಇದನ್ನು ನೋಡಿದ್ದೆವು. ರಸ್ತೆಗಳನ್ನೆಲ್ಲ ಬಂದ್ ಮಾಡಿ ಮನೋರಂಜನೆ ತೋರಿಸಿದ್ರು. ಸಿಎಎ ಹಿಂಪಡೆಯಲಾಗಿದೆಯೇ? ಅಪಧಮನಿಗಳು ಮತ್ತು ನರಗಳನ್ನು ನಿರ್ಬಂಧಿಸಿದರೆ, ದೇಹದ ಚಲನೆಯನ್ನು ನಿಲ್ಲಿಸುತ್ತದೆ. ಹಾಗೆಯೆ ರಸ್ತೆಗಳನ್ನು ನಿರ್ಬಂಧಿಸಿದರೆ, ನಗರ ಮತ್ತು ದೇಶವು ನಿಲ್ಲುತ್ತದೆ” ಎಂದು ಹೇಳಿದ್ದಾರೆ.

“ರಸ್ತೆಗಳನ್ನು ಮುಚ್ಚುವ ಹಕ್ಕು ಯಾರಿಗೂ ಇಲ್ಲ. ಇದು ಯಾವುದೇ ಧರ್ಮದ ಭಾಗವಲ್ಲ ಅಥವಾ ಆಗಲೂ ಸಾಧ್ಯವಿಲ್ಲ… ಗುರ್ಗಾಂವ್‌ನಲ್ಲಿ ಬೀದಿಗಳನ್ನು ನಿರ್ಬಂಧಿಸುತ್ತೀರಾ? ನೀವು ದೆಹಲಿಯಲ್ಲಿ ರಸ್ತೆಗಳನ್ನು ನಿರ್ಬಂಧಿಸುತ್ತೀರಾ? ರಸ್ತೆ ತಡೆ ಮಾಡುವುದು ಧರ್ಮದ ಭಾಗವಲ್ಲ, ಅದು ದೇಶ, ಸೌಲಭ್ಯಗಳು ಮತ್ತು ಆರ್ಥಿಕತೆಯನ್ನು ತಡೆಯುವುದಾಗಿದೆ” ಎಂದು ಅವರು ತಿಳಿಸಿದ್ದಾರೆ.
ಕಪಿಲ್ ಮಿಶ್ರಾ ಭಾಷಣದ ಸಮಯದಲ್ಲಿ, ನೆರೆದಿದ್ದವರು “ಸೆಕ್ಟರ್ 12 ಸರ್ಫ್ ಜಾಂಕಿ ಹೈ, ಪುರ ಗುರುಗ್ರಾಮ್ ಬಾಕಿ ಹೈ” ಎಂಬ ಘೋಷಣೆಯನ್ನು ಕೂಗಿದ್ದಾರೆ. ಜೊತೆಗೆ ಸದಾ ದ್ವೇಷ ಭಾಷಣಗಳಿಗೆ ಹೆಸರುವಾಸಿಯಾಗಿರುವ ಯತಿ ನರಸಿಂಹಾನಂದ ಸಂಗಡಿಗರು ಕೂಡಾ ಭಾಗವಹಿಸಿದ್ದರು.
@KapilMishra_IND at #Gurugram Sector 12 #Govardhan pooja organised to protest against Friday #namaz being offered in open spaces by the Muslim community. #bjp@TheQuint @QuintHindi pic.twitter.com/6PdTbk8JOB
— Eshwar (@hey_eshwar) November 5, 2021
ಕಾರ್ಯಕ್ರಮದಲ್ಲಿ ಕಪಿಲ್ ಮಿಶ್ರಾ ಶಾಂತವಾಗಿ ಭಾಷಣ ಮಾಡಿದ್ದಾರಾದರೂ, ಸಭೆಯಲ್ಲಿ ಪ್ರಚೋಧನಕಾರಿ ಘೋಷಣೆಗಳನ್ನು ಮಾಡಲಾಗಿದೆ. ಅಮಿತ್ ಹಿಂದೂ ಎಂಬ ಕಾರ್ಯಕರ್ತನೊಬ್ಬ, “ಹಿಂದೂ ದ್ರೋಹಿಗಳನ್ನು ಶೂಟ್ ಮಾಡಿ” ಎಂಬ ಘೋಷಣೆಯನ್ನು ಕೂಗಿದ್ದಾನೆ. ಈತ ಯತಿ ನರಸಿಂಹಾನಂದ ಸರಸ್ವತಿ ಅವರ ಆಪ್ತ ಎಂದು ದಿ ವೈರ್ ವರದಿ ಮಾಡಿದೆ.
ಇದನ್ನೂ ಓದಿ: ಹಲಾಲ್ ಮಾಡದಿದ್ದಕ್ಕೆ ಮುಸ್ಲಿಮರಿಂದ ಹಲ್ಲೆ ಎಂಬ ಸುಳ್ಳು ಆರೋಪ: ರೆಸ್ಟೋರೆಂಟ್ ಮಾಲೀಕರ ಬಂಧನ


