‘ವೋಟ್ ಫಾರ್ ಎಂಐಎಂ’ (ಎಂಐಎಂಗೆ ಮತ ನೀಡಿ) ಎಂಬ ಟೀಶರ್ಟ್ ಅನ್ನು ಶಾರುಖ್ ಖಾನ್ ಧರಿಸಿದ್ದಾರೆಂಬ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಹಂಚಿಕೊಂಡಿದ್ದಾರೆ.
ಆಲ್ ಇಂಡಿಯಾ ಮಜ್ಲಿಸ್-ಇ- ಇತ್ತಿಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಹೈದ್ರಾಬಾದ್ ಮೂಲದ ರಾಜಕೀಯ ಪಕ್ಷವಾಗಿದ್ದು, ಅಸಾನುದ್ದೀನ್ ಓವೈಸಿ ಹಾಗೂ ಅಕ್ಬರುದ್ದೀನ್ ಓವೈಸಿ ನಾಯಕತ್ವದ್ದಾಗಿದೆ.
देशभक्त डरा हुआ इंसान ? pic.twitter.com/7OsJrcOpLu
— Me_चैरेवेति_ ME (@chaireveti) November 11, 2021
ಇಲ್ಲಿನ ಚಿತ್ರದ ಹಿಂದಿ ಒಕ್ಕಣೆ ಹೀಗಿದೆ: “15 ನಿಮಿಷಗಳಲ್ಲಿ 100 ಕೋಟಿ ಹಿಂದೂಗಳನ್ನು ಕೊಲ್ಲುವ ಬಗ್ಗೆ ಮಾತನಾಡಿದ ಓವೈಸಿಯನ್ನು ಪ್ರಚಾರ ಮಾಡಲು ಶಾರುಖ್ ಖಾನ್‌ಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ಹಿಂದೂಗಳ ಕೇವಲ 2-4 ನಿದರ್ಶನಗಳು ಮಾತ್ರ ಅಸಹಿಷ್ಣುತೆ ಎಂದಾಗುತ್ತದೆ. ವಾಹ್ ಶಾರುಖ್ ಖಾನ್, ವಾಹ್! ಇದು ನಿಮ್ಮ ಧಾರ್ಮಿಕ ನಿಷ್ಪಕ್ಷಪಾತವಾಗಿದೆ”.
ಹೀಗೆ ಹಂಚಿಕೊಳ್ಳಲಾಗಿರುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ಈ ಫೋಟೋದ ಸತ್ಯಾಸತ್ಯತೆಯನ್ನು ಆಲ್ಟ್‌ನ್ಯೂಸ್ ಪತ್ತೆಹಚ್ಚಿದೆ.

2012ರಲ್ಲಿ, ಅಕ್ಬರುದ್ದೀನ್ ಓವೈಸಿ, “ಬಲಶಾಲಿ 100 ಕೋಟಿ ಹಿಂದೂಗಳಿಗೆ ಶಕ್ತಿಯನ್ನು ತೋರಿಸಲು ಪೊಲೀಸರಿಲ್ಲದೆ ಮುಸ್ಲಿಮರಿಗೆ ಕೇವಲ 15 ನಿಮಿಷಗಳು ಬೇಕಾಗುತ್ತದೆ” ಎಂದು ಹೇಳಿಕೆ ನೀಡಿದ್ದು ಕೋರ್ಟ್ ಮೆಟ್ಟಿಲೇರಿತು. ಆದರೆ ಶಾರುಖ್‌ಖಾನ್ ಎಐಎಂಐಎಂಗೆ ಬೆಂಬಲ ನೀಡಿರುವ ಕುರಿತು ಯಾವುದೇ ವರದಿಗಳಾಗಿಲ್ಲ.

2009ರಲ್ಲಿ ತೆಗೆದಿರುವ ಶಾರುಖ್ ಖಾನ್ ಅವರ ಫೋಟೋವನ್ನು ತಿರುಚಿರುವುದು ವೈರಲ್ ಆಗಿದೆ. Gettyimages ಶೀರ್ಷಿಕೆಯ ಪ್ರಕಾರ, “ಬ್ಲೂ” ಸಿನಿಮಾ ಸೆಟ್‌ನಲ್ಲಿ ಅಕ್ಷಯ್ ಕುಮಾರ್ ಅವರನ್ನು ಭೇಟಿ ಮಾಡಲು ಶಾರುಖ್ ಖಾನ್ ಬಂದಾಗ ಇಂಡಿಯಾ ಟುಡೇ ಗ್ರೂಪ್‌ನ ಯೋಗೇನ್ ಶಾ ಈ ಫೋಟೋವನ್ನು ಕ್ಲಿಕ್ಲಿಸಿದ್ದಾರೆ. ಖಾನ್ ಸಾದಾ ಬಿಳಿ ಟಿ-ಶರ್ಟ್ ಧರಿಸಿದ್ದಾರೆ. ವೈರಲ್ ಆಗಿರುವ ಚಿತ್ರವು, ಮೂಲಚಿತ್ರವನ್ನು ತಿರುಚಿದ್ದಾಗಿದೆ.

ಸುಳ್ಳಿನ ಪ್ರತಿಪಾದನೆಯೊಂದಿಗೆ ಶಾರುಖ್ ಖಾನ್ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ದ್ವೇಷ ಬಿತ್ತಲು ಯತ್ನಿಸಲಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.


