Homeಕರ್ನಾಟಕಮುಸ್ಲಾಪುರ ಮದ್ಯದಂಗಡಿ ಪ್ರಕರಣ; ಬಂಧನ ಭೀತಿಯಲ್ಲಿ ಊರು ತೊರೆದ ಗ್ರಾಮಸ್ಥರು!

ಮುಸ್ಲಾಪುರ ಮದ್ಯದಂಗಡಿ ಪ್ರಕರಣ; ಬಂಧನ ಭೀತಿಯಲ್ಲಿ ಊರು ತೊರೆದ ಗ್ರಾಮಸ್ಥರು!

ಗ್ರಾಮದಲ್ಲಿ ತೆರೆದ ಬಾರ್‌ ಮುಚ್ಚುವಂತೆ ಮಹಿಳೆಯರು ಪ್ರಶ್ನಿಸಿದಾಗ ಗಲಾಟೆ ನಡೆದಿದೆ. 41 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದೂ ಆರೋಪಿಸಲಾಗಿದೆ.

- Advertisement -
- Advertisement -

ಕಡೂರು ತಾಲ್ಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಬಾರ್‌ ತೆರೆದಿದ್ದಕ್ಕೆ ಆಕ್ರೋಶಗೊಂಡ ಗ್ರಾಮದ ಮಹಿಳೆಯರು ನವೆಂಬರ್‌‌ 12ರಂದು ಬಾರ್‌ಗೆ ನುಗ್ಗಿ ಪೀಠೋಪಕರಣಗಳನ್ನೆಲ್ಲ ಮುರಿದುಹಾಕಿದ ಸುದ್ದಿ, ವೀಡಿಯೋ ಸಾಮಾಜಿಕ ಜಾಲತಾಣವೂ ಸೇರಿದಂತೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಮುಸ್ಲಾಪುರ ನಾಲ್ಕೈದು ಸಮುದಾಯಗಳ ಸುಮಾರು 150 ಮನೆಗಳಿರುವ ಪುಟ್ಟ ಗ್ರಾಮ. ಕೃಷಿ ಭೂಮಿಯಲ್ಲಿ ಕೂಲಿ ಮಾಡುವುದು ಇಲ್ಲಿನ ಬಹುತೇಕ ಜನರ ಬದುಕಾಗಿತ್ತು. ಹೀಗೆ ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಊರಿನಲ್ಲಿ ಹೋಟೆಲ್‌ ಹೆಸರಿನಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಒಂದನ್ನು ಆರಂಭ ಮಾಡಲಾಯಿತು.
ಆರಂಭದಿಂದಲೇ ಇದಕ್ಕೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಬಾರ್‌ ಇರುವ ಸಮೀಪದಲ್ಲಿಯೇ ಹೈಸ್ಕೂಲ್‌ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ಗಳಿದ್ದು, ಹತ್ತಿರದಲ್ಲಿಯೇ ಮದಗದಕೆರೆ ಹಾಗೂ ಚಾನೆಲ್‌ ಇದೆ. ಗ್ರಾಮದಲ್ಲಿ ಬಾರ್‌ ತೆರೆದರೆ ಕೂಲಿ ಕಾರ್ಮಿಕರು ದುಡಿದ ಹಣವನ್ನು ಕುಡಿಯುವುದಕ್ಕೆ ವ್ಯಯಿಸುತ್ತಾರೆ ಎನ್ನುವ ಮಹಿಳೆಯರು, ನಮ್ಮೂರಿನ ಸ್ವಾಸ್ಥ್ಯಕ್ಕಾಗಿ ನಮ್ಮೂರಿನಲ್ಲಿ ಬಾರ್‌ ಬೇಡ ಎಂದು ಅಲವತ್ತುಕೊಂಡಿದ್ದರು.
ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿಯಿಂದಲೂ ಬಾರ್‌ ಅಂಡ್‌ ರೆಸ್ಟೋರೆಂಟ್‌ ತೆರೆಯದಂತೆ ನಿರ್ಣಯ ಹೊರಡಿಸಿದ್ದಾಗಲೂ ಕಳ್ಳದಾರಿಯಿಂದ ಬಾರ್‌ ತೆರೆಯಲು ಪ್ರಯತ್ನಿಸಲಾಗಿದೆ ಎಂದು ದೂರಲಾಗಿದೆ. ಹೋಟೆಲ್‌ ಮಾಡುತ್ತೇವೆ ಎಂದು ಪರವಾನಗಿ ಪಡೆದು ಅಕ್ರಮವಾಗಿ ಬಾರ್‌ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಕಳೆದ ಒಂದು ತಿಂಗಳಿನಿಂದ ಸತತ ಪ್ರತಿಭಟನೆ ನಡೆಸುತ್ತಾ ಬಂದಿದ್ದರು. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗೂ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು.

“ಈ ನಡುವೆ ಬಾರ್‌ ಓಪನ್‌ ಮಾಡಿದ್ದನ್ನು ವಿರೋಧಿಸಿ ಮೂವರು ಮಹಿಳೆಯರು ಇದನ್ನು ಪ್ರಶ್ನಿಸಿ ಬಾರ್ ಒಳಗೆ ಹೋಗಿದ್ದರು. ಆ ಸಮಯದಲ್ಲಿ ಬಾರ್‌ನಲ್ಲಿದ್ದವರು ಕುಡಿದ ಅಮಲಿನಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆಯರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿ, ಕಿರುಕುಳ ನೀಡಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮದ ಮಹಿಳೆಯರು ಹಾಗೂ ಪುರುಷರು ಬಾರ್‌ಗೆ ನುಗ್ಗಿ ಪೀಠೋಪಕರಣಗಳನ್ನು ಮುರಿದುಹಾಕಿದ್ದರು. ನಂತರದಲ್ಲಿ ಕಿರುಕುಳಕ್ಕೊಳಗಾಗಿದ್ದ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು” ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿರಿ: ಅಡಿ ಇಡದಿರಿ ಗುಡಿಯೊಳಗೆ…! ದೇವಸ್ಥಾನ ಪ್ರವೇಶ ನಿಷೇಧ ಮತ್ತು ವಿರೋಧ

“ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯರನ್ನು ವಿಚಾರಣೆಗಾಗಿ ಭಾನುವಾರ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿತ್ತು. ಮಾರನೇ ದಿನ ಆರು ಗಂಟೆಗೆ ಗ್ರಾಮಕ್ಕೆ ಬಂದ ಪಿಎಸ್‌ಐ ರಮ್ಯಾ ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಮನೆಯೊಂದರ ಮೇಲಿನ ಹೆಂಚುಗಳನ್ನು ಒಡೆದುಹಾಕಿ, ಮನೆಯೊಳಗೆ ಬಾಗಿಲು ಮುರಿದು,  ನುಗ್ಗಿ ಮೂರು ಮಂದಿ ಮಹಿಳೆಯರು ಸೇರಿದಂತೆ ಐದು ಜನರನ್ನು ಪೊಲೀಸ್‌ ಠಾಣೆಗೆ ಎಳೆದೊಯ್ದರು” ಎಂದು ಗ್ರಾಮದ ಹಲವು ಮುಖಂಡರು ಆರೋಪಿಸಿದ್ದರು. ಈ ಕುರಿತಂತೆ ವಿಡಿಯೊ ಕೂಡ ವೈರಲ್‌ ಆಗಿತ್ತು. ಬಾಗಿಲು ಹಾಗೂ ಹೆಂಚು ದ್ವಂಸ ಆಗಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿತ್ತು.

ಗ್ರಾಮಸ್ಥರೆಲ್ಲರೂ ಕೂಡಿ ಕಡೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬಾರ್‌ ಮಾಲೀಕರು ಕೂಡ ಬಾರ್‌ನಲ್ಲಿ ನಡೆದಿದ್ದರ ಬಗ್ಗೆ ಪ್ರತಿದೂರು ನೀಡಿದ್ದರು. ಬಾರ್‌ ಮಾಲೀಕರ ದೂರಿನ ಆಧಾರದಲ್ಲಿ 41 ಜನರ ಮೇಲೆ ಎಫ್‌ಐಆರ್‌ ದಾಖಲಾಗಿದ್ದು ಐಪಿಸಿ ಸೆಕ್ಷನ್ 143, 144, 147, 148, 323, 324, 504, 506, 447, 427, 114, 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ನಂತರ ಮುಸ್ಲಾಪುರ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದ್ದು, ಪ್ರಕರಣದಲ್ಲಿ ಭಾಗಿಯಾದ 41 ಆರೋಪಿಗಳಲ್ಲಿ 17 ಮಹಿಳೆಯರಿದ್ದಾರೆ. ಐವರನ್ನು ಈಗಾಗಲೇ ಬಂಧಿಸಲಾಗಿದ್ದು, ಬಂಧನಕ್ಕೆ ಹೆದರಿ ಇನ್ನುಳಿದವರು ಊರು ತೊರೆದಿದ್ದಾರೆ ಎಂದು ‘ನಾನುಗೌರಿ.ಕಾಂ’ಗೆ ತಿಳಿದುಬಂದಿದೆ.

“ಕೃಷಿ ಚಟುವಟಿಕೆಗಳು ನಡೆಯಬೇಕಿದೆ. ಜನರು ಪೊಲೀಸರಿಗೆ ಹೆದರಿ ಊರು ಬಿಟ್ಟು ಹೋಗಿದ್ದಾರೆ. ಹೋರಾಟ ಹಿಂಸೆಗೆ ತಿರುಗಿದ್ದು ವಿಷಾದನೀಯ. ಸ್ಥಳೀಯ ಜನರ ಆಗ್ರಹಕ್ಕೆ ಬೆಲೆ ಇಲ್ಲದಿದ್ದಾಗ, ಈ ಘಟನೆ ನಡೆದಿದೆ” ಎನ್ನುತ್ತಾರೆ ಗ್ರಾಮದ ಕೆಲವು ಮುಖಂಡರು.

ಜನರ ವಿರುದ್ಧವಾಗಿ ಹೋಟೆಲ್‌ ಪರವಾನಗಿ ಬಳಸಿಕೊಂಡು ತೆರೆಯಲಾಗಿರುವ ಬಾರ್‌ನಲ್ಲಿ ಐದು ಜನರ ಸಹಭಾಗಿತ್ವವಿದ್ದು, ಅದರಲ್ಲಿ ಒಬ್ಬರು ಸರ್ಕಾರಿ ಅಧಿಕಾರಿಯೊಬ್ಬರ ಪತ್ನಿಯು ಇದ್ದಾರೆ ಎಂಬ ಆರೋಪಗಳಿವೆ. ಇದೇನೇ ಇರಲಿ, ನಮ್ಮೂರಿಗೆ ಬಾರ್‌ ಬೇಡ, ಊರಿನಲ್ಲಿ ಬಾರ್‌ ತೆರೆದರೆ ಇಡೀ ಊರಿನ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ದುಡಿವ ಮಹಿಳೆಯರು ಸತತ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾಗಲೂ, ಈ ಮಹಿಳೆಯರ ಅಳಲನ್ನು ಕೇಳದ ಸರ್ಕಾರವು ಜನವಿರೋಧಿಯಾಗಿದೆ ಎಂಬುದು ಜನರ ಅಭಿಪ್ರಾಯ.

ಕುಡಿತದಿಂದಾಗಿ ಮುಂದಾಗಬಹುದಾದ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಅಪಾಯವನ್ನು ಲೆಕ್ಕಿಸದೇ ಗ್ರಾಮದ ಮಹಿಳೆಯರು ಇಟ್ಟಿರುವ ಹೆಜ್ಜೆಗೆ ಪರ ವಿರೋಧದ ಅಭಿಪ್ರಾಯಗಳು ಬಂದಿವೆ. ದಾಳಿಗೆ ಪ್ರತಿದಾಳಿ ಎಂದು ಕೆಲವರು ಸಮರ್ಥಿಸಿದ್ದಾರೆ. ಕಾನೂನು ವಿರೋಧಿಯಾಗಿ ದಾಳಿ ಮಾಡಬಾರದಿತ್ತು ಎಂಬ ಅಭಿಪ್ರಾಯಗಳನ್ನು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪೊಲೀಸರು ದಾಳಿ ಮಾಡಿ ಮನೆಯ ಬಾಗಿಲು, ಹೆಂಚು ಒಡೆದಿದ್ದಾರೆ ಎಂಬುದಕ್ಕೂ ಟೀಕೆಗಳು ವ್ಯಕ್ತವಾಗಿವೆ. ಆದರೆ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿರಿ: ಬಾಗಲೂರು ಗ್ರಾಪಂ: ದಲಿತ ಅಧ್ಯಕ್ಷೆ ಕುಳಿತ ಕುರ್ಚಿ ಗೋಮೂತ್ರದಿಂದ ಶುದ್ಧೀಕರಣ: ಬಿಜೆಪಿ ದೂರು

ಪಿಎಸ್‌ಐ ರಮ್ಯಾ ಹೇಳುವುದೇನು?

ನಾನುಗೌರಿ.ಕಾಂ ಜೊತೆ ಮಾತನಾಡಿದ ಕಡೂರು ಪಿಎಸ್‌ಐ ರಮ್ಯಾ, “ಐದು ಜನರನ್ನು ಬಂಧಿಸಲಾಗಿದೆ. ಉಳಿದವರು ಸಿಕ್ಕಿಲ್ಲ. ಪೊಲೀಸರು ದೌರ್ಜನ್ಯ ಎಸಗಿಲ್ಲ. ಯಾರದೇ ಮನೆಯ ಬಾಗಿಲು, ಹೆಂಚನ್ನು ನಾವು ಒಡೆದಿಲ್ಲ. ಪೊಲೀಸರ ಮೇಲೆ ಆರೋಪ ಹೊರಿಸಲು ಮಾಡಿರುವ ಸಂಚಿನ ಕುರಿತು ಮಾತನಾಡಿರುವ ಆಡಿಯೊ ನಮಗೆ ಲಭ್ಯವಾಗಿದೆ” ಎಂದರು.

ಪಿಎಸ್‌ಐ ರಮ್ಯಾ

“ಬಾಗಿಲನ್ನು ಎತ್ತಿದರೆ ಅದಾಗಿಯೇ ತೆರೆದುಕೊಳ್ಳುತ್ತದೆ. ಇದರ ವಿಡಿಯೊವನ್ನು ಜೆಸಿಬಿ ಮಂಜ ಮಾಡಿ, ಎಂಟು ಹತ್ತು ಹೆಂಚು ಒಡೆದು ಹಾಕಿ ಘಟನೆಯನ್ನು ಪೊಲೀಸರ ಮೇಲೆ ರೂಪಿಸಲಾಗಿದೆ” ಎಂದು ಇಬ್ಬರು ವ್ಯಕ್ತಿಗಳು ಮಾತನಾಡಿರುವ ಆಡಿಯೊದಲ್ಲಿನ ಸಾರಾಂಶ. ಆದರೆ ಆ ಆಡಿಯೊದಲ್ಲಿ ಮಾತನಾಡಿದವರು ಯಾರೆಂಬ ಮಾಹಿತಿ ಸಿಕ್ಕಿಲ್ಲ. ಉದ್ದೇಶಪೂರ್ವಕವಾಗಿಯೇ ಈ ಆಡಿಯೊವನ್ನು ಮಾಡಿ ಹರಿಬಿಡಲಾಗಿದೆಯೇ, ಪೊಲೀಸರಿಂದ ದೌರ್ಜನ್ಯವಾಗಿಲ್ಲವೆ ಎಂಬುದು ತನಿಖೆಗಳಿಂದ ತಿಳಿಯಬೇಕಿದೆ.

“ಹೆಂಚು ತೆಗೆದು ಒಳಗೆ ನುಗ್ಗುವಷ್ಟು ಕ್ರೂರಿಗಳು ನಮ್ಮಲ್ಲಿ ಯಾರೂ ಇಲ್ಲ. ಬಾರ್ ಇರಬೇಕೋ, ಬೇಡವೋ ಎಂಬುದನ್ನು ಸಂಬಂಧಪಟ್ಟವರು ನಿರ್ಧರಿಸುತ್ತಾರೆ. ಹಲ್ಲೆ ನಡೆಸಿದ್ದಾರೆಂದು ದೂರು ಬಂದಿದೆ. ಸಾಕ್ಷ್ಯಾಧಾರಗಳಿವೆ. ಪ್ರಕರಣ ದಾಖಲಿಸಿದ್ದೇವೆ. ಬಾರ್‌ ಪರವಾಗಿ ಪೊಲೀಸರು ನಿಲ್ಲಲು ಆ ಬಾರ್‌‌ ನನ್ನದೂ ಅಲ್ಲ, ನಮ್ಮಪ್ಪನ್ನದ್ದೂ ಅಲ್ಲ. ಯಾವನೋ ಬಾರ್‌ ಮಾಡಿಕೊಂಡಿದ್ದಾನೆ. ಅದಕ್ಕೂ ನನಗೂ ಸಂಬಂಧವಿಲ್ಲ. ಜನರು ಬಾರ್‌ ವಿರುದ್ಧ ಹೋರಾಟ ಮಾಡಿದಾಗ ನಾವು ರಕ್ಷಣೆ ನೀಡಿದ್ದೇವೆ. ಒಂದು ವಾರ ಬಂದೋಬಸ್ತ್‌ ಮಾಡಿದ್ದೇವೆ. ಬಾರ್‌ ಪರವಾಗಿದ್ದರೆ ನಾವು ಅಂದೇ ಪ್ರಕರಣ ದಾಖಲು ಮಾಡಬಹುದಿಲ್ಲತ್ತ?” ಎಂದು ಕೇಳುತ್ತಾರೆ ಪಿಎಸ್‌ಐ ರಮ್ಯಾ.

“ಡಿಸಿಗೆ ಮನವಿ ಕೊಡಿ, ಅಲ್ಲಿ ಪರಿಹಾರ ಸಿಗುತ್ತೆ. ಇಲ್ಲಿ ಪ್ರತಿಭಟನೆ ನಡೆಸಿದರೆ ಪರಿಹಾರ ಆಗಲ್ಲ ಎಂದು ನಾವೇ ಸಲಹೆ ನೀಡಿದ್ದೇವೆ. ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಬಾರ್‌ ಕಾನೂನಾತ್ಮಕವಾಗಿ ಇದೆ ಅನಿಸುತ್ತೆ. ಯಾವುದೇ ಕ್ರಮಗಳನ್ನು ಸಂಬಂಧಪಟ್ಟವರು ಜರುಗಿಸಿಲ್ಲ. ಈಗ‌ ಹೋಟೆಲ್ ತೆರೆದಿದ್ದಾರೆ. ಜನರು ದಾಳಿ ಮಾಡಿದ್ದಾರೆ. ಪೊಲೀಸ್‌ ಅರೆಸ್ಟ್‌ ಮಾಡಿದ್ದನ್ನೇ ದೌರ್ಜನ್ಯ ಎನ್ನಲು ಆಗುತ್ತದೆಯೇ? ಪ್ರಕರಣ ದಾಖಲಾದ ಮೇಲೆ ಬಂಧನದ ಭೀತಿಯಲ್ಲಿ ಕೆಲವರು ತಪ್ಪಿಸಿಕೊಂಡಿದ್ದಾರೆ. ಅಂದು ಬಂಧಿಸಲು ಹೋದಾಗ ಬಾಗಿಲು ಬಡಿದಿದ್ದೇವೆ. ಅವರೇ ಡೋರ್‌ ಓಪನ್‌ ಮಾಡಿದ್ದಾರೆ. ಮರು ಮಾತನಾಡದೆ ನಮ್ಮೊಂದಿಗೆ ಬಂದಿದ್ದಾರೆ. ಡೋರ್‌ ಆಗಲಿ, ಹೆಂಚು ಒಡೆದು, ಬಾಗಿಲು ಒಡೆದು ಒಳಗೆ ಹೋಗುವಷ್ಟು ನಾವು ಕ್ರೂರಿಗಳಲ್ಲ” ಎಂಬುದು ಪಿಎಸ್‌ಐ ಪ್ರತಿಕ್ರಿಯೆ.

“ಬಾರ್‌‌ನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಈ ರೀತಿಯ ಗಲಾಟೆಯಾಗಿದೆ ಎಂದು ದೂರು ನೀಡಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರನ್ನು ನೀವು ಬಂದಿಸಿದ್ದೀರಾ?” ಎಂದು ಪ್ರಶ್ನಿಸಿದಾಗ, “ದೌರ್ಜನ್ಯಕ್ಕೆ ಒಳಗಾಗಿದವರು ಬಾರ್‌ ಕೆಲಸಗಾರರು ಎಂಬುದಕ್ಕೆ ಸಾಕ್ಷಿಗಳಿವೆ. ಆದರೆ ಬಾರ್‌ನವರಿಂದ ಆಗಿದೆ ಎನ್ನಲಾದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಸಿಕ್ಕಿರುವ ಸಾಕ್ಷಿಗಳ ಮೇಲೆ ಕ್ರಮ ಜರುಗಿಸಲಾಗಿದೆ” ಎಂದು ಪಿಎಸ್‌ಐ ತಿಳಿಸಿದರು.


ಇದನ್ನೂ ಓದಿರಿ: ಮಂಗಳೂರಿನಲ್ಲಿ ಮತೀಯ ಗೂಂಡಾಗಿರಿ: ಅನ್ಯಧರ್ಮದ ಗೆಳತಿಯನ್ನು ಡ್ರಾಪ್ ಮಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...