ಒಂದು ವರ್ಷಗಳ ಕಾಲ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ ರೈತರಿಗೆ ಕೊನೆಗೂ ಜಯ ಸಿಕ್ಕಿದೆ. ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ, ರೈತರ ಹೋರಾಟಕ್ಕೆ ಮಣಿದಿದೆ. ಮುಂದಾಗುವ ಅನಾಹುತಗಳಿಗೆ ಬೆಚ್ಚಿ, ಒಂದು ವರ್ಷದ ಬಳಿಕ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದೆ.
ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು. ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿರುವ ರೈತರು ಮನೆಗೆ ಹಿಂತಿರುಗಬೇಕು” ಎಂದು ಮನವಿ ಮಾಡಿದ್ದಾರೆ.
ಒಂದು ವರ್ಗದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ ಎಂದು ನಾನು ದೇಶವಾಸಿಗಳಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಪ್ರಧಾನಿ ತಿಳಿಸಿದ್ದಾರೆ. ಹೊಸ ಕ್ರಮಗಳನ್ನು ಅನುಸರಿಸಲು ಪ್ರಧಾನಿ ಮುಂದಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಹೋರಾಟಕ್ಕೆ ಜಯ
“ಒಂದು ವರ್ಷದ ಬಳಿಕ ಗೆದ್ದಿದ್ದೇವೆ. ಮೂರು ವಿವಾದಿತ ಕಾಯ್ದೆಗಳನ್ನು ವಾಪಸ್ ಪಡೆಯಲು ಮೋದಿ ಸರ್ಕಾರ ನಿರ್ಧರಿಸಿದೆ. ಇದು ರೈತರಿಗೆ ಸಂದ ಗೆಲುವು” ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
“ಸತ್ಯಾಗ್ರಹದ ಮೂಲಕ ದೇಶದ ಅನ್ನದಾತರು ದುರಹಂಕಾರಿಗಳ ತಲೆ ತಗ್ಗಿಸಿದ್ದಾರೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು! ಜೈ ಹಿಂದ್, ಜೈ ಹಿಂದ್ ರೈತ!” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
देश के अन्नदाता ने सत्याग्रह से अहंकार का सर झुका दिया।
अन्याय के खिलाफ़ ये जीत मुबारक हो!जय हिंद, जय हिंद का किसान!#FarmersProtest https://t.co/enrWm6f3Sq
— Rahul Gandhi (@RahulGandhi) November 19, 2021
“ರೈತರ ಪ್ರತಿಭಟನೆ, ನಿಜವಾದ ಜನಾಂದೋಲನಕ್ಕೆ ಜಯ ಸಿಕ್ಕಿದೆ. 750ಕ್ಕೂ ಹೆಚ್ಚು ಜೀವಗಳನ್ನು ಕಳೆದುಕೊಂಡು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ನಮ್ಮ ರೈತರಿಗೆ ಹರ್ಷೋದ್ಗಾರ. ನಿಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ! ಮುಂಬರುವ ಯುಪಿ, ಪಂಜಾಬ್ ಚುನಾವಣೆಗಳು ಕಾರ್ಪೊರೇಟ್ ಗೂಂಡಾ ಬಿಜೆಪಿ ಸರ್ಕಾರವನ್ನು ಹಿಮ್ಮೆಟ್ಟಿಸಿದೆ” ಎಂದು ಚಿಂತಕಿ ಮೀನಾ ಕಂದಸ್ವಾಮಿ ಟ್ವೀಟ್ ಮಾಡಿದ್ದಾರೆ.
The farmers protest, a genuine mass movement, has won. Cheering our farmers who carried on protesting peacefully, losing more than 750 lives. Your struggle has won! Upcoming UP, Punjab elections have made corporate stooge BJP Govt backtrack. ?✊?#FarmLaws https://t.co/l6Lv3JTLj6 pic.twitter.com/pIAjUmaAaT
— Dr Meena Kandasamy ¦¦ இளவேனில் மீனா கந்தசாமி (@meenakandasamy) November 19, 2021
ಇದನ್ನೂ ಓದಿರಿ: ಅಖಿಲೇಶ್ ಯಾದವ್ ’ಚಿಲ್ಲಂಜೀವಿ’ ಹೇಳಿಕೆ: ಕ್ಷಮೆಗೆ ಒತ್ತಾಯಿಸಿದ ಅಖಿಲ ಭಾರತೀಯ ಸಂತ ಸಮಿತಿ


